ಪಕ್ಷ ಹಗಲು ರಾತ್ರಿ ಕಟ್ಟಿ ಬೆಳೆಸಿದವರಲ್ಲಿ ನಾನೂ ಒಬ್ಬ, ನನ್ನ ಯಾರೂ ಕಡೆಗಣಿಸಿಲ್ಲ: ಯಡಿಯೂರಪ್ಪ
Team Udayavani, Dec 15, 2022, 11:56 AM IST
ಕೊಪ್ಪಳ: ಬಿಜೆಪಿ ಪಕ್ಷ ಹಗಲು ರಾತ್ರಿ ಕಟ್ಟಿ ಬೆಳೆಸಿದವೆಲ್ಲಿ ನಾನೂ ಒಬ್ಬ, ನನ್ನನ್ನು ಯಾರೂ ಕಡೆಗಣಿಸಿಲ್ಲ. ನನ್ನ ಕಡೆಗಣಿಸಲಾಗಿದೆ ಎನ್ನುವ ಮಾತಿಗೆ ಅರ್ಥವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಕೊಪ್ಪಳ ಸಮೀಪದ ಖಾಸಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ಹಗಲು ರಾತ್ರಿ ಕಷ್ಟಪಟ್ಟು ಕಟ್ಟಿದವರಲ್ಲಿ ನಾನೂ ಒಬ್ಬ. ಇದರಲ್ಲಿ ನನ್ನನ್ನು ಕಡೆಗಣಿಸಲಾಗಿದೆ ಎನ್ನುವ ಮಾತುಗಳಿಗೆ ಅರ್ಥವಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಒಂದಾಗಿದ್ದೇವೆ. ನಮ್ಮ ಒಂದೇ ಗುರಿ ಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವಂತದ್ದಾಗಿದೆ ಎಂದರು.
ನನ್ನನ್ನು ಈ ಸಮಾವೇಶಕ್ಕೆ ಆಹ್ವಾನ ನೀಡಿಲ್ಲ ಎನ್ನುವಂತಹ ಮಾತಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಆಗಮಿಸುವ ಹಿನ್ನೆಲೆಯಲ್ಲಿ ನಾನು ಎಲ್ಲ ಕಾರ್ಯಕ್ರಮ ರದ್ದು ಪಡಿಸಿ ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿರುವೆ. ಇಲ್ಲಿ ನನ್ನ ಯಾರೂ ಕಡೆಗಣನೆ ಮಾಡಿಲ್ಲ ಎಂದರು.
ಕೊಪ್ಪಳಕ್ಕೆ ಬಿಜೆಪಿ ರಾಷ್ತ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಆಗಮಿಸುತ್ತಿದ್ದಾರೆ. ಹಾಗಾಗಿ ನಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಜೆ ಪಿ ನಡ್ಡಾ ನೇತೃತ್ವದಲ್ಲಿ ಮತ್ತೊಮ್ಮೆ ಕರ್ನಾಟಕದಲ್ಲಿ 150 ಹೆಚ್ಚು ಬಿಜೆಪಿ ಸ್ಥಾನಗಳ ಗೆಲ್ಲಲಿದ್ದು, ಮತ್ತೆ ಸರ್ಕಾರ ರಚನೆ ಮಾಡುವುದು ನಿಶ್ಚಿತ. ಸೂರ್ಯ ಚಂದ್ರ ಇರುವುದು ಏಷ್ಟು ಸತ್ಯವೋ ಅಷ್ಟೇ ನಾವು ಅಧಿಕಾರಕ್ಕೆ ಬರುವಂತದ್ದು, ಕೆಲವರು ಈಗಾಗಲೇ ನಾನು ಮುಖ್ಯಮಂತ್ರಿಯಾದೆ ಎಂದು ಕನಸು ಕಾಣುತ್ತಿದ್ದು ಅದು ಅವರ ತಿರುಕನ ಕನಸಾಗಿದೆ. ಅವರ ಕನಸು ಈಡೇರಲ್ಲ. ಬಿಜೆಪಿ ಒಗ್ಗಟ್ಟಾಗಿದೆ. ಸಂಘಟಿತವಾಗಿದೆ. ನಾವೆಲ್ಲರೂ ಸೇರಿ ಈ ಬಾರಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಅದಕ್ಕಾಗಿ ನಾವೆಲ್ಲ ಸೇರಿ ಈ ಭಾಗದಲ್ಲಿ ಜನರ ಆಶೀರ್ವಾದ ಒಡೆಯಲು ಬಂದಿದ್ದೇವೆ. ಈ ಭಾಗದಲ್ಲಿ ಪಕ್ಷದ ಮುಖಂಡರು ಕಷ್ಟಪಟ್ಟು ಪಕ್ಷ ಕಟ್ಟುತ್ತಿದ್ದಾರೆ ಎಂದರು.
ಇದನ್ನೂ ಓದಿ:‘ಸರಿಯಾಗಿ ರಿಸರ್ಚ್ ಮಾಡಿ…’: ಕಾಂತಾರ ವಿಚಾರದಲ್ಲಿ ಕಶ್ಯಪ್- ಅಗ್ನಿಹೋತ್ರಿ ನಡುವೆ ಟ್ವೀಟ್ ಸಮರ
ಜನಾರ್ದನ ರೆಡ್ಡಿ ಅವರು ನನಗೆ ಸಿಕ್ಕಿದ್ದರು. ಅವರೊಟ್ಟಿಗೆ ಮಾತನಾಡಿದ್ದೇನೆ. ಪಕ್ಷದ ನಾಯಕರ ಜೊತೆ ಮಾತನಾಡಲಿದ್ದಾರೆ. ಅವರ ಮೇಲೆ ಸಣ್ಣ ಪುಟ್ಟ ಕೇಸ್ ಇವೆ. ಅವುಗಳು ಬಗೆ ಹರಿದ ಮೇಲೆ ಅವರು ನಮ್ಮ ಪಕ್ಷದಲ್ಲೇ ಇರ್ತಾರೆ. ನಮ್ಮ ಜೊತೆಗೆ ಅವರು ಪಕ್ಷ ಕಟ್ಟುವ ಕಡಿಮೆ ಕೆಲಸ ಮಾಡಲಿದ್ದಾರೆ. ಅವರು ಗಂಗಾವತಿಯಲ್ಲಿ ಮನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇವೆಲ್ಲ ಗೊಂದಲ ಉಂಟಾಗಿವೆ. ಅವರು ಏಲ್ಲಿ ಸ್ಪರ್ಧೆ ಮಾಡಬೇಕು ಎಂದು ಪಕ್ಷ ನಿರ್ಧಾರ ಮಾಡುತ್ತದೆ. ಅವರನ್ನು ನಾವು ಉಪಯೋಗ ಮಾಡಿಕೊಳ್ಳುತ್ತೇವೆ. ಅವರಿಗೂ ಈ ಭರವಸೆ ಕೊಟ್ಟಿದ್ದೇನೆ. ಪಕ್ಷದ ನಾಯಕರೂ ಈ ಬಗ್ಗೆ ತೀರ್ಮಾನ ಕೈಗೊಳ್ತಾರೆ ಎಂದರು.
ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರ, ಈ ರೀತಿ ಹೇಳುವ ಮೂಲಕ ಪ್ರಸಿದ್ದಿ ಪಡೆಯುತ್ತೇನೆ ಎನ್ನುವ ಭ್ರಮೆಯಲ್ಲಿ ಹೇಳಿಕೆ ನೀಡಿದ್ದಾರೆ. ಮೂರು ನಾಲ್ಕು ಬಾಗಿಲು ಎಲ್ಲಿದೆ ಎನ್ನುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರೆಲ್ಲರನ್ನು ಒಂದು ಮಾಡಲು ಹರ ಸಾಹಸ ಪಡುತ್ತಿದ್ದಾರೆ. ತಾವು ತಮ್ಮ ಮನೆಯನ್ನ ರಿಪೇರಿ ಮಾಡಿಕೊಳ್ಳುವುದು ಬಿಟ್ಟು ನಾವೆಲ್ಲ ಒಗ್ಗಟ್ಟಾಗಿದ್ದವರ ಬಗ್ಗೆ ಮಾತನಾಡಿ ತಮ್ಮ ದೌರ್ಬಾಗ್ಯ ತೋರುತ್ತಿದ್ದಾರೆ. ಅವರು ನಮ್ಮ ಬಗ್ಗೆ ಇದೇ ರೀತಿ ಮಾತನಾಡುತ್ತಾ ಇರಲಿ. ನಾವು ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಬಸ್ ಯಾತ್ರೆ ಅದು ಅವರಿಗೆ ಬಿಟ್ಟಿದ್ದು ಆ ಪಕ್ಷದ ಬಗ್ಗೆ ನಾನು ಮಾತನಾಡಲ್ಲ ಎಂದರಲ್ಲದೇ, ನಾನು ಸಿಂ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೊರ ಬಂದು ನಾನೊಬ್ಬ ಸಾಮಾನ್ಯ ಕಾರ್ಯಕರ್ತನ ತರ ಪಕ್ಷ ಕಟ್ಟು ಕೆಲಸ ಮಾಡುತ್ತಿದ್ದೇನೆ. ನಾನು ಸಿಎಂ ಆಗಿದ್ದಾಗ ತೋರುವ ಗೌರವ ಈಗಲೂ ತೋರುತ್ತಿದ್ದಾರೆ. ನನ್ನ ಆಸೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದಾಗಿದೆ ಎಂದರು.
ವಿಜಯೇಂದ್ರ ಅವರ ಸ್ಪರ್ಧೆ ವಿಚಾರ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೋ ಅಲ್ಲಿಂದ ಅವರು ಅಲ್ಲಿಂದ ಸ್ಪರ್ಧೆ ಮಾಡ್ತಾರೆ. ಪಕ್ಷದ ತೀರ್ಮಾನ ಅಂತಿಮವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.