1,20,000 ರೂ. ಮ್ಯಾಕ್ಬುಕ್ ಪ್ರೊ ಆರ್ಡರ್ ಮಾಡಿದಾತನಿಗೆ ಬಂದದ್ದು ನಾಯಿಗೆ ಹಾಕುವ ಪೆಡಿಗ್ರಿ.!
Team Udayavani, Dec 20, 2022, 11:33 AM IST
ವಾಷಿಂಗ್ಟನ್: ಆನ್ಲೈನ್ ನಲ್ಲಿ ನಾವು ಏನನ್ನು ಬುಕ್ ಮಾಡುತ್ತೇವೆ ಅದೇ ವಸ್ತು ಡೆಲಿವರಿ ಆಗುತ್ತದೆ ಎಂದು ಪ್ರತಿ ಬಾರಿ ಅಂದುಕೊಳ್ಳಬಾರದು. ಈ ಮಾತು ಹೇಳಲು ಕಾರಣವೇನೆಂದರೆ ವ್ಯಕ್ತಿಯೊಬ್ಬ 1,20,000 ರೂ. ಪಾವತಿಸಿ ಆ್ಯಪಲ್ ಮ್ಯಾಕ್ಬುಕ್ ಗಾಗಿ ಕಾದು ಕುಳಿತಿದ್ದರು. ಆದರೆ ಆತನಿಗೆ ಆದದ್ದು ಮಾತ್ರ…
ಇತ್ತೀಚೆಗೆ ಯುಕೆ ಡರ್ಬಿಶೈರ್ ಮೂಲದ ಅಲನ್ ವುಡ್ ತನ್ನ ಮಗಳಿಗೆ ಕನಸಿನ ಆ್ಯಪಲ್ ಮ್ಯಾಕ್ಬುಕ್ ಖರೀದಿಸಲು ಬರೋಬ್ಬರಿ 1,20,000 ರೂ. ಒಟ್ಟು ಮಾಡಿ ಅಮೆಜಾನ್ ನಿಂದ ಆರ್ಡರ್ ಮಾಡಿದ್ದಾನೆ. ಅಮೆಜಾನ್ ನಿಂದ ಎರಡು ಬಾಕ್ಸ್ ಗಳು ಬಂದಿವೆ. ಇನ್ನೇನು ಆ್ಯಪಲ್ ಮ್ಯಾಕ್ಬುಕ್ ತೆಗೆದು ನೋಡಬೇಕು ಆ ವೇಳೆಗಾಗಲೇ ಬಾಕ್ಸ್ ಒಳಗೆ ಇದ್ದದ್ದನ್ನು ನೋಡಿ ಶಾಕ್ ಆಗಿದ್ದಾರೆ.
ಇದನ್ನೂ ಓದಿ:8ನೇ ಕ್ಲಾಸ್ ಫೇಲ್, ಐಪಿಎಸ್ ಅಧಿಕಾರಿಯ ಪೋಸ್.. ಮಹಿಳೆಯರನ್ನು ವಂಚಿಸಿ ಹಣ ಲೂಟಿ
ಅಮೆಜಾನ್ನ ಪ್ಯಾಕೇಜ್ನಲ್ಲಿ ಮ್ಯಾಕ್ಬುಕ್ ಪ್ರೊ ಬದಲಿಗೆ ಎರಡು ಬಾಕ್ಸ್ಗಳ ನಾಯಿಗೆ ಹಾಕುವ ಪೆಡಿಗ್ರಿ ಆಹಾರವಿರುತ್ತದೆ. ಇದರಲ್ಲಿ 24 ಪ್ಯಾಕೆಟ್ಗಳ “ಮಿಕ್ಸ್ಡ್ ಸೆಲೆಕ್ಷನ್ ಇನ್ ಜೆಲ್ಲಿ” ಫ್ಲೇವರ್ಗಳಿರುತ್ತವೆ. ಇದು ಅಲನ್ ಅವರಿಗೆ ಅಚ್ಚರಿ ತರುತ್ತದೆ.
“ಮೊದಲಿಗೆ ನಾನು ಗೊಂದಲವನ್ನು ಪರಿಹರಿಸಬಹುದೆಂದು ನಂಬಿದ್ದೆ, ಆದರೆ ಅಮೆಜಾನ್ ಗ್ರಾಹಕ ಸೇವೆಯೊಂದಿಗೆ ಮಾತನಾಡಿದ ನಂತರ, ಅವರು ನನಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ನಾಯಿಯ ಆಹಾರವನ್ನು ಗೋದಾಮಿಗೆ ಹಿಂತಿರುಗಿಸಿದೆ, ಆದರೆ ಅದು ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ”ವುಡ್ ಹೇಳಿದರು.
15 ಗಂಟೆಗೂ ಹೆಚ್ಚು ಕಾಲ ಗ್ರಾಹಕ ಸಿಬ್ಬಂದಿಯೊಂದಿಗೆ ಅಲನ್ ಮಾತನಾಡಿದ್ದಾರೆ. ಪ್ರತಿ ಬಾರಿಯೂ ಅವರಿಗೆ ಅಲ್ಲಿಂದ ಯಾವುದೇ ಸರಿಯಾದ ಉತ್ತರ ಸಿಕ್ಕಿಲ್ಲ. ಇದುವೆರಗೂ ಈ ರೀತಿಯ ಸಮಸ್ಯೆ ಅಲನ್ ಅವರಿಗೆ ಆಗಿಲ್ಲ. ಕಂಪೆನಿ ಶೀಘ್ರದಲ್ಲಿ ಅಲನ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದೆ. ಆದರೆ ಇದುವರೆಗೆ ಅದು ಆಗಿಲ್ಲ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.