ತೃತೀಯ ಸ್ಥಾನಕ್ಕಾಗಿ ಕ್ರೊವೇಷ್ಯಾ-ಮೊರಾಕ್ಕೊ ಹೋರಾಟ


Team Udayavani, Dec 17, 2022, 6:45 AM IST

ತೃತೀಯ ಸ್ಥಾನಕ್ಕಾಗಿ ಕ್ರೊವೇಷ್ಯಾ-ಮೊರಾಕ್ಕೊ ಹೋರಾಟ

ಅಲ್‌ ರಯಾನ್‌: ಅರ್ಜೆಂಟೀನ-ಫ್ರಾನ್ಸ್‌ ನಡುವೆ ಭಾನುವಾರ ನಡೆಯಲಿರುವ ಫೈನಲ್‌ಗೆ ಕ್ಷಣಗಣನೆ ಆರಂಭಗೊಂಡಿರುವಂತೆಯೇ; ಇತ್ತ ಕ್ರೊವೇಷ್ಯಾ-ಮೊರಾಕ್ಕೊ ನಡುವಿನ ತೃತೀಯಸ್ಥಾನಕ್ಕಾಗಿನ ಕದನಕ್ಕೆ ರಂಗ ಸಜ್ಜಾಗಿದೆ. ಶನಿವಾರ ರಾತ್ರಿ ಅಲ್‌ ರಯಾನ್‌ ಅಂತಾರಾಷ್ಟ್ರೀಯ ಮೈದಾನದಲ್ಲಿ ಇತ್ತಂಡಗಳ ನಡುವೆ ಸ್ಪರ್ಧೆ ಏರ್ಪಡಲಿದೆ.

ಒಂದೇ ಗುಂಪಿನ ತಂಡಗಳು: ಸೆಮಿಫೈನಲ್‌ನಲ್ಲಿ ಒಂದೂ ಗೋಲು ಬಾರಿಸಲಾಗದೆ ಸೋತ ಈ ಎರಡು ತಂಡಗಳು, ಕಂಚು ಗೆದ್ದು ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಹವಣಿಸುತ್ತಿವೆ. ವಿಶೇಷವೆಂದರೆ, ಇವೆರಡೂ ಲೀಗ್‌ ಹಂತದಲ್ಲಿ ಒಂದೇ ಗ್ರೂಪ್‌ನಲ್ಲಿ ಆಡಿದ ತಂಡಗಳು. ಅಜೇಯ ಮೊರಾಕ್ಕೊ ಎಫ್ ವಿಭಾಗದ ಅಗ್ರಸ್ಥಾನಿಯಾಗಿದ್ದರೆ, ಕ್ರೊವೇಷ್ಯಾ ದ್ವಿತೀಯ ಸ್ಥಾನದೊಂದಿಗೆ ನಾಕೌಟ್‌ ಪ್ರವೇಶಿಸಿತ್ತು.

ಸ್ವಾರಸ್ಯವೆಂದರೆ, ಇತ್ತಂಡಗಳು ವಿಶ್ವಕಪ್‌ನಲ್ಲಿ ಮುಖಾಮುಖಿಯಾದದ್ದು ಇದೇ ಮೊದಲು. ಲೀಗ್‌ ಹಂತದಲ್ಲಿ ಮೊರಾಕ್ಕೊ-ಕ್ರೊವೇಷ್ಯಾ ನಡುವಿನ ಪಂದ್ಯ ಗೋಲ್‌ಲೆಸ್‌ ಡ್ರಾ ಆಗಿತ್ತು. ಹೀಗೆ ಒಂದೇ ವಿಶ್ವಕಪ್‌ನಲ್ಲಿ ಈ ತಂಡಗಳು 2ನೇ ಸಲ ಎದುರಾಗಲಿವೆ. ಸಮಬಲದ ಹೋರಾಟ ನಡೆದೀತು ಎಂಬುದು ಫ‌ುಟ್‌ಬಾಲ್‌ ಪಂಡಿತರ ಅನಿಸಿಕೆ.

ಕಳೆದ ಸಲ ಫೈನಲ್‌ ತನಕ ಸಾಗಿ ಫ್ರಾನ್ಸ್‌ಗೆ ಶರಣಾಗಿದ್ದ ಕ್ರೊವೇಷ್ಯಾಕ್ಕೆ ಈ ಬಾರಿ ಇನ್ನಷ್ಟು ಹಿಂಬಡ್ತಿ ಪಡೆಯಬೇಕಾದ ಸ್ಥಿತಿ ಎದುರಾಗಿದೆ. ಆದರೆ ಮೊರಾಕ್ಕೊ ಪಾಲಿಗೆ ಇದೊಂದು ಬಂಪರ್‌ ಹಾಗೂ ಬೋನಸ್‌. ಏಕೆಂದರೆ ಅದು ವಿಶ್ವಕಪ್‌ ಇತಿಹಾಸದಲ್ಲಿ ಸೆಮಿಫೈನಲ್‌ ತನಕ ಬಂದದ್ದು ಇದೇ ಮೊದಲು. ಹೀಗಾಗಿ ಕಳೆದುಕೊಳ್ಳುವಂಥದ್ದೇನಿಲ್ಲ. ಸದ್ಯದ ಸಮಸ್ಯೆಯೆಂದರೆ, ಗಾಯಾಳುಗಳದ್ದು.

ಸೆಮಿಫೈನಲ್‌ನಲ್ಲಿ ರಕ್ಷಣಾ ಆಟಗಾರ ವಾಲಿದ್‌ ರೆಗ್ರಾಗುಯಿ ಅತ್ಯುತ್ತಮ ಪ್ರದರ್ಶನ ನೀಡಿದರೂ ನಡುವಲ್ಲೇ ಹೊರನಡೆದರು. ನಯೆಫ್  ಪಂದ್ಯಕ್ಕೂ ಮೊದಲೇ ಹೊರಬಿದ್ದರು. ನಾಯಕ ರೊಮೇನ್‌ ಸೈಸ್‌ 20 ನಿಮಿಷ ಆಡಿ ಮೈದಾನ ತೊರೆದರು. ಈ ಮೂವರೂ ಶನಿವಾರದ ಪಂದ್ಯದಿಂದ ಹೊರಗುಳಿದರೆ ಮೊರಾಕ್ಕೊ ನಿಜಕ್ಕೂ ಸಂಕಟಕ್ಕೆ ಸಿಲುಕಲಿದೆ.

ಇನ್ನೊಂದೆಡೆ ಕ್ರೊವೇಷ್ಯಾದ ಕೋಚ್‌ ಡಾಲಿಕ್‌ ಮುಂದೆ ಬಲಿಷ್ಠ ತಂಡವನ್ನು ಕಣಕ್ಕಿಳಿಸುವ ಅವಕಾಶವಿದೆ. ಮಿಡ್‌ಫಿàಲ್ಡರ್‌ ಮಾರ್ಸೆಲೊ  ಗಾಯಾಳಾಗಿರುವುದು ಕ್ರೊವೇಷ್ಯಾಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಲಿಕ್ಕಿಲ್ಲ.

ಕತಾರ್‌ ರೆಫ್ರೀ: ಪ್ಲೇ ಆಫ್ ಪಂದ್ಯಕ್ಕೆ ಆತಿಥೇಯ ಕತಾರ್‌ನ ಅಬ್ದುಲ್ ಹಾಮ್‌ ಅಲ್‌ ಜಾಸಿಮ್‌ ಅವರನ್ನು ಮ್ಯಾಚ್‌ ರೆಫ್ರಿಯನ್ನಾಗಿ ನೇಮಿಸಲಾಗಿದೆ. ಅವರಿಗೆ ಈ ಕೂಟದಲ್ಲಿ ಲಭಿಸಿದ ಕೇವಲ 2ನೇ ಅವಕಾಶ ಇದಾಗಿದೆ. ಯುಎಸ್‌ಎ-ವೇಲ್ಸ್‌ ನಡುವಿನ ಗ್ರೂಪ್‌ ಎ ಪಂದ್ಯದಲ್ಲಿ ಮೊದಲ ಸಲ ಕಣಕ್ಕಿಳಿದಿದ್ದರು.

ಟಾಪ್ ನ್ಯೂಸ್

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.