ರಾಹುಲ್ ಗಾಂಧಿ ವಿರುದ್ಧ ಲೋಕಸಭೆಯಲ್ಲಿ ಕಿಡಿ ಕಾರಿದ ವಿದೇಶಾಂಗ ಸಚಿವ ಜೈಶಂಕರ್!
ರಾಜಕೀಯ ಟೀಕೆಗೆ ಯಾವುದೇ ಸಮಸ್ಯೆ ಇಲ್ಲ , ಸೈನಿಕರ ಕುರಿತು ಆ ಪದ ಬಳಸಬೇಡಿ
Team Udayavani, Dec 19, 2022, 7:45 PM IST
ನವದೆಹಲಿ: ತವಾಂಗ್‌ನಲ್ಲಿ ನಡೆದ ಭಾರತ-ಚೀನ ಸಂಘರ್ಷವನ್ನು ಉಲ್ಲೇಖಿಸುವಾಗ ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿಯವರು “ಪಿಟಾಯಿ” (ಹೊಡೆಯುವುದು) ಪದವನ್ನು ಬಳಸಿರುವುದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೋಮವಾರ ತೀವ್ರವಾಗಿ ಆಕ್ಷೇಪಿಸಿದ್ದಾರೆ.
ಚೀನ ನಮ್ಮ ಯೋಧರನ್ನು ಥಳಿಸುತ್ತಿದೆ ಎಂಬ ಗಾಂಧಿಯವರ ಆರೋಪಗಳಿಗೆ ಉತ್ತರವಾಗಿ ಲೋಕಸಭೆಯಲ್ಲಿ ‘ಕಡಲ್ಗಳ್ಳತನ ವಿರೋಧಿ ಮಸೂದೆ’ಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಉತ್ತರಿಸಿ ”ನಮ್ಮ ಸೈನಿಕರು ಅರುಣಾಚಲ ಪ್ರದೇಶ ದಲ್ಲಿ ಯಾಂಗ್ಟ್ಸೆಯಲ್ಲಿ ತಮ್ಮ ನೆಲದ ಪರವಾಗಿ ನಿಂತಿದ್ದಾರೆ ಮತ್ತು ಅದನ್ನು ಶ್ಲಾಘಿಸಬೇಕು ಮತ್ತು ಗೌರವಿಸಬೇಕು ”ಎಂದಿದ್ದಾರೆ.
ಸರ್ಕಾರದ ಕ್ರಮಗಳ ಬಗ್ಗೆ ರಾಜಕೀಯ ಟೀಕೆಗೆ ಯಾವುದೇ ಸಮಸ್ಯೆ ಇಲ್ಲ, ಆದರೆ ದೇಶದ ಗಡಿಗಳನ್ನು ಕಾವಲು ಕಾಯುತ್ತಿರುವ ಸೈನಿಕರ ನೇರ ಅಥವಾ ಪರೋಕ್ಷ ಟೀಕೆಗಳನ್ನು ವಿರೋಧಿಸುತ್ತೇವೆ ಎಂದು ಜೈಶಂಕರ್ ಹೇಳಿದರು.
“ನಮ್ಮ ಯೋಧರಿಗೆ ‘ಪಿಟಾಯಿ’ (ಹೊಡೆಯುವುದು) ಪದವನ್ನು ಬಳಸಬಾರದು. ನಮ್ಮ ಯೋಧರು ತಮ್ಮ ನೆಲದಲ್ಲಿ ನಿಂತಿದ್ದಾರೆ. ಅವರನ್ನು ಗೌರವಿಸಬೇಕು ಮತ್ತು ಪ್ರಶಂಸಿಸಬೇಕು. ಇದು ಸೂಕ್ತವಲ್ಲ” ಎಂದರು.
ನಾವು ನಮ್ಮ ಯೋಧರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಟೀಕಿಸಬಾರದು ಎಂದು ನಾನು ಭಾವಿಸುತ್ತೇನೆ. ನಮ್ಮ ಯೋಧರು ಯಾಂಗ್ಟ್ಸೆಯಲ್ಲಿ 13,000 ಅಡಿ ಎತ್ತರದಲ್ಲಿ ನಿಂತು, ನಮ್ಮ ಗಡಿಯನ್ನು ರಕ್ಷಿಸುತ್ತಿರುವಾಗ, ಅವರು ‘ಪಿಟಾಯಿ’ ಪದಕ್ಕೆ ಅರ್ಹರಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.