ಡಬಲ್‌ ಮರ್ಡರ್‌ ಮಾಡಿ ಮನೆ ದರೋಡೆ

Team Udayavani, Dec 19, 2022, 12:05 PM IST

tdy-6

ಬೆಂಗಳೂರು: ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಮನೆಕೆಲಸಗಾರ ಮತ್ತು ಭದ್ರತಾ ಸಿಬ್ಬಂದಿಯನ್ನು ಕೊಲೆಗೈದು, ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಾವಣಗೆರೆ ಮೂಲದ ಕರಿಯಪ್ಪ(52) ಮತ್ತು ನೇಪಾಳ ಮೂಲದ ದಿಲ್‌ ಬಹದ್ದೂರ್‌ (50) ಕೊಲೆಯಾದವರು. ಕೃತ್ಯ ಎಸಗಿರುವ ಹಂತಕರು ಮನೆಯಲ್ಲಿದ್ದ ಐದು ಲಕ್ಷ ರೂ. ನಗದು, 100 ಗ್ರಾಂಗೂ ಅಧಿಕ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕೃತ್ಯ ಎಸಗಿದ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ. ಕೋರಮಂಗಲದ 6ನೇ ಬ್ಲಾಕ್‌ ನಲ್ಲಿರುವ ದಾವಣಗೆರೆ ಮೂಲದ ರಾಜಗೋಪಾಲರೆಡ್ಡಿ ಎಂಬವರ ಮನೆಯಲ್ಲಿ ಭಾನುವಾರ ನಸುಕಿನಲ್ಲಿ ದುರ್ಘ‌ಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.

ರಾಜಗೋಪಾಲ ರೆಡ್ಡಿ ಶಿಕ್ಷಣ ಸಂಸ್ಥೆಯ ಪಾಲುದಾರರಾಗಿದ್ದಾರೆ. ಕರಿಯಪ್ಪ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ದಿಲ್‌ ಬಹದ್ದೂರ್‌ 2 ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿದ್ದ. ಶನಿವಾರ ಸಂಬಂಧಿಕರೊಬ್ಬರ ಮದುವೆಗಾಗಿ ರಾಜಗೋಪಾಲರೆಡ್ಡಿ ಕುಟುಂಬ ಸಮೇತ ಅನಂತಪುರಕ್ಕೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಕೆಲಸಗಾರ ಕರಿಯಪ್ಪ ಮತ್ತು ಭದ್ರತಾ ಸಿಬ್ಬಂದಿ ದಿಲ್‌ ಬಹದ್ದೂರ್‌ ಇಬ್ಬರೇ ಇದ್ದರು. ಭಾನುವಾರ ನಸುಕಿನ 12.30ರ ಸುಮಾರಿಗೆ ಮನೆಗೆ ನುಗ್ಗಿರುವ ಹಂತಕರು ಮೊದಲಿಗೆ ಕರಿಯಪ್ಪನ ಮೇಲೆ ಹಲ್ಲೆ ನಡೆಸಿ, ಕೈ ಮತ್ತು ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಬೆಳಗ್ಗೆ ಇತರೆ ಮನೆಕೆಲಸಗಾರರು ಮನೆಗೆ ಬಂದಾಗ ಕರಿಯಪ್ಪನ ಕೊಲೆ ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಕೋರಮಂಗಲ ಪೊಲೀಸರು ಸ್ಥಳ ಮಹಜರು ಆರಂಭಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ದಿಲ್‌ ಬಹದ್ದೂರ್‌ ಕೆಲಸಗಾರನನ್ನು ಕೊಂದು ದರೋಡೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿತ್ತು.

ಸೆಕ್ಯೂರಿಟಿ ಗಾರ್ಡ್‌ ಹತ್ಯೆ: ಆದರೆ ಮೂರು ನೀರಿನ ಸಂಪ್‌ಗ್ಳ ಶೋಧಿಸಿದಾಗ ಸಂಜೆ ವೇಳೆಗೆ ಒಂದು ಸಂಪ್‌ನಲ್ಲಿ ಭದ್ರತಾ ಸಿಬ್ಬಂದಿ ದಿಲ್‌ ಬಹದ್ದೂರ್‌ ಮೃತದೇಹ ಪತ್ತೆಯಾಗಿದೆ. ಆತನ ಮೇಲೂ ಹಲ್ಲೆ ನಡೆಸಿ ಕೈ, ಕಾಲು ಕಟ್ಟಿ ನೀರಿನ ಸಂಪ್‌ನಲ್ಲಿ ಹಾಕಲಾಗಿದೆ. ಪ್ರಾಥಮಿಕ ವಿಚಾರಣೆ ಯಲ್ಲಿ ದಿಲ್‌ ಬಹದ್ದೂರ್‌ ನೇಪಾಳ ಮೂಲದವ ನಾಗಿದ್ದು, ಅಸ್ಸಾಂ ನಿವಾಸಿ ಎಂದು ಆಧಾರ್‌ ಕಾರ್ಡ್‌ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಆರೋಪಿಗಳ ಪತ್ತೆಯಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಡಿವಿಆರ್‌ ಕದ್ದು ಆರೋಪಿಗಳು ಎಸ್ಕೇಪ್‌: ಜೋಡಿ ಕೊಲೆಗೈದ ಹಂತಕರು ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಜತೆಗೆ ಸಾಕ್ಷ್ಯನಾಶ ಪಡಿಸುವ ಉದ್ದೇಶದಿಂದ ಮನೆಯ ಸಿಸಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ್ದು, ಅದರ ಡಿವಿಆರ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. ಹೀಗಾಗಿ ಪೊಲೀಸರು ಮನೆಯ ಸುತ್ತ-ಮುತ್ತಲ ಕಟ್ಟಡಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಹಂತಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಮತ್ತೂಂದೆಡೆ ಕೃತ್ಯದ ಮಾದರಿ ಗಮನಿಸಿದರೆ, ರಾಜಗೋಪಾಲ ರೆಡ್ಡಿ ಮತ್ತು ಅವರ ಮನೆ ಕೆಲಸಗಾರರ ಬಗ್ಗೆ ತಿಳಿದುಕೊಂಡಿರುವ ವ್ಯಕ್ತಿಗಳೇ ಕರಿಯಪ್ಪ ದಿಲ್‌ ಬಹದ್ದೂರ್‌ ಕೊಲೆಗೈದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದರು.

ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಎರಡು ತಂಡ ರಚಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ನಗದು, ಚಿನ್ನಾಭರಣಕ್ಕಾಗಿ ಕೊಲೆಗೈಯಲಾಗಿದೆ ಎಂಬುದು ಗೊತ್ತಾಗಿದೆ. -ಸಿ.ಕೆ.ಬಾಬಾ, ಆಗ್ನೇಯ ವಿಭಾಗ ಡಿಸಿಪಿ

ಟಾಪ್ ನ್ಯೂಸ್

Mangaluru: ಮೆಡಿಕಲ್‌ ಶಾಪ್‌ಗೆ ತೆರಳಿದ ಯುವತಿ ನಾಪತ್ತೆ

Mangaluru: ಮೆಡಿಕಲ್‌ ಶಾಪ್‌ಗೆ ತೆರಳಿದ ಯುವತಿ ನಾಪತ್ತೆ

Kundapura ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ

Kundapura ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ

Thief Case ಮಲಗಿದ್ದ ವೃದ್ಧೆಯ ಕಿವಿಯ ಆಭರಣ ಕಳವು

Thief Case ಮಲಗಿದ್ದ ವೃದ್ಧೆಯ ಕಿವಿಯ ಆಭರಣ ಕಳವು

Gangolli ಪೊಲೀಸ್‌ ವಾಹನ ಪಲ್ಟಿ ; ಇಬ್ಬರಿಗೆ ಗಾಯ

Gangolli ಪೊಲೀಸ್‌ ವಾಹನ ಪಲ್ಟಿ ; ಇಬ್ಬರಿಗೆ ಗಾಯ

Kapu ರಿಕ್ಷಾ ಮಾಲಕ ನೇಣಿಗೆ ಶರಣು

Kapu ರಿಕ್ಷಾ ಮಾಲಕ ನೇಣಿಗೆ ಶರಣು

Mulki: ಕಾರು ಡಿವೈಡರ್‌ಗೆ ಢಿಕ್ಕಿ; ಐವರಿಗೆ ಗಾಯ

Mulki: ಕಾರು ಡಿವೈಡರ್‌ಗೆ ಢಿಕ್ಕಿ; ಐವರಿಗೆ ಗಾಯ

Maldievs

T20 ವಿಶ್ವಕಪ್‌ ವಿಜೇತರಿಗೆ ಮಾಲ್ಡೀವ್ಸ್‌ ಆಹ್ವಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಶಾಸಕರಿಗೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್‌ ಬಿದ್ದು ವೃದ್ಧ ಕೋಮಾಕ್ಕೆೆ

Bengaluru: ಶಾಸಕರಿಗೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್‌ ಬಿದ್ದು ವೃದ್ಧ ಕೋಮಾಕ್ಕೆೆ

Bengaluru: ನಿಯಂತ್ರಣ ತಪ್ಪಿದ ಬುಲೆಟ್‌ ತಡೆಗೋಡೆಗೆ ಡಿಕ್ಕಿ: ಸವಾರ ಸಾವು

Bengaluru: ನಿಯಂತ್ರಣ ತಪ್ಪಿದ ಬುಲೆಟ್‌ ತಡೆಗೋಡೆಗೆ ಡಿಕ್ಕಿ: ಸವಾರ ಸಾವು

Bengaluru: ರಾಜಕಾಲುವೆಗೆ ಬಿದ್ದಿದ್ದ ದ್ವಿಚಕ್ರ ಸವಾರನ ಶವ 3 ದಿನ ಬಳಿಕ ಪತ್ತೆ

Bengaluru: ರಾಜಕಾಲುವೆಗೆ ಬಿದ್ದಿದ್ದ ದ್ವಿಚಕ್ರ ಸವಾರನ ಶವ 3 ದಿನ ಬಳಿಕ ಪತ್ತೆ

Nandini Milk: ನಂದಿನಿ ಹಾಲು, ಮೊಸರಿನ ಜತೆ ಶೀಘ್ರ ದೋಸೆ ಹಿಟ್ಟು 

Nandini Milk: ನಂದಿನಿ ಹಾಲು, ಮೊಸರಿನ ಜತೆ ಶೀಘ್ರ ದೋಸೆ ಹಿಟ್ಟು 

Arrested: ಪಿಜಿ ಬಗ್ಗೆ ಕೆಟ್ಟ ವಿಮರ್ಶೆ ಮಾಡಿದ್ದಕ್ಕೆ ಯುವತಿಗೆ ಕಿರುಕುಳ; ಮಾಲೀಕ ಸೆರೆ

Arrested: ಪಿಜಿ ಬಗ್ಗೆ ಕೆಟ್ಟ ವಿಮರ್ಶೆ ಮಾಡಿದ್ದಕ್ಕೆ ಯುವತಿಗೆ ಕಿರುಕುಳ; ಮಾಲೀಕ ಸೆರೆ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Mangaluru: ಮೆಡಿಕಲ್‌ ಶಾಪ್‌ಗೆ ತೆರಳಿದ ಯುವತಿ ನಾಪತ್ತೆ

Mangaluru: ಮೆಡಿಕಲ್‌ ಶಾಪ್‌ಗೆ ತೆರಳಿದ ಯುವತಿ ನಾಪತ್ತೆ

Kundapura ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ

Kundapura ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ

1-lulu

Wimbledon-2024; ರಿಬಾಕಿನಾ, ಸ್ವಿಟೋಲಿನಾ ಕ್ವಾರ್ಟರ್‌ ಫೈನಲ್‌ ಯಾನ

Thief Case ಮಲಗಿದ್ದ ವೃದ್ಧೆಯ ಕಿವಿಯ ಆಭರಣ ಕಳವು

Thief Case ಮಲಗಿದ್ದ ವೃದ್ಧೆಯ ಕಿವಿಯ ಆಭರಣ ಕಳವು

1-yuvi

Abhishek Sharma ಸೆಂಚುರಿ ಹೊಡೆದ್ದು ಗಿಲ್‌ ಬ್ಯಾಟ್‌ನಲ್ಲಿ!: ಸಂತಸಪಟ್ಟ ಯುವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.