“ದ.ಕೊರಿಯ ಹೇಳಿಕೆಗಳು ನಾಯಿ ಬೊಗಳುವುದಕ್ಕೆ ಸಮ’
ಉ.ಕೊರಿಯ-ದ.ಕೊರಿಯ ನಡುವೆ ಮತ್ತೆ ಭುಗಿಲೆದ್ದಿದೆ ಗಲಾಟೆ
Team Udayavani, Dec 21, 2022, 6:40 AM IST
ಸಿಯೋಲ್: ಸದಾ ದ.ಕೊರಿಯಾ ವಿರುದ್ಧ ಕಾಲು ಕೆರೆದುಕೊಂಡು ಜಗಳ ಮಾಡುವ ಉತ್ತರ ಕೊರಿಯಾ ಈಗ ಮತ್ತೆ ಕಿಡಿಕಾರಿದೆ. ಉ.ಕೊರಿಯಾ ಸೇನಾ ಉದ್ದೇಶದ ಗುಪ್ತಚರ ಉಪಗ್ರಹವನ್ನು ಪ್ರಯೋಗಾರ್ಥ ಉಡಾವಣೆ ಮಾಡಿದ್ದಲ್ಲ, ಅದು ನಿಜವಾಗಿ ಉಡಾವಣೆ ಮಾಡಿದ್ದು ಯುದ್ಧ ಕ್ಷಿಪಣಿಗಳನ್ನು ಎಂದು ದ.ಕೊರಿಯಾ ಆರೋಪಿಸಿತ್ತು. ಅದನ್ನು ತಿರಸ್ಕರಿಸಿರುವ ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೋ ಜಾಂಗ್, ದ.ಕೊರಿಯಾ ಅಭಿಪ್ರಾಯ ನಾಯಿ ಬೊಗಳುವುದಕ್ಕೆ ಸಮ, ನಿರುಪಯುಕ್ತ ತಲೆಹರಟೆ ಹೇಳಿಕೆಗಳು ಎಂದಿದ್ದಾರೆ.
ಭಾನುವಾರ ತಾನೊಂದು ಸೇನಾ ಉದ್ದೇಶದ ಗುಪ್ತಚರ ಉಪಗ್ರಹ ಉಡಾವಣೆ ಮಾಡಿದ್ದೇನೆಂದು ಉ.ಕೊರಿಯಾ ಹೇಳಿಕೊಂಡಿತ್ತು. ಆ ಉಪಗ್ರಹದ ಮೂಲಕ ತೆಗೆದಿದ್ದೆನ್ನಲಾದ ದ.ಕೊರಿಯಾ ನಗರಗಳ ಎರಡು ಚಿತ್ರಗಳನ್ನು ತನ್ನ ಪತ್ರಿಕೆಯಲ್ಲಿ ಬಿಡುಗಡೆ ಮಾಡಿತ್ತು. ಅತ್ಯಂತ ಕಡಿಮೆ ರೆಸೊಲ್ಯೂಷನ್ ಹೊಂದಿರುವ ಆ ಚಿತ್ರಗಳನ್ನು ದ.ಕೊರಿಯಾ ತಿರಸ್ಕರಿಸಿತ್ತು.
ಇದೇ ವೇಳೆ, ಉ.ಕೊರಿಯಾದ “ಉಡಾವಣೆಗಳ’ ಬೆನ್ನಲ್ಲೇ ಅಮೆರಿಕ ದ.ಕೊರಿಯಾಗೆ ಹಲವು ಅಣ್ವಸ್ತ್ರಸಜ್ಜಿತ ಯುದ್ಧ ವಿಮಾನಗಳನ್ನು ಕಳುಹಿಸಿದೆ. ದ.ಕೊರಿಯಾವನ್ನು ಎಂತಹ ಪರಿಸ್ಥಿತಿಯಲ್ಲೂ ರಕ್ಷಿಸುವುದಾಗಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.