ಭಾರತದಲ್ಲಿ ಮೊದಲ ದಿನವೇ ಕೋಟಿ ಕೋಟಿ ಕಲೆಕ್ಷನ್‌ ಮಾಡಿದರೂ ಆ ಸಿನಿಮಾದ ದಾಖಲೆ ಮುರಿಯದ ʼʼಅವತಾರ್‌ -2”  

Team Udayavani, Dec 17, 2022, 12:39 PM IST

tdy-9

ನವದೆಹಲಿ: ಜೇಮ್ಸ್‌ ಕ್ಯಾಮೆರಾನ್‌ ಅವರ ʼಅವತಾರ್‌ ದಿ ವೇ ವಾಟರ್‌ʼ ಸಿನಿಮಾ ವಿಶ್ವದಾದ್ಯಂತ 160 ಭಾಷೆಗಳಲ್ಲಿ 52 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ತೆರೆಕಂಡಿದೆ. ಮೊದಲ ದಿನವೇ ಹತ್ತಾರು ಸಿನಿಮಾಗಳ ದಾಖಲೆಯನ್ನು ಉಡೀಸ್‌ ಮಾಡಿರುವ ಚಿತ್ರ ಭಾರತದಲ್ಲಿಯೂ ಭರ್ಜರಿ ಹಣ ಗಳಿಸಿದೆ.

ಒಟ್ಟು 6 ಭಾಗಗಳಾಗಿ ಅವತಾರ್‌ ರಿಲೀಸ್‌ ಆಗಲಿದೆ. ದೊಡ್ಡ ಬಜೆಟ್‌ ನಲ್ಲಿ ಮೂಡಿ ಬಂದಿರುವ ಎರಡನೇ ಭಾಗ ರಿಲೀಸ್‌ ಗೂ ಮುನ್ನವೇ ಟಿಕೆಟ್‌ ಬುಕಿಂಗ್‌ ನಲ್ಲೇ ದಾಖಲೆ ಬರೆದಿತ್ತು. ಸಿನಿಮಾ ಬಿಡುಗಡೆಯಾಗಿ ಒಂದು ದಿನ ಕಳೆದಿದೆ. ವಿಶ್ವದಾದ್ಯಂತ 2.9 ಮಿಲಿಯನ್‌ ($2.9 billion) ಕಲೆಕ್ಷನ್‌ ಮಾಡಿದೆ.

ಭಾರತದಲ್ಲಿಯೂ ʼಅವತಾರ್‌ -2ʼ ಸಿನಿಮಾಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಭಾರತದಲ್ಲಿ ಹಾಲಿವುಡ್‌ ಸಿನಿಮಾವೊಂದು ಅತೀ ಹೆಚ್ಚು ಕಲೆಕ್ಷನ್‌ ಮಾಡಿದರಲ್ಲಿ 2ನೇ ಸ್ಥಾನವನ್ನು ಈಗ ಅವತಾರ್‌ -2 ಪಡೆದುಕೊಂಡಿದೆ.  ಮೊದಲ ದಿನೇ ಭಾರತದಲ್ಲಿ 38- 40 ಕೋಟಿ ರೂ.ಗಳನ್ನು ಗಳಿಸಿದೆ ಎಂದು ವರದಿಯಾಗಿದೆ.

ದಕ್ಷಿಣದ ಮಾರುಕಟ್ಟೆಯಲ್ಲೇ ಭಾರತದಲ್ಲಿ ಅವತಾರ್‌ -2 ಹೆಚ್ಚು ಕಲೆಕ್ಷನ್‌ ಮಾಡಿದೆ. ಆಂಧ್ರ ಪ್ರದೇಶ್‌, ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ಒಟ್ಟು 22 ಕೋಟಿ ರೂ.ಕಲೆಕ್ಷನ್‌ ಮಾಡಿದೆ. ಈ ಮೂಲಕ “ಸ್ಪೈಡರ್‌ಮ್ಯಾನ್: ನೋ ವೇ ಹೋಮ್”, “ಡಾಕ್ಟರ್ ಸ್ಟ್ರೇಂಜ್: ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್”,” ಅವೆಂಜರ್ಸ್: ಇನ್ಫಿನಿಟಿ ವಾರ್” ಸಿನಿಮಾದ ದಾಖಲೆಯನ್ನು ಮೀರಿಸಿದೆ.

ಇಷ್ಟೆಲ್ಲಾ ದಾಖಲೆ ಬರೆದರೂ ಜೇಮ್ಸ್‌ ಕ್ಯಾಮೆರಾನ್‌ ಅವರ ʼಅವತಾರ್-2”‌ 2019 ರಲ್ಲಿ ತೆರೆಕಂಡಿದ್ದ ʼಅವೆಂಜರ್ಸ್: ಎಂಡ್‌ಗೇಮ್ʼ ಸಿನಿಮಾ ಭಾರತದಲ್ಲಿ ಮಾಡಿದ ದಾಖಲೆಯನ್ನು ಮೀರಿಸಿಲ್ಲ. ಅವೆಂಜರ್ಸ್: ಎಂಡ್‌ಗೇಮ್ ಮೊದಲ ದಿನವೇ ಭಾರತದಲ್ಲಿ 53.10 ಕೋಟಿ ರೂ.ವನ್ನು ಕಲೆಕ್ಷನ್‌ ಮಾಡಿತ್ತು.

ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಭಾರತದಲ್ಲಿ ಸಿನಿಮಾ ತೆರೆಕಂಡಿದೆ.

ಟಾಪ್ ನ್ಯೂಸ್

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

National Cinema Day: ಈ ದಿನ‌ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್

National Cinema Day: ಈ ದಿನ‌ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.