ಜಗತ್ತಿಗೆ ಸಾಂಸ್ಕೃತಿಕ ಪರಂಪರೆ ಪರಿಚಯಿಸಲು ಮೂಡುಬಿದಿರೆ ಸಿದ್ಧ; ಏನೇನು ವಿಶೇಷತೆಗಳಿವೆ…

ವಿದ್ಯಾಗಿರಿಯಲ್ಲಿ ಜಾಂಬೂರಿಗಾಗಿ ವಿಶೇಷ ಕೃಷಿಮೇಳವನ್ನು ರೂಪಿಸಲಾಗಿದೆ.

Team Udayavani, Dec 21, 2022, 12:15 PM IST

ಜಗತ್ತಿಗೆ ಸಾಂಸ್ಕೃತಿಕ ಪರಂಪರೆ ಪರಿಚಯಿಸಲು ಮೂಡುಬಿದಿರೆ ಸಿದ್ಧ; ಏನೇನು ವಿಶೇಷತೆಗಳಿವೆ…

ಮೂಡುಬಿದಿರೆ: ವರ್ಷ ವರ್ಷವೂ ನುಡಿಸಿರಿ, ವಿರಾಸತ್‌ಗೆ ಕಳೆಗಟ್ಟುವ ಮೂಡುವೇಣುಪುರ ಈ ಬಾರಿ ಅಂತಾರಾಷ್ಟ್ರೀಯ ಸ್ಕೌಟ್‌ ಜಾಂಬೂರಿಯಿಂದಾಗಿ ಹೊಸ ಸ್ವರೂಪದೊಂದಿಗೆ ಜಗತ್ತಿಗೆ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವುದಕ್ಕೆ ಸಿದ್ಧಗೊಂಡಿದೆ.

ವಿವಿಧ ದೇಶ, ರಾಜ್ಯಗಳಿಂದ ಈಗಾಗಲೇ 20 ಸಾವಿರಗಳಷ್ಟು ಸ್ಕೌಟ್‌ ಗೈಡ್‌ಗಳು, ರೋವರ್ ರೇಂಜರ್ಗಳು, ಮೂಡುಬಿದಿರೆಗೆ ಬಂದಿಳಿದಿದ್ದಾರೆ. ಇಡೀ ವಿದ್ಯಾಗಿರಿ ದೇಶವಿದೇಶಗಳ ವಿದ್ಯಾರ್ಥಿಗಳಿಂದ ತುಂಬಿತುಳುಕುತ್ತಿದೆ. ಈಗಾಗಲೇ ಮಲೇಶ್ಯದ 24, ದಕ್ಷಿಣ ಕೊರಿಯದ 7 ಮಂದಿ ಸಹಿತ ವಿದ್ಯಾರ್ಥಿಗಳು ಆಗಮಿಸಿದ್ದಾರೆ.

ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಬೃಹತ್‌ ನೋಂದಣಿಯ ಬಳಿಕ ವಿದ್ಯಾರ್ಥಿಗಳನ್ನು ಜಿಲ್ಲೆ ಹಾಗೂ ತಾಲೂಕುಗಳಿಗೆ ಅನುಗುಣವಾಗಿ ವಿಂಗಡಿಸಿ, ವಿವಿಧ ಬ್ಲಾಕ್‌ಗಳಲ್ಲಿ ವಸತಿ ವ್ಯವಸ್ಥೆಗೆ ಅನುವು ಮಾಡಲಾಗಿದೆ. ಪ್ರತಿ ಬ್ಲಾಕ್‌ಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ನಿರ್ವಾಹಕರನ್ನು ನೇಮಿಸಲಾಗಿದೆ. ಆಳ್ವಾಸ್‌ ವಿಶಾಲ ಕ್ಯಾಂಪಸ್‌ನ 21 ವಿವಿಧ ವಸತಿ ನಿಲಯಗಳಲ್ಲಿ 44,500 ಸಾವಿರ ಮಕ್ಕಳಿಗೆ ವ್ಯವಸ್ಥೆ ಮಾಡಲಾಗಿದೆ. 10 ಸಾವಿರ ಸ್ಕೌಟ್‌ ಶಿಕ್ಷಕರಿಗೆ 3,500 ಘಟಕ ನಾಯಕರು, 7 ಸಾವಿರ ಸ್ವಯಂಸೇವಕರು ಆಗಮಿಸುತ್ತಿದ್ದಾರೆ.

ಕಿಟ್‌ ವ್ಯವಸ್ಥೆ
ಜಾಂಬೂರಿಗೆ ದೇಶ-ವಿದೇಶಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ 7 ದಿನಗಳಿಗೆ ಅಗತ್ಯವಿರುವ ಅಗತ್ಯ ಕಿಟ್‌ನ್ನು ಒದಗಿಸಲಾಗುವುದು. ಈ ಕಿಟ್‌ ಬ್ಯಾಗ್‌, ನೀರಿನ ಬಾಟಲಿ, ಬರೆಯುವ ಪುಸ್ತಕ, ಪೆನ್‌ ಸೇರಿದಂತೆ 15 ಸಾಮಗ್ರಿಗಳನ್ನು ಒಳಗೊಂಡಿದೆ.

ಹಬ್ಬದಡುಗೆಯ ಘಮ!
ಹಸಿದ ಹೊಟ್ಟೆಯನ್ನು ತಣಿಸಲು ಮೊದಲ ದಿನದಿಂದಲೇ ಮುಂಜಾನೆ 4 ಗಂಟೆಗೆ ರುಚಿಯಾದ ಉಪಹಾರ ಹಾಗೂ ಭೋಜನಕ್ಕೆ ಸಿದ್ಧತೆ ನಡೆಯುತ್ತಿದೆ. ನುರಿತ ಬಾಣಸಿಗರ ತಂಡ ಸಮಯಕ್ಕೆ ಸರಿಯಾಗಿ ಊಟೋಪಚಾರದ ನಿರ್ವಹಣೆ ಮಾಡಲಿದ್ದಾರೆ. ಆಯಾಯ ವಸತಿ ನಿಲಯಗಳಲ್ಲೇ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಪಾಕಶಾಲೆಯಲ್ಲಿ ಸುಮಾರು 3,000 ಜನರಿಗೆ ಅಡುಗೆ ಸಿದ್ಧಪಡಿಸಲಾಗುತ್ತಿದೆ. ಜಿಎಸ್‌ಬಿ, ಜೈನ್‌, ಬ್ರಾಹ್ಮಣ ಶೈಲಿಯ ಕರಾವಳಿ ರುಚಿಯ ಖಾದ್ಯಗಳು ಇರಲಿವೆ.

ಮಕ್ಕಳಿಗೆ ಕಾಂತಾರ ಶೋ
ಜಾಂಬೂರಿಗೆ ಆಗಮಿಸಿರುವ ಮಕ್ಕಳಿಗೆ ಸಿನೆಮಾ ವೀಕ್ಷಣೆಗೆ ಕೂಡ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಆಳ್ವಾಸ್‌ ಕಾಲೇಜಿನಲ್ಲೇ ಇರುವ “ಕುವೆಂಪು’, “ಶಿವರಾಮ ಕಾರಂತ’ ಎಂಬ ಎರಡು ಟಾಕೀಸ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ದಿನಕ್ಕೆ ನಾಲ್ಕು ಶೋಗಳಿರುತ್ತವೆ. ಇತ್ತೀಚೆಗಿನ ಹಿಟ್‌ ಸಿನೆಮಾಗಳಾದ “ಕಾಂತಾರ’, “ಚಾರ್ಲಿ 777′, “ಭಜರಂಗಿ ಭಾಯಿ ಜಾನ್‌’, ಮಕ್ಕಳ ಆಂಗ್ಲ ಭಾಷಾ ಸಿನೆಮಾ “ಅಪ್‌’ ಪ್ರದರ್ಶನಗೊಳ್ಳಲಿವೆ.

ಅಲ್ಲಲ್ಲಿ ಆಕರ್ಷಕ ಪ್ರತಿಮೆಗಳು
ವಿದ್ಯಾಗಿರಿಯಲ್ಲಿ ಜಾಂಬೂರಿಗಾಗಿ ವಿಶೇಷ ಕೃಷಿಮೇಳವನ್ನು ರೂಪಿಸಲಾಗಿದೆ. ಅದರ ಸುತ್ತಲೂ ಆಕರ್ಷಕ ಹಾಗೂ ಸಮಕಾಲೀನ ಸಾರ ಹೊಂದಿದ ಪ್ರತಿಮೆಗಳು ಗಮನಸೆಳೆಯಲಿವೆ. ಹೂಗಿಡಗಳ ಸಿಂಗಾರದೊಂದಿಗೆ ಯೋಗಿನಿ, ಶ್ರೀಕೃಷ್ಣ, ತಾಯಿ -ಮಗು ಇತ್ಯಾದಿ ಪ್ರತಿಮೆಗಳು ಆಕರ್ಷಿಸುತ್ತಿವೆ.

ಮೊಬೈಲಲ್ಲೂ ವೀಕ್ಷಿಸಿ
ಜಾಂಬೂರಿಗೆ ಸಹಸ್ರಾರು ವಿದ್ಯಾರ್ಥಿಗಳು, ಶಿಕ್ಷಕರು, ಹೆತ್ತ ವರು ಸಹಿತ ಸಾರ್ವಜನಿಕರೂ ಆಗಮಿಸಲಿದ್ದು, ಇವರೆಲ್ಲರ ಅನುಕೂಲಕ್ಕಾಗಿ 5 ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ, ಮನೋರಂಜನ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಚಟುವಟಿಕೆ ಗಳನ್ನು ನೇರಪ್ರಸಾರದ ಮೂಲಕ “ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌’ ಯೂಟ್ಯೂಬ್‌ ಚಾನೆಲ್‌ ನಲ್ಲಿ ಪ್ರಸಾರ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದ ಕ್ಯೂಆರ್‌ ಕೋಡ್‌ನ್ನು ಕ್ಯಾಂಪಸ್‌ನ ವಿವಿಧೆಡೆ ಬಿತ್ತರಿಸಲಾಗಿದೆ.

ಹೂಗಳ ಶೃಂಗಾರ
ಇಡೀ ವಿದ್ಯಾಗಿರಿ ಕ್ಯಾಂಪಸ್‌ಗಳಲ್ಲಿ ಆಗಮಿಸುವವರ ಕಣ್ಮನ ಸೆಳೆಯುವುದಕ್ಕಾಗಿ ಪುಷ್ಪಸಹಿತ ಗಿಡಗಳನ್ನು ಜೋಡಿಸಲಾಗಿದೆ. ಕ್ಯಾಂಪಸ್‌ನ ಆಯ್ದ ಇಳಿಜಾರು ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವುಗಳಲ್ಲಿ ಚೆಂಡು ಹೂ, ವರ್ಣರಂಜಿತ ಕ್ರೋಟನ್‌, ಪುಟಾಣಿ ಸಸ್ಯಗಳು, ಲಿಲ್ಲಿ, ಜೀನಿಯಾ, ಗುಲಾಬಿ ಇತ್ಯಾದಿಗಳನ್ನು ಜೋಡಿಸಲಾಗಿದ್ದು ಗಮನ ಸೆಳೆಯುತ್ತಿವೆ. ಅಮೆರಿಕ, ಹಾಲಂಡ್‌, ಜಪಾನ್‌, ಥಾಯ್‌ಲ್ಯಾಂಡ್‌, ತೈವಾನ್‌ ದೇಶಗಳಿಂಧ ಬೀಜಗಳನ್ನು ತಂದು ಬೆಳಗಾವಿ, ಪುಣೆಯಲ್ಲಿ ಸಸ್ಯಾಭಿವೃದ್ಧಿ ಪಡಿಸಿ ಅಲ್ಲಿಂದ ಆಳ್ವಾಸ್‌ ಕ್ಯಾಂಪಸ್‌ ಗೆ ತರಲಾಗಿದೆ. ಒಟ್ಟು ಸುಮಾರು 2 ಲಕ್ಷ ಗಿಡಗಳನ್ನು ಇಲ್ಲಿ ಜೋಡಿಸಲಾಗಿದೆ.

ಟಾಪ್ ನ್ಯೂಸ್

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaccc

Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

11

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

1-aaccc

Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು

3

Uppala: ಸುಮಾರು 3.5 ಕೋಟಿ ರೂ. ಮೌಲ್ಯದ ಅಮಲು ಪದಾರ್ಥ ವಶಕ್ಕೆ : ಬಂಧನ

sand

Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು

crime

Bidar; ಪತ್ನಿ ಜತೆ ಅನೈತಿಕ ಸಂಬಂಧ‌:ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಿದ ಪತಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.