2023 ಕ್ಕೆ ಕುಮಾರಣ್ಣ ಕರ್ನಾಟಕದ ಮುಖ್ಯಮಂತ್ರಿ : ಪಿ.ಆರ್.ಸುಧಾಕರಲಾಲ್
ಹೆಚ್‌ಡಿಕೆ ಕಪ್‌ಗೆ ಚಾಲನೆ, ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು-ಬ್ರೇಡ್ ವಿತರಣೆ
Team Udayavani, Dec 16, 2022, 6:56 PM IST
ಕೊರಟಗೆರೆ: 2023 ಕ್ಕೆ ಕುಮಾರಣ್ಣ ಕರ್ನಾಟಕದ ಮುಖ್ಯಮಂತ್ರಿ ಆಗೋದು ಖಚಿತ.. ಕರ್ನಾಟಕ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆಗೆ ಉತ್ತಮ ಜನಸ್ಪಂದನೆ ಸಿಗುತ್ತಿದೆ. ನಮ್ಮ ಕೊರಟಗೆರೆ ಕ್ಷೇತ್ರದಲ್ಲಿಯೂ ಪಂಚರತ್ನ ರಥಯಾತ್ರೆಯು ಯಶಸ್ಸು ಕಂಡಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬದ ಪ್ರಯುಕ್ತ ಜಾತ್ಯಾತೀತ ಯುವ ಜನತಾದಳ ಮತ್ತು ಅಲ್ಪಸಂಖ್ಯಾಕರ ಘಟಕದಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಹೆಚ್‌ಡಿಕೆ ಕಪ್ ಅಂತರ್ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ಅಭಿವೃದ್ದಿಯ ಪಂಚರತ್ನ ಎಂದರೇ ವಸತಿ ಸೌಲಭ್ಯ, ಆರೋಗ್ಯಭಾಗ್ಯ, ಹೈಟೆಕ್ ಶಾಲೆ, ರೈತ ಚೈತನ್ಯ, ಮಹಿಳೆಯರ ಸಬಲೀಕರಣ ಮತ್ತು ಯುವಕರಿಗೆ ಉದ್ಯೋಗ ಕಲ್ಪಿಸುವುದು ಆಗಿದೆ. ರೈತಪರ ಮತ್ತು ಜನಪರ ಕಾಳಜಿಯುಳ್ಳ ಕುಮಾರಣ್ಣನಿಗೆ ಆರೋಗ್ಯ ಭಾಗ್ಯವನ್ನು ದೇವರು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ಜೆಡಿಎಸ್ ನಗರ ಯುವ ಅಧ್ಯಕ್ಷ ಫಾರುಕ್, ಅಲ್ಪಸಂಖ್ಯಾತರ ಘಟಕದ ಯುವಾಧ್ಯಕ್ಷ ಅಜ್ಜು, ಉಪಾಧ್ಯಕ್ಷ ಜಭೀವುಲ್ಲಾ, ರಾಜೀಕ್ ಅಹಮ್ಮದ್, ಮುಖಂಡರಾದ ರಮೇಶ್, ಅಮರ್, ಕೌಶಿಕ್ ಸೇರಿದಂತೆ ಇತರರು ಇದ್ದರು.
ಶ್ರೀಕಟ್ಟೆಗಣಪತಿಗೆ ವಿಶೇಷ ಪೂಜೆ
ಮಾಜಿ ಸಿಎಂ ಕುಮಾರಣ್ಣ64 ನೇ ಹುಟ್ಟುಹಬ್ಬದ ಪ್ರಯುಕ್ತ ಕೊರಟಗೆರೆ ಪಟ್ಟಣದ ಶ್ರೀಕಟ್ಟೆಗಣಪತಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಸಾರ್ವಜನಿಕ ಆಸ್ಪತ್ರಗೆ ನೂರಾರು ಒಳರೋಗಿಗಳಿಗೆ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಲು-ಬ್ರೇಡ್ ವಿತರಣೆ ಮಾಡಿದರು. ಕೊರಟಗೆರೆ ಕ್ಷೇತ್ರದ ವಿವಿಧ ಕಡೆಗಳಲ್ಲಿ ಹೆಚ್‌ಡಿಕೆ ಹುಟ್ಟಹಬ್ಬ ಆಚರಣೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.