![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 19, 2022, 10:14 AM IST
ನವದೆಹಲಿ: ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಬಹಳಷ್ಟು ಬದಲಾವಣೆಗಳಾಗಿವೆ. ಸಾವಿರಾರು ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಟ್ವಿಟರ್ ನ ನೀತಿ – ನಿಯಮಗಳು ಬದಲಾಗಿವೆ. ದಿನೇ ದಿನೇ ಟ್ವಿಟರ್ ನಾನಾ ವಿಚಾರಕ್ಕೆ ಸುದ್ದಿಯಾಗುತ್ತಿದೆ.
ಎಲಾನ್ ಮಸ್ಕ್ ಟ್ವಿಟರ್ ನಲ್ಲಿ ಹಲವಾರು ಬದಲಾವಣೆಯನ್ನು ತಂದಿದ್ದಾರೆ. ಹೊಸ ಬಳಕೆದಾರರು ಟ್ವಿಟರ್ ಗೆ ಬರುತ್ತಿದ್ದಾರೆ. ಹಾಗೆಯೇ ಸಾಕಷ್ಟು ಮಂದಿ ಟ್ವಿಟರ್ ನಿಂದ ಹೊರ ಹೋಗಿದ್ದಾರೆ. ಈ ನಡುವೆ ಎಲಾನ್ ಮಸ್ಕ್ ತಮ್ಮ ಟ್ವಟಿರ್ ಖಾತೆಯಲ್ಲಿ ಬಳಕೆದಾರರ ಬಳಿ ಪ್ರಶ್ನೆ ಹಾಕಿರುವುದು ಸುದ್ದಿಯಾಗಿದೆ.
ಇದನ್ನೂ ಓದಿ: ಬಿಹಾರ: ಅಕ್ರಮ ಮದ್ಯ ಸೇವಿಸಿ ದುರಂತ; ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಮಸ್ಕ್ ನಾನು ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ಎಂದು ಪೋಲ್ ಮಾಡಿ ಪ್ರಶ್ನೆ ಹಾಕಿದ್ದಾರೆ. ಇದರೊಂದಿಗೆ ಈ ಸಮೀಕ್ಷೆಯ ಫಲಿತಾಂಶಗಳಿಗೆ ನಾನು ಬದ್ಧನಾಗಿರುತ್ತೇನೆ ಎಂದಿದ್ದಾರೆ. ಇದುವರೆಗೆ ಶೇ.57 ಕ್ಕೂ ಹೆಚ್ಚು ಮಂದಿ ʼಯೆಸ್ʼ ಎಂದು ಆಯ್ಕೆ ಮಾಡಿದ್ದಾರೆ. ಇನ್ನು ಕೂಡ ಸಮೀಕ್ಷೆ ಮುಗಿಯಲು 7 ಗಂಟೆಗಳು ಬಾಕಿ ಉಳಿದಿವೆ. ನಾಳೆ ಬೆಳಗ್ಗೆ ಈ ಸಮೀಕ್ಷೆಯ ಫಲಿತಾಂಶ ಗೊತ್ತಾಗಲಿದೆ.
ಇದಾದ ಬಲಿಕ ಮಸ್ಕ್ ಮತ್ತೊಂದು ಟ್ವೀಟ್ ಮಾಡಿದ್ದು, ಮುಂದೆ, ಪ್ರಮುಖ ನೀತಿ ಬದಲಾವಣೆಗಳಿಗೆ ಮತದಾನ ನಡೆಯಲಿದೆ. ನಾನು ಕ್ಷಮೆಯಾಚಿಸುತ್ತೇನೆ. ಮತ್ತೆ ಹೀಗಾಗುವುದಿಲ್ಲ ಎಂದಿದ್ದಾರೆ.
ಭಾನುವಾರವಷ್ಟೇ ಟ್ವಿಟರ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮವನ್ನು ಪ್ರಚಾರ ಮಾಡುವ ಖಾತೆಗಳನ್ನು ನಿಷೇಧಿಸಲಾಗುತ್ತದೆ ಎಂದು ಘೋಷಿಸಿತ್ತು.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.