ಮನೆಯಲ್ಲೇ ಮಾಡಬಹುದಾದ ಕೆಲವು ಕುರುಕಲು ತಿಂಡಿಯ ರೆಸಿಪಿಗಳು ಇಲ್ಲಿವೆ…

ಎರಡೂ ಬದಿಗಳಲ್ಲಿ ಕೆಂಬಣ್ಣ ಬರುವವರೆಗೆ ಕರಿಯಿರಿ.

Team Udayavani, Dec 17, 2022, 4:42 PM IST

ಮನೆಯಲ್ಲೇ ಮಾಡಬಹುದಾದ ಕೆಲವು ಕುರುಕಲು ತಿಂಡಿಯ ರೆಸಿಪಿಗಳು ಇಲ್ಲಿವೆ…

ಹೊರಗೆ ಜೋರು ಮಳೆಯಾಗುತ್ತಿದೆ. ಸುರಿವ ಮಳೆಯ ಮಧ್ಯೆ ಬಿಸಿಬಿಸಿ ಕಾಫಿ, ಟೀ ಹೀರುತ್ತಾ ಕೂರಬೇಕು ಎನಿಸುತ್ತದೆ. ಜೊತೆಗೆ ಕುರುಕಲು ತಿಂಡಿಯೂ ಇರಲಿ ಅಂತ ನಾಲಗೆ ಬಯಸುತ್ತದೆ. ಹೇಳದೇ ಕೇಳದೇ ಮಳೆ ಬಂದ ಸಂದರ್ಭದಲ್ಲಿ ಅವಸರದಿಂದಲೇ ಮನೆಯಲ್ಲೇ ಮಾಡಬಹುದಾದ ಕೆಲವು ಕುರುಕಲು ತಿಂಡಿಯ ರೆಸಿಪಿಗಳು ಇಲ್ಲಿವೆ. 

1.ರಿಬ್ಬನ್‌ ಪಕೋಡ
ಬೇಕಾಗುವ ಸಾಮಗ್ರಿ: 2 ಕಪ್‌ ಅಕ್ಕಿಹಿಟ್ಟು, 1ಕಪ್‌ ಕಡಲೆಹಿಟ್ಟು, 1ಚಮಚ ಎಳ್ಳು, 1/2ಚಮಚ ಜೀರಿಗೆ ಪುಡಿ, 1/4ಚಮಚ ಅರಶಿನ ಪುಡಿ, 1 ಚಮಚ ಖಾರದ ಪುಡಿ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ, ನೀರು.

ಮಾಡುವ ವಿಧಾನ: ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಅದಕ್ಕೆ ಎರಡು ಚಮಚ ಬಿಸಿ ಎಣ್ಣೆ ಹಾಕಿ ಕೊಂಡು, ನೀರನ್ನು ಚಿಮುಕಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಉಂಡೆ ಕಟ್ಟಿ. ನಂತರ ಸ್ಟೌ ಮೇಲೆ ಎಣ್ಣೆ ಕಾಯಲು ಇಡಿ.  ಚಕ್ಕುಲಿ ಒರಳಿನಲ್ಲಿ ಸುತ್ತಲೂ ಎಣ್ಣೆ ಹಾಕಿ (ಆಗ ಹಿಟ್ಟು ಸುತ್ತಲೂ ಅಂಟುವುದಿಲ್ಲ), ರಿಬ್ಬನ್‌ ಪ್ಲೇಟ್‌ ಜೋಡಿಸಿ. ಅದರಲ್ಲಿ ಒಂದೊಂದೇ ಉಂಡೆ ಹಾಕಿ. ಬಿಸಿಯಾದ ಎಣ್ಣೆಗೆ ಒತ್ತಿ ಹಾಕಿ. ಎರಡೂ ಬದಿಗಳಲ್ಲಿ ಕೆಂಬಣ್ಣ ಬರುವವರೆಗೆ ಕರಿಯಿರಿ.

2.ಅವಲಕ್ಕಿ ಚೂಡ
ಬೇಕಾಗುವ ಸಾಮಗ್ರಿ: ತೆಳು ಅವಲಕ್ಕಿ 1/2 ಕಪ್‌, ತೆಳುವಾಗಿ ಕತ್ತರಿಸಿದ ಒಣ ಕೊಬ್ಬರಿ 1/4 ಕಪ್‌, ಹುರಿಗಡಲೆ 1/2 ಕಪ್‌,ಶೇಂಗಾ 1/2 ಕಪ್‌,  ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವು ಸ್ವಲ್ಪ, ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ 3-4, ಅರಿಶಿನ 1/2 ಚಮಚ, ಎಣ್ಣೆ 5 ಚಮಚ, ಸಕ್ಕರೆ 3 ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ತೆಳು ಅವಲಕ್ಕಿಯನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಬಾಣಲೆಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು ಹಾಕಿ ಬಾಡಿಸಿ. ನಂತರ ಒಣಕೊಬ್ಬರಿ ತುಂಡು, ಹುರಿಗಡಲೆ, ಶೇಂಗಾ ಹಾಕಿ ಹುರಿದು ಅದಕ್ಕೆ, ಅವಲಕ್ಕಿ ಸೇರಿಸಿ. ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ ಮಿಶ್ರಣ ಮಾಡಿ. ರುಚಿಯಾದ ಅವಲಕ್ಕಿ ಚೂಡವನ್ನು ಡಬ್ಬಿಯಲ್ಲಿ ಹಾಕಿಟ್ಟರೆ ಬೇಗ ಕೆಡುವುದಿಲ್ಲ. ಯಾವಾಗ ಬೇಕಾದರೂ ತಿನ್ನಬಹುದು.

3. ಬೆಂಡೆಕಾಯಿ ಕುರ್‌ಕುರೆ
ಬೇಕಾಗುವ ಸಾಮಗ್ರಿ: ಬೆಂಡೆಕಾಯಿ 1ಕೆ.ಜಿ., ಕಡಲೆಹಿಟ್ಟು 1/2 ಕಪ್‌, ಅಕ್ಕಿ ಹಿಟ್ಟು 1/4 ಕಪ್‌, ಅಜವಾನ 1ಚಮಚ (ಬೇಕಿದ್ದರೆ) ಅರಿಶಿನ 1ಚಮಚ, ಖಾರದ ಪುಡಿ 1ಚಮಚ, ಆಮ್‌ಚೂರ್‌ ಪೌಡರ್‌ 1/2 ಚಮಚ, ಜೀರಿಗೆ ಪುಡಿ 1ಚಮಚ,
ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.

ಮಾಡುವ ವಿಧಾನ: ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಪೂರ್ತಿ ನೀರು ಹೋಗುವವರೆಗೂ ಒಣಹಾಕಿ. ನಂತರ ತುದಿ ಭಾಗವನ್ನು ತೆಗೆದು ಮೇಲಿಂದ ಕೆಳಕ್ಕೆ ಉದ್ದಕ್ಕೆ ಸೀಳಿ, ಮಧ್ಯ ಇರುವ ತಿರುಳು ಮತ್ತು ಬೀಜವನ್ನು ತೆಗೆಯಿರಿ. ನಂತರ  ಒಂದೇ ಅಳತೆಯ ಉದ್ದುದ್ದ ತುಂಡುಗಳನ್ನು ಮಾಡಿ ಪಾತ್ರೆಗೆ ಹಾಕಿ. ಮೇಲೆ ಹೇಳಿದ ಎಲ್ಲಾ ಮಸಾಲೆ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಐದು ನಿಮಿಷ ಹಾಗೆ ಬಿಡಿ. ಆ ಮಿಶ್ರಣವನ್ನು ಬೆಂಡೆಕಾಯಿ ಪಾತ್ರೆಗೆ ಹಾಕಿ ಮಿಶ್ರಣ ಮಾಡಿ. ಒಲೆ ಮೇಲೆ ಎಣ್ಣೆಯಿಟ್ಟು, ಬೆಂಡೆಕಾಯಿ ಮಸಾಲೆಯನ್ನು ಬಿಡಿ ಬಿಡಿಯಾಗಿ ಉದುರಿಸಿ. ಮಧ್ಯಮ ಉರಿಯಲ್ಲಿ ಬೇಯಿಸಿ. ಎರಡೂ ಬದಿ ಗರಿ ಗರಿಯಾದ ಮೇಲೆ ಬಾಣಲೆಯಿಂದ ತೆಗೆಯಿರಿ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ ಹದಿನೈದು ದಿನ ಇಡಬಹುದು.

4.ಜಾಲ್‌ ಮುರೈ/ಜಾಲ್‌ ಮುರಿ 

ಬೇಕಾಗುವ ಸಾಮಗ್ರಿ: ಮಂಡಕ್ಕಿ- 4 ಕಪ್‌, 1/4 ಕಪ್‌ ಸೇವ್‌, 1/4 ಕಪ್‌ ಶೇಂಗಾ, ಬೇಯಿಸಿದ ಆಲೂಗಡ್ಡೆ 1/2 ಕಪ್‌,  ಸೌತೆಕಾಯಿ 1/2 ಕಪ್‌, ಹಸಿಮೆಣಸಿನಕಾಯಿ 2, ಕೊತ್ತಂಬರಿ ಸೊಪ್ಪು ಸ್ವಲ್ಪ, ಟೊಮೆಟೊ 1/2ಕಪ್‌, ಕ್ಯಾರೆಟ್‌ ತುರಿ 1/2ಕಪ್‌, ಹುಣಸೆ ರಸ 1/4 ಕಪ್‌, ಸಾಸಿವೆ ಎಣ್ಣೆ 3 ಚಮಚ, ಜೀರಿಗೆ ಪುಡಿ 3 ಚಮಚ, ಉಪ್ಪು 1 ಚಮಚ, ಅಮ್‌ಚೂರ್‌ ಪೌಡರ್‌ 1 ಚಮಚ, ಖಾರದ ಪುಡಿ 1 ಚಮಚ, ಗರಂ ಮಸಾಲೆ 1 ಚಮಚ, ಚಿಕ್ಕದಾಗಿ ಹೆಚ್ಚಿದ ಶುಂಠಿ 1 ಚಮಚ.

ಮಾಡುವ ವಿಧಾನ: ಮೊದಲು ಆಲೂಗಡ್ಡೆಯನ್ನು ಹದವಾಗಿ ಬೇಯಿಸಿ ಕತ್ತರಿಸಿಟ್ಟುಕೊಳ್ಳಿ.ಕ್ಯಾರೆಟ್‌ ತುರಿದು, ಟೊಮೆಟೊ, ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹುಣಸೆ ರಸ ತಯಾರಿಸಿ ಮಸಾಲೆ ಪದಾರ್ಥಗಳನ್ನು ಅದರಲ್ಲಿ ಹಾಕಿ. ಅವುಗಳು ಹುಣಸೆ ರಸದಲ್ಲಿ ಚೆನ್ನಾಗಿ ಮಿಶ್ರಣವಾಗಬೇಕು. ಒಂದು ಬಾಣಲೆಗೆ ಮಂಡಕ್ಕಿ ಹಾಕಿ ಎರಡರಿಂದ ಮೂರು ನಿಮಿಷ ಹುರಿಯಿರಿ.ಶೇಂಗಾ ಬೀಜವನ್ನೂ ಹುರಿದುಕೊಳ್ಳಿ. ದೊಡ್ಡದಾದ ಪಾತ್ರೆಯಲ್ಲಿ ಹುರಿದ ಪದಾರ್ಥ ಮತ್ತು ಮಸಾಲೆ ಪದಾರ್ಥಗಳನ್ನು ಸೇರಿಸಿ, ಸಾಸಿವೆ ಎಣ್ಣೆ ಹಾಕಿ ಮಿಶ್ರಣ ಮಾಡಿ. ನಂತರ ಸೇವ್‌ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ. ಈಗ ರುಚಿರುಚಿಯಾದ ಜಾಲ್‌ ಮುರೈ ಸವಿಯಲು ಸಿದ್ಧ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.