ಕಳೆದ ಅಧಿವೇಶನದ ಬಿಲ್ ಬಾಕಿ; ಕಾಂಗ್ರೆಸ್ ತರಾಟೆ
Team Udayavani, Dec 19, 2022, 9:44 PM IST
ಬೆಂಗಳೂರು: ಕಳೆದ ವರ್ಷದ ಬೆಳಗಾವಿ ಅಧಿವೇಶನದಲ್ಲಿ ಲಾಡ್ಜ್ ಮತ್ತು ಹೊಟೇಲ್ ಬಿಲ್ ಮೊತ್ತವನ್ನು ಬಾಕಿ ಉಳಿಸಿಕೊಂಡ ಸರಕಾರವನ್ನು ವಿಪಕ್ಷ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಕಳೆದ ವರ್ಷದ ಬೆಳಗಾವಿ ಅಧಿವೇಶನಕ್ಕೆ ಸಂಬಂಧಿಸಿದ ಬಿಲ್ ಮೊತ್ತವನ್ನು ಬಾಕಿ ಉಳಿಸಿಕೊಂಡ ಸರಕಾರ ಅದರಲ್ಲೂ 40 ಪರ್ಸೆಂಟ್ ಲೂಟಿಗೆ ಹುನ್ನಾರ ನಡೆಸಿದೆಯೇ ಮುಖ್ಯಮಂತ್ರಿ ಬೊಮ್ಮಾಯಿ ಅವರೇ’ ಎಂದು ಪ್ರಶ್ನಿಸಿದೆ.
ಸಣ್ಣ ಸಣ್ಣ ಬಿಲ್‌ಗಳನ್ನೂ ಪಾವತಿ ಮಾಡದಷ್ಟು ಬರಗೆಟ್ಟಿದೆಯೇ ಈ ಬಿಜೆಪಿ ಫಾರ್ ಕರ್ನಾಟಕ ಸರಕಾರ? ಇಂತಹ ಲಜ್ಜೆಗೇಡಿ ಸರಕಾರ ಇರುವುದು ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲು ಎಂದು ವಾಗ್ಧಾಳಿ ನಡೆಸಿದೆ.
ಸಂಸ್ಕೃತ ವಿವಿಗೆ ಮನ್ನಣೆ ನೀಡುವ ಬಿಜೆಪಿ ಸರಕಾರ, ಬುಡಕಟ್ಟು ವಿಶ್ವವಿದ್ಯಾನಿಲಯದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಜಾನಪದದ ಶ್ರೀಮಂತಿಕೆ ಹೊಂದಿದ ಬುಡಕಟ್ಟು ಸಂಸ್ಕೃತಿಯು ಬಿಜೆಪಿ ಪ್ರಕಾರ ಅಧ್ಯಯನ ಯೋಗ್ಯವಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದೆ.
ಅಗಲಿದ ಗಣ್ಯರಿಗೆ ಉಭಯ ಸದನದಲ್ಲಿ ಸಂತಾಪ
ಬೆಳಗಾವಿ: ಇತ್ತೀಚೆಗೆ ನಿಧನ ಹೊಂದಿದ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ, ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದಿಕಿ, ಮಾಜಿ ಸಂಸದ ಕೊಳೂರು ಬಸನಗೌಡ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, ಮಾಜಿ ಶಾಸಕರಾದ ಜಬ್ಟಾರ್ ಖಾನ್ ಹೊನ್ನಳ್ಳಿ, ಎಸ್.ಎಸ್. ಪೂಜಾರಿ, ಸುಧೀಂದ್ರ ರಾವ್ ಕಸ್ಬೆ, ಎನ್.ಟಿ. ಬೋಪಣ್ಣ, ಶ್ರೀಶೈಲಪ್ಪ ಬಿದರೂರು, ಕುಂಬಳೆ ಸುಂದರ್ ರಾವ್, ಶಂಕರ ಗೌಡ ಎಸ್. ಪಾಟೀಲ್, ನಟ ಲೋಹಿತಾಶ್ವ, ಯಕ್ಷಗಾನ ಕಲಾವಿದ ಬಂಗಾರ್ ಆಚಾರ್, ಕೆರೆ ನಿರ್ಮಾತೃ ಕಲ್ಮನೆ ಕಾಮೇಗೌಡ, ವೇದಾಂತ ವಿದ್ವಾನ್ ಆರ್.ಎಲ್. ಕಶ್ಯಪ್ ಸಹಿತ ಅಗಲಿದ ಹಲವು ಗಣ್ಯರಿಗೆ ಸೋಮವಾರ ಉಭಯ ಸದನಗಳಲ್ಲಿ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.