ಚೀನೀ ಉತ್ಪನ್ನ ನಿಷೇಧಿಸಿ: ಕೇಂದ್ರ ಸರಕಾರಕ್ಕೆ ವ್ಯಾಪಾರಿಗಳ ಒಕ್ಕೂಟ ಆಗ್ರಹ
ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಿಟಿಐ ವತಿಯಿಂದ ಪತ್ರ
Team Udayavani, Dec 19, 2022, 7:40 AM IST
ಹೊಸದಿಲ್ಲಿ: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ ಮತ್ತು ಚೀನ ಸೇನೆಯ ನಡುವೆ ಘರ್ಷಣೆ ನಡೆದ ಬೆನ್ನಲ್ಲೇ ಮತ್ತೆ ಚೀನೀ ಸರಕುಗಳ ಬಹಿ ಷ್ಕಾರದ ಕೂಗು ಕೇಳಿಬಂದಿದೆ.
ಚೀನದ ಎಲ್ಲ ಉತ್ಪನ್ನಗಳನ್ನೂ ಬಹಿ ಷ್ಕರಿಸಬೇಕು. ಆಮದು ಮಾಡಲಾದ ಎಲ್ಲ ಸರಕುಗಳು ಮತ್ತು ಇ- ಕಾಮರ್ಸ್ ಉತ್ಪನ್ನಗಳ ಮೇಲೆ “ಅದನ್ನು ಉತ್ಪಾದಿಸಲಾದ ಮೂಲ ದೇಶದ ಹೆಸರುಳ್ಳ ಲೇಬಲ್’ ಅಂಟಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ವ್ಯಾಪಾರಿಗಳ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಗೋಯಲ್‌ಗೆ ಪತ್ರ ಬರೆದಿ ರುವ ದಿ ಛೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿ(ಸಿಟಿಐ), ಜನರಿಗೆ ಚೀನದ ಸರಕುಗಳನ್ನು ಖರೀದಿಸಲು ಇಷ್ಟವಿಲ್ಲ ದಿದ್ದರೂ, ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ತಾವು ಖರೀದಿಸುವ ವಸ್ತುವಿನ ಮೂಲ ದೇಶ ಯಾವುದು ಎಂಬುದು ಗೊತ್ತಾಗುತ್ತಿಲ್ಲ.
ಹೀಗಾಗಿ ಸರಕಾರ ಇಂಥ ಲೇಬಲ್ ಅಂಟಿಸುವುದನ್ನು ಕಡ್ಡಾಯ ಗೊಳಿಸಬೇಕು ಎಂದು ಮನವಿ ಮಾಡಿದೆ. ಜತೆಗೆ, ಈ ವರ್ಷದ ಮೊದಲ 9 ತಿಂಗಳಲ್ಲಿ ಭಾರತವು ಚೀನದಿಂದ ಆಮದು ಮಾಡಿ ಕೊಂಡಿರುವ ಸರಕುಗಳ ಪ್ರಮಾಣ ಶೇ. 31ರಷ್ಟು ಹೆಚ್ಚಳವಾಗಿದೆ. ಆದರೆ ಭಾರತವು ಚೀನಗೆ ರಫ್ತು ಮಾಡುವ ಸರಕುಗಳ ಪ್ರಮಾಣ ಶೇ.36.4ರಷ್ಟು ಕುಸಿತವಾಗಿದೆ ಎಂದೂ ಒಕ್ಕೂಟ ಪತ್ರದಲ್ಲಿ ಉಲ್ಲೇಖಿಸಿದೆ.
ಚೀನಕ್ಕೆ “ಉಡುಗೊರೆ’!: ಇನ್ನೊಂದೆಡೆ, ಭಾರತ-ಚೀನ ವ್ಯಾಪಾರದ ಕುರಿತು ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿರುವ ದಿಲ್ಲಿ ಸಿಎಂ ಕೇಜ್ರಿವಾಲ್, “ಗಡಿಯಲ್ಲಿ ಕ್ಯಾತೆ ತೆಗೆಯುತ್ತಿ ರುವ ಚೀನಕ್ಕೆ ಶಿಕ್ಷೆ ನೀಡುವ ಬದಲು ಕೇಂದ್ರ ಸರಕಾರವು, ಆ ದೇಶಕ್ಕೆ ಉಡುಗೊರೆಯನ್ನು ನೀಡುತ್ತಿದೆ. ಭಾರೀ ಪ್ರಮಾಣದಲ್ಲಿ ಚೀನದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಆ ದೇಶಕ್ಕೆ ನೆರವಾಗುತ್ತಿದೆ. ದೇಶದ ಯೋಧರ ಮೇಲೆ ಗೌರವವಿದ್ದರೆ, ಸ್ವಲ್ಪ ಧೈರ್ಯ ತೋರಿಸಿ ಚೀನ ಉತ್ಪನ್ನಗಳನ್ನು ಬಹಿಷ್ಕರಿಸಿ’ ಎಂದು ಸವಾಲು ಹಾಕಿªದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.