ಸಾತ್ವಿಕ ಆಹಾರ, ಪ್ರಾಣ ಆಧರಿತ ಪರಿಹಾರಗಳ ಕುರಿತು ಸಂಶೋಧನೆ
Team Udayavani, Dec 16, 2022, 7:40 AM IST
ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯದ ಇಂಡಿಯನ್ ನಾಲೆಡ್ಜ್ ಸಿಸ್ಟಂ (ಐಕೆಎಸ್) ವಿಭಾಗವು ತನ್ನ “ಸ್ಪರ್ಧಾತ್ಮಕ ಸಂಶೋಧನಾ ಪ್ರಸ್ತಾಪ ಕಾರ್ಯಕ್ರಮ’ದ 2ನೇ ಆವೃತ್ತಿಯಡಿ ಸಂಶೋಧನಾ ಪ್ರಸ್ತಾವನೆಗಳನ್ನು ಆಹ್ವಾನಿಸಿದ್ದು, ಆರೋಗ್ಯ, ಕ್ಷೇಮಾಭಿವೃದ್ಧಿ, ವಸ್ತು ವಿಜ್ಞಾನ, ಲೋಹಶಾಸ್ತ್ರ, ರಾಜಕೀಯ, ಅರ್ಥಶಾಸ್ತ್ರ ಸೇರಿದಂತೆ ಒಟ್ಟು 9 ವಲಯಗಳಡಿ ಈ ಸಂಶೋಧನೆಗಳು ನಡೆಯಲಿವೆ.
ಪ್ರಸ್ತುತ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಅರ್ಥಶಾಸ್ತ್ರದ ಅನ್ವಯಿಸುವಿಕೆ, ಮನುಷ್ಯನ ಕರುಳಿನ ಮೇಲೆ ಸಾತ್ವಿಕ ಆಹಾರಗಳು ಬೀರುವಂಥ ಪರಿಣಾಮವೇನು, ಮನುಷ್ಯರಲ್ಲಿನ ಆತ್ಮಹತ್ಯೆಯ ಮನೋಭಾವವನ್ನು ಕಡಿಮೆ ಮಾಡಲು ಉಸಿರು ಆಧರಿತ ವೈದಿಕ ಪರಿಹಾರಗಳೇನು ಸೇರಿದಂತೆ ಸಂಶೋಧನೆ ಮಾಡಲು ಒಟ್ಟು 28 ವಿಚಾರಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ರಿಸರ್ಚ್ ಪ್ರಾಜೆಕ್ಟ್ಗಳಿಗೆ 2 ವರ್ಷಗಳ ಕಾಲ ಕೇಂದ್ರ ಸರ್ಕಾರವೇ 20 ಲಕ್ಷ ರೂ.ಗಳಷ್ಟು ಹಣಕಾಸು ನೆರವು ನೀಡಲಿದೆ.
ಒಟ್ಟು 450 ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು. ಸೂಕ್ತ ಪರಿಶೀಲನೆಯ ಬಳಿಕ ಸರ್ಕಾರವು 28 ಅನ್ನು ಆಯ್ಕೆ ಮಾಡಿದೆ. ಪ್ರಸ್ತುತ ಮತ್ತು ಭವಿಷ್ಯದ ಸಮಸ್ಯೆಗಳನ್ನು ಪರಿಹರಿಸಲು ಪ್ರಾಚೀನ ಭಾರತದ ಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಅರಿಯುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಆಯ್ಕೆಯಾದ ಸಂಶೋಧನಾ ಪ್ರಸ್ತಾಪಗಳು:
– ಮಾನವನ ಕರುಳಿನ ಮೇಲೆ ಸಾತ್ವಿಕ ಆಹಾರ ಬೀರುವ ಪರಿಣಾಮ
– ಆತ್ಮಹತ್ಯೆ ಆಲೋಚನೆಗಳನ್ನು ತಗ್ಗಿಸಲು ಪ್ರಾಣ(ಉಸಿರು) ಆಧಾರಿತ ವೈದಿಕ ಪರಿಹಾರಗಳು
– ವಿದ್ಯಾರ್ಥಿಗಳು, ಯುವಕರ ಕ್ಷೇಮಾಭಿವೃದ್ಧಿ ಮೇಲೆ ಪ್ರಾಣಾಯಾಮ ಮತ್ತು ಶ್ಲೋಕಗಳ ಪಠಣವು ಬೀರುವ ಪರಿಣಾಮ
– ರಾಮಾಯಣ, ಮಹಾಭಾರತ ಮತ್ತು ಅರ್ಥಶಾಸ್ತ್ರದ ರಾಜಕೀಯ ಪರಿಕಲ್ಪನೆಗಳು
– ಆರ್ಥಿಕ ಬೆಳವಣಿಗೆಯಲ್ಲಿ ಕೌಟುಂಬಿಕ ಉಳಿತಾಯದ ಪಾತ್ರ
20 ಲಕ್ಷ ರೂ. – ಆಯ್ಕೆಯಾದ ರಿಸರ್ಚ್ ಪ್ರಾಜೆಕ್ಟ್ ಗೆ 2 ವರ್ಷಗಳ ಕಾಲ ಸಿಗುವ ಮೊತ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು… ಸುನಿಲ್ ಆರೋಪ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.