ಕೂಳೂರು: ಕುಂಟುತ್ತಾ ಸಾಗುತ್ತಿದೆ ಸೇತುವೆ ಕಾಮಗಾರಿ
ಗುತ್ತಿಗೆದಾರರ ಬದಲಾವಣೆ ವಿಳಂಬಕ್ಕೆ ಕಾರಣ?
Team Udayavani, Dec 20, 2022, 6:30 AM IST
ಕೂಳೂರು : ಮಂಗಳೂರು – ಉಡುಪಿ ಸಂಪರ್ಕ ಕಲ್ಪಿಸುವ ಕೂಳೂರು ಗುರುಪುರ ನದಿಗೆ ಆರು ಪಥ ಸೇತುವೆ ನಿರ್ಮಿಸುವ ಕಾಮಗಾರಿ ಆಮೆಗತಿಯಿಯಲ್ಲಿ ನಡೆಯು ತ್ತಿದ್ದು, ಸರಕಾರ ಗುತ್ತಿಗೆದಾರರಿಗೆ ನೀಡಿದ ಅವಧಿ ಮುಗಿಯುವ ಹಂತದಲ್ಲಿದೆ. ಇದರ ನಡುವೆ ಗುತ್ತಿಗೆದಾರರ ಬದಲಾವಣೆಯೂ ಸಮಸ್ಯೆ ತಂದೊಡ್ಡಿದೆ.
ರಾಷ್ಟ್ರೀಯ ಹೆದ್ದಾರಿ 66ರ ಹೆದ್ದಾರಿ ಚತುಷ್ಪಥಕ್ಕೆ ಬರೋಬ್ಬರಿ ಹತ್ತು ವರ್ಷ, ಪಂಪ್ ವೆಲ್ ಮೇಲ್ಸೇತುವೆ ಪೂರ್ಣ ನಿರ್ಮಾಣಕ್ಕೂ ಏಳೆಂಟು ವರ್ಷ ತಗುಲಿದ್ದರೆ, ಈಗ ಕೂಳೂರು ಸೇತುವೆಯೂ ಕುಂಟುತ್ತಾ ಸಾಗಿದೆ.
ಈಗಾಗಲೇ ಕೇರಳ ಗೋವಾ ನಡುವೆ ಸಂಪರ್ಕ ಕಲ್ಪಿಸುವ ದ.ಕ. ಜಿಲ್ಲೆಯಿಂದ ಹಾದು ಹೋಗುವ ಈ ಹೆದ್ದಾರಿ 66 ಕರ್ನಾಟಕದ ಕರಾವಳಿಗೂ ಪ್ರಮುಖ ಹೆದ್ದಾರಿಯಾಗಿದೆ.
ಸಾವಿರಾರು ಉದ್ದಿಮೆಗಳು, ಒಂದು ಬಂದರು, ಗೂಡ್ಸ್ ರೈಲು ಸಂಪರ್ಕ ಹೀಗೆ ಆರ್ಥಿಕ ಚಟುವಟಿಕೆಯ ಕೇಂದ್ರ ಸ್ಥಳದಲ್ಲಿ ಹಾದು ಹೋಗಿದೆ. ವಾಹನಗಳ ಒತ್ತಡ ಹೆಚ್ಚುತ್ತಲೇ ಇದೆ. ಅಧಿಕ ಭಾರದ ಟ್ರಕ್, ಟ್ಯಾಂಕರ್, ಕಂಟೈನರ್‌ಗಳು ಹಳೆ ಸೇತುವೆಯಲ್ಲಿ ನಿತ್ಯವೂ ಸಾಗುತ್ತವೆ. ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ಈ ಸೇತುವೆ ಆಯಸ್ಸು ಮುಗಿದಿದ್ದರೂ ಈಗಲೂ ಓಡಾಟಕ್ಕೆ ಬಳಕೆಯಾಗುತ್ತಿದೆ. ಹೆಚ್ಚಿನ ಭಾರವನ್ನು ತಾಳಿಕೊಳ್ಳುವ ಶಕ್ತಿ ಈ ಸೇತುವೆ ಕಳೆದುಕೊಂಡಿದೆ.
ಸರಕಾರ ತುರ್ತಾಗಿ ಯಾವುದೇ ಅವಘಡ ಸಂಭವಿಸುವ ಮುನ್ನ ಸೇತುವೆ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕಿದೆ.
ಕಾಮಗಾರಿಗಳ ವೇಗವರ್ಧನೆಗೆ ಕ್ರಮ
ಹೆದ್ದಾರಿ 66ರಲ್ಲಿ ವಾಹನ ಓಡಾಟ ಸುಗಮಗೊಳಿಸಲು ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರಕ್ಕೆ ಪತ್ರ ಬರೆಯ ಲಾಗಿದೆ. 6 ಪಥ ಕೂಳೂರು ಸೇತುವೆ ಕಾಮಗಾರಿ ವೇಳೆ ಹಿಂದಿನ ಗುತ್ತಿಗೆ ದಾರರು ಬಿಟ್ಟು ಹೋಗಿರುವುದೂ ವಿಳಂಬವಾಗಲು ಕಾರಣವಾಗಿದೆ. ಇದೀಗ ಇದರ ವೇಗವರ್ಧನೆಗೆ ಬೇಕಾದ ಕ್ರಮ ಕೈಗೊಳ್ಳಿ ಎಂದು ಸಂಸದರ ಮೂಲಕ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
-ಡಾ| ಭರತ್ ಶೆಟ್ಟಿ ವೈ., ಶಾಸಕರು ಮಂಗಳೂರು ಉತ್ತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
Surathkal: ಬೇಕು ವ್ಯವಸ್ಥಿತ ಒಳಚರಂಡಿ; ಸೋರುತ್ತಿರುವ ವೆಟ್‌ವೆಲ್‌ಗಳಿಂದ ಮಾಲಿನ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.