ಕುಷ್ಟಗಿ: ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಡಿ.19ರಂದು ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ
Team Udayavani, Dec 15, 2022, 3:43 PM IST
ಕುಷ್ಟಗಿ: ಬೆಳಿಗ್ಗೆ ಕಿಡದೂರನಿಂದ ಟೆಂಗುಂಟಿ ಮೂಲಕ ಕುಷ್ಟಗಿಗೆ ಹಾಗೂ ಸಂಜೆ ಕುಷ್ಟಗಿಯಿಂದ ಕಿಡದೂರಿಗೆ ಒಂದೇ ಬಸ್ಸಿನಲ್ಲಿ ಜೀವ ಪಣಕ್ಕಿಟ್ಟು ಜೋತು ಬಿದ್ದು ಬಸ್ ಹತ್ತುವ ಅನಿವಾರ್ಯತೆ ಸೃಷ್ಟಿಸಿದೆ. ಈ ಬೆಳವಣಿಗೆಯಿಂದ ವಿದ್ಯಾರ್ಥಿಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂಬುದು ಟೆಂಗುಂಟಿ ಗ್ರಾಮದ ವಿದ್ಯಾರ್ಥಿಗಳ ಅಳಲು.
ಈ ಗ್ರಾಮದ ವಿದ್ಯಾರ್ಥಿಗಳು ಕುಷ್ಟಗಿ ತಾಲೂಕು ಕೇಂದ್ರಕ್ಕೆ ಬಸ್ ನಲ್ಲಿ ನಿತ್ಯ ಹೋಗಿ, ಬರಲು ಹೋಗಲು ಸರ್ಕಸ್ ಮಾಡಲೇಬೇಕಿದೆ. ಈ ಬಸ್ ನಲ್ಲಿ ವಿದ್ಯಾರ್ಥಿಗಳ್ಯಾರು ಸೀಟ್ ನಲ್ಲಿ ಕುಳಿತು ಪ್ರಯಾಣಿಸಿದ ಉದಾಹರಣೆಯೇ ಇಲ್ಲ. ಸಂಪೂರ್ಣ ತುಂಬಿಕೊಂಡಿರುವ ಬಸ್ಸಿನಲ್ಲಿ ಎಲ್ಲರೂ ನಿಂತುಕೊಂಡೆ ಪ್ರಯಾಣಿಸಬೇಕಿದೆ.
ಇಂತಹ ಸಂದರ್ಭದಲ್ಲಿ ಬಹುತೇಕ ವಿದ್ಯಾರ್ಥಿಗಳು ಬಸ್ ಹತ್ತದೇ ಉಳಿಯುತ್ತಿದ್ದು, ಶಾಲಾ-ಕಾಲೇಜು ದೈನಂದಿನ ತರಗತಿ ತಪ್ಪಲು ಬಸ್ ಅವ್ಯವಸ್ಥೆ ಕಾರಣವಾಗಿದೆ ಎಂಬುದು ವಿದ್ಯಾರ್ಥಿಗಳ ದೂರು.
ಶಾಲಾ-ಕಾಲೇಜು ಸೇರಿದಂತೆ 125ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗಾಗಿ ಹಾಗೂ ಇತರ ಸಾರ್ವಜನಿಕರಿಗಾಗಿ ಟೆಂಗುಂಟಿ ಗ್ರಾಮಕ್ಕೆ ಪ್ರತ್ಯೇಕ ಬಸ್ಸಿನ ಅವಶ್ಯಕತೆ ಇದೆ. ಹೆಚ್ಚುವರಿ ಬಸ್ ಸೇವೆ ಕಲ್ಪಿಸಲು ವಿದ್ಯಾರ್ಥಿಗಳು ಹೋರಾಟ, ಪ್ರತಿಭಟನೆ ನಡೆಸಿ, ಬಸ್ ಡಿಪೋ ವ್ಯವಸ್ಥಾಪಕರ ಹಾಗೂ ಶಾಸಕರ ಗಮನಕ್ಕೆ ತಂದರೂ ಪೊಲೀಸ್ ಠಾಣೆಯ ಮೆಟ್ಟಿಲು ಏರಿದರೂ ಏನೂ ಪ್ರಯೋಜನವಾಗಿಲ್ಲ.
ಹೆಚ್ಚು ಮಾತಾಡಿದರೆ ಎಫ್ಐಆರ್:
ಇದು ಸಾಲದು ಎಂಬಂತೆ ನಿರ್ವಾಹಕರು ವಿದ್ಯಾರ್ಥಿಗಳನ್ನು ಕೀಳಾಗಿ ಕಾಣುತ್ತಿದ್ದು, ವಿದ್ಯಾರ್ಥಿಗಳಿಗೆ ಬಾಯಿಗೆ ಬಂದಂತೆ ಬಯ್ಯುವುದು ಸಾಮಾನ್ಯವಾಗಿದೆ. ಗುರುವಾರ ನಿರ್ವಾಹಕಿಯೊಬ್ಬರು ಹೆಚ್ಚು ಮಾತನಾಡಿದರೆ ಎಫ್.ಐ.ಆರ್. ಹಾಕಿಸುತ್ತೇನೆ ಎಂದು ಗದರಿಸುತ್ತಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದರು.
ಟೆಂಗುಂಟಿ ರಸ್ತೆಯಲ್ಲಿರುವ ಪಾಲಿಟೆಕ್ನಿಕ್ ಕಾಲೇಜು ಬಳಿ ಬಸ್ ನಿಲುಗಡೆ ಇದ್ದರೂ ಕೆಲವೊಮ್ಮೆ ನಿಲ್ಲಿಸುತ್ತಾರೆ, ಕೆಲವೊಮ್ಮೆ ನಿಲ್ಲಿಸುವುದಿಲ್ಲ. ಪ್ರಶ್ನಿಸಿದರೆ ಅವಾಚ್ಯವಾಗಿ ನಿಂದಿಸುತ್ತಾರೆ. ನಿರ್ವಾಹಕಿಯೊಬ್ಬರು ಬಸ್ಸಿನಲ್ಲಿರುವ ಬ್ಯಾಗ್ ಹಾಗೂ ಬಸ್ ಪಾಸ್ ನ್ನು ಹೊರಕ್ಕೆ ಎಸೆದು ಅವಮಾನಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಈ ಮಾರ್ಗಕ್ಕೆ ಹೆಚ್ಚುವರಿ ಬಸ್ ಸೇವೆ ಕಲ್ಪಿಸುವಂತೆ ಒತ್ತಾಯಿಸಿ ಡಿ.19 ರಂದು ಟೆಂಗುಂಟಿ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.