ಪಿಎಂ ಕಿಸಾನ್ ರೈತರಿಗೆ ವರದಾನ
Team Udayavani, Dec 16, 2022, 6:30 AM IST
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿಯೇ ಇರುವುದಿಲ್ಲ. ಎಷ್ಟೋ ಯೋಜನೆಗಳು ಮಾಹಿತಿ ಇದ್ದವರ ಅಥವಾ ಪ್ರಭಾವಿಗಳ ಪಾಲಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಅಗತ್ಯವಿರುವ ಜನರಿಗೆ ಈ ಮಾಹಿತಿಗಳು ತಲುಪುವುದೇ ಇಲ್ಲ. ಅರ್ಹರಿಗೆ ವಿವಿಧ ಯೋಜನೆಗಳ ಪ್ರಯೋಜನ ಸಿಗಬೇಕೆನ್ನುವ ಉದ್ದೇಶದಿಂದ ಈ “ಪ್ರಯೋಜನ’ ಅಂಕಣ.
ರೈತರ ಆರ್ಥಿಕ ಸಶಕ್ತೀಕರಣಕ್ಕೆ ಪಿಎಂ ಕಿಸಾನ್ ಯೋಜನೆ ಸಹಕಾರಿಯಾಗಿದೆ.
2019ರಲ್ಲಿ ಆರಂಭವಾದ ಈ ಯೋಜನೆಯಡಿ 2 ಎಕ್ರೆಗಿಂತ ಒಳಗಡೆ ಇರುವ ರೈತರು ದಾಖಲಾತಿ ಸಲ್ಲಿಸಿ ಯೋಜನೆಯ ಫಲಾನುಭವಿಗಳಾಗಬಹುದು. ಈ ಯೋಜನೆಯಡಿ ವಾರ್ಷಿಕ 3 ಕಂತುಗಳಂತೆ ಕೇಂದ್ರ ಸರಕಾರ 6 ಸಾವಿರ ರೂ., ರಾಜ್ಯ ಸರಕಾರ 2 ಸಾವಿರದಂತೆ ವಾರ್ಷಿಕ ಎರಡು ಕಂತುಗಳಲ್ಲಿ 4 ಸಾವಿರ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಲಿದೆ. ಈಗಾಗಲೇ ಕೇಂದ್ರ ಸರಕಾರ 53.83 ಲಕ್ಷ, ರಾಜ್ಯ ಸರಕಾರ 34.26 ಲಕ್ಷ ರೈತರಿಗೆ ಆರ್ಥಿಕ ನೆರವು ನೀಡಿದೆ. ವಿವಿಧ ಕಾರಣಗಳಿಂದಾಗಿ ಬಿಟ್ಟು ಹೋಗಿದ್ದ ರೈತರು ಸಮರ್ಪಕ ದಾಖಲಾತಿ ಒದಗಿಸುತ್ತಿದ್ದು ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿದೆ.
ಅರ್ಜಿ ಸಲ್ಲಿಕೆ ಮಾಡುವ ಕೇಂದ್ರಗಳು ಯಾವುವು?
– ಬಾಪೂಜಿ ಸೇವಾ ಕೇಂದ್ರ
– ರೈತ ಸಂಪರ್ಕ ಕೇಂದ್ರ
– ಅಟಲ್ ಜೀ ಜನಸ್ನೇಹಿ ಕೇಂದ್ರ
– ಇತರ ಯಾವುದೇ ಸರಕಾರಿ ಸೇವಾ ಕೇಂದ್ರ
ಖಾತೆಗೆ ಹಣ ಬರದಿದ್ದರೆ ಏನು ಮಾಡಬೇಕು?
– http://pmkisan.gov.in ವೆಬ್‌ಸೈಟ್ ಅನ್ನು ತೆರೆಯಿರಿ
– ವೆಬ್‌ಸೈಟ್ ಮುಖಪುಟದಲ್ಲಿ ರೈತರ ಕಾರ್ನರ್ ಎಂಬ ಪ್ರತ್ಯೇಕ ವಿಭಾಗ ಸಿಗಲಿದೆ
– ರೈತರ ಕಾರ್ನರ್ ಎಂಬ ವಿಭಾಗದಲ್ಲಿ “ಫಲಾನು ಭವಿ ಸ್ಥಿತಿ’ ಎಂಬ ಟ್ಯಾಬ್ ಇದ್ದು ಕ್ಲಿಕ್ ಮಾಡಿ
– ಇದಕ್ಕೆ ಪರ್ಯಾಯವಾಗಿ, ನೀವು ನೇರವಾಗಿ https://pmkisan.gov.in/Beneficiary Status.aspx ಲಿಂಕ್ ತೆರೆಯಬಹುದು
– ಅನಂತರ ಆಧಾರ್ ಸಂಖ್ಯೆ, ಪಿಎಂ ಕಿಸಾನ್ ಖಾತೆ ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ
– ವಿವರ ಭರ್ತಿ ಮಾಡಿ, ಗೆಟ್ ಡೇಟಾ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಫಲಾನುಭವಿ ಸ್ಥಿತಿ ನೋಡಲು ಸಾಧ್ಯವಾಗುತ್ತದೆ.
ಅರ್ಹತೆ/ ದಾಖಲೆ ಏನೇನು ಬೇಕು?
– ಸಣ್ಣ ಪ್ರಮಾಣದ ಭೂ ಹಿಡುವಳಿ ಹೊಂದಿರುವ ರೈತರಾಗಿರಬೇಕು
– ಭೂಮಿ ಹೊಂದಿರುವ ಸಂಘ/ ಸಂಸ್ಥೆಗಳು
– ಪಹಣಿ
– ಆಧಾರ್ ನಂಬರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆ ಸಂಖ್ಯೆ
ಹಣ ಬರದಿದ್ದರೆ ದೂರು ನೀಡುವುದು ಹೇಗೆ?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 2,000ರೂ. ಹಣ ನಿಮ್ಮ ಖಾತೆಗೆ ಜಮೆ ಆಗದೆ ಇದ್ದರೆ ಮೊದಲು ನಿಮ್ಮ ಪ್ರದೇಶದ ಲೆಕ್ಕಾಧಿಕಾರಿ ಅಥವಾ ಕೃಷಿ ಅಧಿಕಾರಿಯನ್ನು ಸಂಪರ್ಕಿಸಬೇಕು. ಒಂದು ವೇಳೆ ಇವರಿಂದ ಸೂಕ್ತ ಸ್ಪಂದನೆ ಬಾರದಿದ್ದರೆ, ಇದಕ್ಕೆ ಸಂಬಂಧಿಸಿದಂತೆ ಇರುವ ಸಹಾಯವಾಣಿಗೆ ಕರೆ ಮಾಡಬಹುದು. ಸೋಮವಾರದಿಂದ ಶುಕ್ರವಾರದವರೆಗೆ PM&KISAN Help Desk ಗೆ ಕರೆ ಮಾಡಿ ನಿಮ್ಮ ಖಾತೆಗೆ ಹಣ ಜಮಾವಣೆ ಆಗಿಲ್ಲ ಎಂಬ ಮಾಹಿತಿ ನೀಡಬಹುದು. ಅಲ್ಲದೆ ನಿಮ್ಮ ಸ್ಥಳೀಯ ಕೃಷಿ ಅಧಿಕಾರಿ ನಿಮಗೆ ಸ್ಪಂದನೆ ಮಾಡಿಲ್ಲ ಎಂಬ ದೂರನ್ನೂ ನೀಡಬಹುದು. ಇದನ್ನು ಹೊರತುಪಡಿಸಿದರೆ ನೀವು pmkisan&ictgov.in ಇ-ಮೇಲ್ ಮೂಲಕವೂ ಸಂಪರ್ಕಿಸಬಹುದು. ಆಗಲೂ ಕ್ರಮ ಕೈಗೊಳ್ಳದಿದ್ದರೆ 011-23381092 (ನೇರ ಸಹಾಯವಾಣಿ) ಸಂಖ್ಯೆಗೆ ಕರೆ ಮಾಡಿ ನಿಮ್ಮ ಖಾತೆಗೆ ಹಣ ಜಮಾವಣೆ ಆಗದೇ ಇರುವ ವಿಷಯವನ್ನು ತಿಳಿಸಬಹುದು.
– ಹಾಗೆಯೇ ದಿಲ್ಲಿ (Delhi)ಯಲ್ಲಿರುವ ಕಚೇರಿ ನಂ. 011-23382401 ಕ್ಕೆ ಸಂಪರ್ಕಿಸಬಹುದು, ಇ-ಮೇಲ್ ಐಡಿ (ಟಞkಜಿsಚn-ಜಟ್ಟಿsಜಟv.ಜಿn) ಮೂಲಕವೂ ದೂರು ಸಲ್ಲಿಸಬಹುದು.
– ಹರೀಶ್ ಹಾಡೋನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.