![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 17, 2022, 6:05 PM IST
ಕಲಘಟಗಿ: ಮೂಲ ಜನಪದ ಗರತಿಯ ಹಾಡುಗಳಲ್ಲಿ ಜೀವನ ಮೌಲ್ಯಗಳು ಅಡಗಿವೆ ಎಂದು ಹಿರಿಯ ಜಾನಪದ ಕಲಾವಿದ ಮಲ್ಲಯ್ಯಸ್ವಾಮಿ ತೋಟಗಂಟಿ ಹೇಳಿದರು.
ಶ್ರೀ ಮೈಲಾರಲಿಂಗೇಶ್ವರ ಮಹಿಳಾ ಜಾನಪದ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ತಾಲೂಕಿನ ಬೆಲವಂತರ ಗ್ರಾಮದ ಶ್ರೀ ಚನ್ನಬಸವೇಶ್ವರ ಕೋರಿ ಅಜ್ಜನಮಠದ ಆವರಣದಲ್ಲಿ ಹಮ್ಮಿಕೊಂಡ ಜಾನಪದ ಸಂಭ್ರಮ-2022 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದೆ ಜನರ ಮನೆ ಮಾತಾಗಿದ್ದ ಸೋಬಾನ ಪದಗಳು, ಬೀಸುಕಲ್ಲಿನ ಪದಗಳು, ಜೋಗುಳ ಪದಗಳು, ಹಂತಿ ಪದಗಳು, ಲಾವಣಿ ಪದಗಳು, ಗೀಗಿ ಪದಗಳು, ದೊಡ್ಡಾಟ, ಸಣ್ಣಾಟ ಪ್ರದರ್ಶಗಳು ನಿತ್ಯ ನಿದರ್ಶನವಾಗಿದ್ದವು, ಇಂದು ಪ್ರದರ್ಶನದ ಹಂತಕ್ಕೆ ತಲುಪಿವೆ ಎಂದರು.
ಬೆಲವಂತರ ಹಿರೇಮಠದ ವೇ|ಸಿದ್ರಾಮಯ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾದೇವಪ್ಪ ಬಸನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಮಹಾಂತಯ್ಯ ಹಿರೇಮಠ, ಈರಯ್ಯ ಹೊಸಮಠ, ಗಂಗಾಮಾತಾ ಸಂಘದ ಕಾರ್ಯದರ್ಶಿ ಯಲ್ಲಪ್ಪ ಸುಣಗಾರ, ಸಂಘದ ಅಧ್ಯಕ್ಷೆ ಶಾರಮ್ಮ ಗೊಲ್ಲಗೌಡರ, ಉಪಾಧ್ಯಕ್ಷೆ ಕಲ್ಲವ್ವ ಚಿಕ್ಕಣ್ಣವರ ಇದ್ದರು.
ಶ್ರೀ ಮೈಲಾರಲಿಂಗೇಶ್ವರ ಮಹಿಳಾ ಜಾನಪದ ಸಂಘದ ಮಹಿಳೆಯರು ಒಳಕಲ್ಲು ಪೂಜೆ ಮಾಡಿ, ಬೀಸುಕಲ್ಲಿನ ಪದ, ಕುಟ್ಟುವ ಪದ, ಜೋಗುಳ ಪದ ಹಾಗೂ ಸಂಪ್ರದಾಯದ ಪದಗಳನ್ನು ರಾಗಬದ್ಧವಾಗಿ ಹಾಡಿ ಜನಮನಸೂರೆಗೊಂಡರು. ಚನಬಸವೇಶ್ವರ ಭಜನಾ ಸಂಘದ ಕಲಾವಿದರಿಂದ ಭಜನೆ ಹಾಗೂ ಗ್ರಾಮದೇವಿ ಕರಡಿ ಮಜಲು ತಂಡದವರಿಂದ ಕರಡಿ ಮಜಲು ಕಲಾ ಪ್ರದರ್ಶನ ಜರುಗಿತು. ಮಲ್ಲಯ್ಯಸ್ವಾಮಿ ತೋಟಗಂಟಿ ಅವರು ಲಾವಣಿ, ಗೀಗೀ ಪದಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಅಕ್ಕವ್ವ ಶಿಗ್ಗಟ್ಟಿ, ರೇಣವ್ವ ವಡ್ಡರ, ಗುರುಸಿದ್ದವ್ವ ತಡಸ ಸೇರಿದಂತೆ ಸಂಘದ ಪದಾಧಿ ಕಾರಿಗಳು, ಸದಸ್ಯೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಜ್ಯೋತಿ ಹಿರೇಮಠ ನಿರ್ವಹಿಸಿದರು.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
You seem to have an Ad Blocker on.
To continue reading, please turn it off or whitelist Udayavani.