ಬಾಬರ್ ಒಬ್ಬ ದೊಡ್ಡ ಜೀರೋ, ಕೊಹ್ಲಿ ಜತೆ ಹೋಲಿಕೆ ಮಾಡಬೇಡಿ ಎಂದ ಮಾಜಿ ಪಾಕ್ ಆಟಗಾರ
Team Udayavani, Dec 20, 2022, 6:41 PM IST
ಕರಾಚಿ: ಬಾಬರ್ ಅಜಮ್ ನಾಯಕತ್ವದ ಪಾಕಿಸ್ಥಾನ ತಂಡವು ತವರಿನಲ್ಲೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತು ಮುಖಭಂಗ ಅನುಭವಿಸಿದೆ. ವೈಟ್ ವಾಶ್ ಬೆನ್ನಲ್ಲೇ ಪಾಕ್ ತಂಡದ ವಿರುದ್ಧ ಮಾಜಿ ಆಟಗಾರರು ಟೀಕೆ ಆರಂಭಿಸಿದ್ದಾರೆ.
ಇದೇ ಮೊದಲ ಬಾರಿಗೆ ಪಾಕಿಸ್ಥಾನವು ತವರಿನಲ್ಲಿ ವೈಟ್ ವಾಶ್ ಅವಮಾನಕ್ಕೆ ಒಳಗಾಗಿದೆ. ಹೀಗಾಗಿ ತಂಡದ ಜೊತೆಗೆ ನಾಯಕ ಬಾಬರ್ ಅಜಮ್ ಕೂಡಾ ಟೀಕೆಗೆ ಒಳಗಾಗಿದ್ದಾರೆ. ಬಾಬರ್ ಅವರನ್ನು ವಿರಾಟ್ ಕೊಹ್ಲಿ ಜತೆಗೆ ಹೋಲಿಸಬಾರದು ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ.
“ಜನರು ಬಾಬರ್ ಆಜಮ್ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸುವುದನ್ನು ನಿಲ್ಲಿಸಬೇಕು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹವರು ಬಹಳ ದೊಡ್ಡ ಆಟಗಾರರು. ಪಾಕಿಸ್ತಾನಕ್ಕೆ ಅವರ ತಂಡದಲ್ಲಿ ಅವರಿಗೆ ಹೋಲಿಸಲು ಯಾರೂ ಇಲ್ಲ, ನೀವು ಅವರನ್ನು ಮಾತನಾಡಲು ಹೇಳಿದರೆ ಅವರು ರಾಜರಂತೆ ವರ್ತಿಸುತ್ತಾರೆ, ಯಾವಾಗ ರಿಸಲ್ಟ್ ಕೇಳುತ್ತೀರೋ ಆಗ ಅವರದ್ದು ದೊಡ್ಡ ಸೊನ್ನೆ” ಎಂದು ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವೀಡಿಯೊದಲ್ಲಿ ಹೇಳಿದ್ದಾರೆ.
ವೀಡಿಯೊದಲ್ಲಿ ಕನೇರಿಯಾ ಅವರು, ನಾಯಕತ್ವಕ್ಕೆ ಬಂದಾಗ ಬಾಬರ್ ಅವರನ್ನು “ದೊಡ್ಡ ಶೂನ್ಯ” ಎಂದು ಬಣ್ಣಿಸಿದ್ದಾರೆ. ಈ ಸರಣಿಯಲ್ಲಿ ಬ್ರೆಂಡನ್ ಮೆಕಲಮ್ ಮತ್ತು ಬೆನ್ ಸ್ಟೋಕ್ಸ್ ಅವರಿಂದ ಪಾಕಿಸ್ತಾನದ ನಾಯಕ ಕಲಿಯಬೇಕಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಮ್ಯಾನ್ ಹೋಲ್ ದುರಂತಗಳಿಗೆ ಕನ್ನಡಿ ಹಿಡಿದ ‘ವಿಟ್ನೆಸ್’ ಸಿನಿಮಾ
“ಬಾಬರ್ ಅಜಮ್ ನಾಯಕನಾಗಿ ದೊಡ್ಡ ಶೂನ್ಯ. ಅವರು ತಂಡವನ್ನು ಮುನ್ನಡೆಸಲು ಅರ್ಹರಲ್ಲ. ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ಗೆ ಬಂದಾಗ ಅವರು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿಲ್ಲ. ಈ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಮತ್ತು ಬ್ರೆಂಡನ್ ಮೆಕಲಮ್ ಅವರನ್ನು ನೋಡಿ ನಾಯಕತ್ವವನ್ನು ಕಲಿಯುವ ಉತ್ತಮ ಅವಕಾಶವಿತ್ತು. ಅದಲ್ಲದೆ ಅವರು ತಮ್ಮ ಅಹಂಕಾರವನ್ನು ಬದಿಗಿಟ್ಟು ನಾಯಕತ್ವ ಹೇಗೆ ಮಾಡಬೇಕೆಂದು ಸರ್ಫರಾಜ್ ಅಹ್ಮದ್ ಅವರನ್ನು ಕೇಳಬಹುದಿತ್ತು” ಎಂದು ಕನೇರಿಯಾ ಹೇಳಿದರು.
ವೀಡಿಯೊದಲ್ಲಿ ಮುಂದುವರಿದು ಕನೇರಿಯಾ ಅವರು, ಬಾಬರ್ ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ನಲ್ಲಿ ಆಡಬಾರದು ಎಂದು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.