ಗಾಲಿ ಜನಾರ್ದನ ರೆಡ್ಡಿಗೆ 101 ಟಗರುಗಳನ್ನು ಉಡುಗೊರೆ ಕೊಡಲು ಕಾಯುತ್ತಿರುವ ಅಭಿಮಾನಿ!
ಚಂಚಲಗೂಡ ಜೈಲಿಗೂ ಭೇಟಿಗೆ ತೆರಳಿದ್ದ ಅಭಿಮಾನಿ
Team Udayavani, Dec 15, 2022, 8:14 PM IST
ಗಂಗಾವತಿ: ಗಂಗಾವತಿಯಲ್ಲಿ ಮನೆ ಮಾಡಿ ಚುನಾವಣಾ ಆಖಾಡ ಸಿದ್ದಗೊಳಿಸಿಕೊಂಡಿರುವ ಬಳ್ಳಾರಿ ಗಣಿ ಧಣಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಭಿಮಾನಿಯೊಬ್ಬ 101 ಟಗರುಗಳನ್ನು ಉಡುಗೊರೆಯಾಗಿ ನೀಡಲು ಉತ್ಸುಕರಾಗಿದ್ದು, ಡಿ.21 ರಂದು ಮನೆಗೆ ಆಗಮಿಸುವ ರೆಡ್ಡಿಯವರಿಗೆ ಒಂದು ಟಗರನ್ನು ಕೊಡಲು ನಿರ್ಧರಿಸಿರುವುದಾಗಿ ರಡ್ಡಿ ಅಭಿಮಾನಿ ಯಮನೂರ ಪುಂಡಗೌಡ ತಿಳಿಸಿದ್ದಾರೆ.
ನಗರದ ಕೃಷ್ಣ ಹೋಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪುಂಡಗೌಡ, ರೆಡ್ಡಿಯವರು ಜನಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮ ಮಾಡಿದ್ದಾರೆ. ಇಡೀ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗಿದ್ದರು. ಹಂಪಿ ಉತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಿದ ಸಂದರ್ಭದಲ್ಲಿ ವಿಜಯನಗರ ಮೂಲ ರಾಜಧಾನಿ ಆನೆಗೊಂದಿಯಲ್ಲಿಯೂ ಆಚರಣೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದೀಗ ಕಿಷ್ಕಿಂಧಾ ಅಂಜನಾದ್ರಿಯ ಪುಣ್ಯ ಭೂಮಿ ಗಂಗಾವತಿಯಲ್ಲಿ ಶುಭ ಗಳಿಗೆಯಲ್ಲಿ ಮನೆ ಮಾಡಿ ಮುಂಬರುವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿರುವುದರಿಂದ ಗಂಗಾವತಿಯನ್ನು ಅಭಿವೃದ್ಧಿಯ ತಾಣವಾಗಿಸಲು ಇವರ ಅಭಿಮಾನಿಯಾಗಿ ಡಿ.21 ರಂದು ಗಂಗಾವತಿಗೆ ಆಗಮಿಸುವ ರಡ್ಡಿಯವರಿಗೆ ಒಂದು ಟಗರನ್ನು ಕಾಣಿಕೆಯಾಗಿ ನೀಡುತ್ತಿದ್ದು ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನದಂದು 100 ಟಗರು ಕಾಣಿಕೆ ನೀಡಲಾಗುತ್ತದೆ ಎಂದರು.
ನಾನು ಕಳೆದ 18 ವರ್ಷಗಳಿಂದ ರೆಡ್ಡಿ ಅಭಿಮಾನಿಯಾಗಿದ್ದು ಷಡ್ಯಂತ್ರ ನಡೆಸಿ ಹೈದ್ರಾಬಾದ್ ನ ಚಂಚಲಗೂಡ ಜೈಲಿನಲ್ಲಿದ್ದಾಗ ಕ್ಷೇಮ ವಿಚಾರಣೆ ಮಾಡಲು ತೆರಳಿದಾಗ ಪೊಲೀಸರು ಅವಕಾಶ ನೀಡಿರಲಿಲ್ಲ. ರೆಡ್ಡಿ ಆಗಮನದಿಂದ ಗಂಗಾವತಿ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯ ಬಾಗಿಲು ತೆರೆದಂತೆ ಆಗಿದೆ. ರೆಡ್ಡಿಯವರನ್ನು ಬರೀ ದುಡ್ಡಿನಿಂದ ನೋಡದೇ ಅವರ ಮುಂದಾಲೋಚನೆಯ ಯೋಜನೆಗಳ ಕುರಿತು ಜನತೆ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ರೆಡ್ಡಿಯವರಿಗೆ ಸೂಕ್ತ ಸ್ಥಾನಮಾನ ಜತೆಗೆ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡುವ ಅವಕಾಶ ಕಲ್ಪಿಸಿದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳುತ್ತಿರುವ 150 ಸ್ಥಾನಗಳು ಬಿಜೆಪಿ ಗೆಲ್ಲಲು ಸಾಧ್ಯವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಎಸ್.ಮಲ್ಲೇಶಪ್ಪ, ನಾಗರಾಜ ನಂದಿಹಳ್ಳಿ, ಗುಡ್ಡೆಕಲ್ ಹನುಮೇಶ ನಾಯಕ, ಹನುಮೇಶ ಹೊಸಳ್ಳಿ, ಬಿಜೆಪಿಯ ಶಂಬಣ್ಣ ದೊಡ್ಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.