ಜಿಲ್ಲೆಯ ಹಿಡಿತಕ್ಕೆ ಟೊಂಕ ಕಟ್ಟಿದ ಎಚ್‌ಡಿಕೆ
Team Udayavani, Dec 21, 2022, 4:23 PM IST
ರಾಮನಗರ : ಶತಾಯಗತಾಯ ಈ ಬಾರಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು. ಅದು ಸ್ವಂತ ಬಲದಲ್ಲಿ ಸರ್ಕಾರ ರಚನೆ ಮಾಡಿಯೇ ತೀರುತ್ತೇನೆ. ಇಲ್ಲವಾದರೆ ಪಕ್ಷ ವಿಸರ್ಜನೆಗೂ ಸಿದ್ಧ ಎಂದು ಘೋಷಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಮೂಲಕ ರಾಜ್ಯದಲ್ಲಿ ಮಿಂಚಿನ ಸಂಚಲನ ಮೂಡಿಸಿರುವುದಂತೂ ನಿಜ.
ಹೋದಲೆಲ್ಲ ಅದ್ಧೂರಿ ಜನಸಂದಣಿ ಇದಕ್ಕೆ ಪುಷ್ಟಿ ನೀಡುತ್ತಿದೆ. ಜೆಡಿ ಎಸ್ ಕಾರ್ಯಕರ್ತರು, ನಾಯಕರು ಮತ್ತು ಟಿಕೆಟ್ ಆಕಾಂಕ್ಷಿಗಳಲ್ಲಿ ಸಹಜವಾಗಿಯೇ ಉತ್ಸಾಹ ಹೆಚ್ಚಿದೆ. ಪಂಚ ರತ್ನ ರಥಯಾತ್ರೆ ಬೆನ್ನಲ್ಲೇ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿ ಬಹುಮತ ಪಡೆಯುವ ಉತ್ಸಾಹದಲ್ಲಿರುವ ಕುಮಾರ ಪಡೆ ಸದ್ಯಕ್ಕೆ 93 ಕ್ಷೇತ್ರದ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ. ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ರಾಮನಗರ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಅಲ್ಲದೆ ಈ ಮೂರು ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲೇ ಹೆಸರು ಘೋಷಣೆ ಮಾಡುವ ಮೂಲಕ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ರೆಸ್ಟ್ ನೀಡಿದ್ದು, ಅವರ ಇಚ್ಛೆಯಂತೆ ಮಗ ನಿಖೀಲ್ ಕುಮಾರ ಸ್ವಾಮಿ ಹೆಸರು ಘೋಷಣೆಯಾಗಿದೆ.
ನಿಖಿಲ್ ಸಾರಥಿಯಲ್ಲ ಸ್ಪರ್ಧಿ: ಮಂಡ್ಯದಲ್ಲಿ ಸೋಲು ಕಂಡಿದ್ದ ನಿಖಿಲ್ ಈ ಬಾರಿ ಸ್ಪರ್ಧಿಸಲ್ಲ. ಪಕ್ಷದ ಸಾರಥಿಯಾಗಿ ಕೆಲಸ ಮಾಡ್ತಾರೆ ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ಮೊದಲು ಘೋಷಿಸಿದ್ದರು. ನಂತರ ನಿಖೀಲ್ ಕುಮಾರಸ್ವಾಮಿ ಕೂಡ ಅದನ್ನೇ ಹೇಳಿದ್ದರು. ಆದರೆ, ಪಂಚರತ್ನ ರಥಯಾತ್ರೆ ವೇಳೆ ದಿಢೀರ್ ಎಂದು ಅನಿತಾ ಕುಮಾರಸ್ವಾಮಿ ಘೋಷಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲ ಎನ್ನುವ ಮೂಲಕ ಕುಮಾರಸ್ವಾಮಿ ಅನಿವಾರ್ಯವಾಗಿ ಮಗನನ್ನು ರಾಮನಗರ ಕ್ಷೇತ್ರಕ್ಕೆ ಹುರಿಯಾಳಾಗಿಸಿದ್ದಾರೆ.
ಕನಕಪುರ ಅಭ್ಯರ್ಥಿ ಗೌಪ್ಯ: ಪಂಚರತ್ನ ರಥಯಾತ್ರೆ ಯಲ್ಲಿ ಜೆಡಿಎಸ್‌ನ ನಾಲ್ಕು ಶಾಸಕರನ್ನು ನೋಡಲಿ ದ್ದೇವೆ ಎಂಬ ಆತ್ಮ ವಿಶ್ವಾಸದ ಮಾತುಗಳನ್ನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಕನಕಪುರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಘೋಷಣೆ ಮಾಡದೆ ಉಳಿದ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಎಲ್ಲರ ಚಿತ್ತ ಅತ್ತ ನೆಟ್ಟಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ, ರಾಮನಗರಕ್ಕೆ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಬದಲಿಗೆ ಪುತ್ರ ನಿಖೀಲ್ ಕುಮಾರಸ್ವಾಮಿ, ಹಾಗೂ ನಾಡಪ್ರಭು ಕೆಂಪೇಗೌಡರ ಮಾಗಡಿಗೆ ಹಾಲಿ ಶಾಸಕ ಎ. ಮಂಜುನಾಥ್ ಹೆಸರನ್ನು ಘೋಷಣೆ ಮಾಡಿದ್ದು, ಕನಕಪುರ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಯಾವುದೇ ಸುಳಿವು ನೀಡದ ಕುಮಾರಸ್ವಾಮಿ, ನಿಮ್ಮನ್ನ ನಿರ್ಲಕ್ಷಿಸಿ ತಪ್ಪು ಮಾಡಿದ್ದೇನೆ. ಮುಂದೆ ಅಂತಹ ತಪ್ಪು ಮಾಡಲ್ಲ. ಯಾರನ್ನೂ ನಂಬದೆ ನಿಮ್ಮನ್ನು ಕಾಯುವ, ಕಷ್ಟ-ಸುಖಗಳಿಗೆ ಸ್ಪಂದಿಸುವ ಅಭ್ಯರ್ಥಿಗೆ ಇಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತೇನೆ ಎಂದು ಪಂಚರತ್ನ ರಥಯಾತ್ರೆಯಲ್ಲಿ ಕಿಕ್ಕಿರಿದು ಸೇರಿದ್ದ ಕಾರ್ಯಕರ್ತರಿಗೆ ಅಭಯ ನೀಡಿದ್ದರು.
ಕನಕಪುರ ಗೆಲುವು ಸುಲಭದ ಮಾತಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಾಸಕರಾಗಿರುವ ಕನಕಪುರ ಕ್ಷೇತ್ರದಲ್ಲಿ ಗೆಲುವು ಸುಲಭದ ತುತ್ತಲ್ಲ. ಹಾಗಂತ ಅಲ್ಲಿ ಜೆಡಿಎಸ್ ತೀರಾ ಕಳಪೆಯಾಗಿಯೂ ಇಲ್ಲ. ಮೂಲ ಜೆಡಿಎಸ್ ಕಾರ್ಯಕರ್ತರೇ ಹೆಚ್ಚಿರುವ ಕ್ಷೇತ್ರದಲ್ಲಿ ಸತತ ಆರು ಬಾರಿ ಜೆಡಿಎಸ್ (ಜನತಾ ಪರಿವಾರ, ಜನತಾದಳ)ನ ತೆಕ್ಕೆಯಲ್ಲಿತ್ತು ಆಗ ಪಿ.ಜಿ.ಆರ್ ಸಿಂಧ್ಯಾ ಶಾಸಕರಾಗಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅವರೂ ಈಗ ಕಾಂಗ್ರೆಸ್‌ನಲ್ಲಿದ್ದರೂ ತೆರೆಮರೆಯಲ್ಲಿದ್ದಾರೆ. ಆದರೆ, ಸಾತನೂರು ವಿಧಾನಸಭಾ ಕ್ಷೇತ್ರ ಇಲ್ಲವಾ ದಾಗ ಎಂಟ್ರಿ ಕೊಟ್ಟ ಡಿ.ಕೆ. ಬ್ರದರ್ ಗೆಲ್ಲುವ ಮೂಲಕ ತಮ್ಮ ಪ್ರಾಬಲ್ಯ ಹೆಚ್ಚಾಗಿಸಿಕೊಂಡಿದ್ದು, ಜೆಡಿಎಸ್‌ನ ಸ್ಥಳೀಯ ಯಾರೇ ಅಭ್ಯರ್ಥಿಯಾದರೂ ಗೆಲುವು ಕಷ್ಟಸಾಧ್ಯವಾಗಿದೆ. ಆದರೂ ತೀವ್ರ ಪೈಪೋಟಿ ನೀಡುವ ಚಿಂತನೆಯಲ್ಲಿರುವ ಜೆಡಿಎಸ್ ಅಭ್ಯರ್ಥಿ ಘೋಷಣೆ ಬಗ್ಗೆ ಗಾಢ ಚಿಂತೆಯಲ್ಲಿರುವಂತಿದೆ.
ಮುಂದಿನ ಸಿಎಂ ರೇಸ್‌ನಲ್ಲಿರುವ ಡಿ.ಕೆ. ಶಿವಕುಮಾರ್ ಕೂಡ ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯಕ್ಕೆ ರಣತಂತ್ರ ಹೆಣೆಯುತ್ತಿದ್ದು , ಕಾದು ನೋಡುವ ತಂತ್ರಕ್ಕೆ ಎಚ್‌ಡಿಕೆ ಮುಂದಾದ್ರಾ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.
ರಾಜಕೀಯ ಏಳಿಗೆಗೆ ಕಲ್ಯಾಣೋತ್ಸವ: ಕಳೆದ ಹಲವು ದಿನಗಳಿಂದ ರಾಜ್ಯದಾದ್ಯಂತ ಪಂಚರತ್ನ ರಥಯಾತ್ರೆ ಮೂಲಕ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನ ಮಾಡಿರುವ ಕುಮಾರ ಸ್ವಾಮಿ, ಆಧ್ಯಾತ್ಮಿಕವಾಗಿ ಹೆಚ್ಚು ಒಲವು ಹೊಂದಿರುವ ಎಚ್‌ಡಿಡಿ ಕುಟುಂಬ ತಮ್ಮ ಮೂರನೇ ತಲೆಮಾರಿಗೆ ನೆಲೆ ದಕ್ಕಿಸಲು ತಿರುಪತಿ ತಿಮ್ಮಪ್ಪನ ಮೊರೆ ಹೊಕ್ಕು, ಮೂಲ ದೇವರನ್ನೇ ಕರೆತಂದು ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವ ಕಾರ್ಯಕ್ರಮದ ಮೂಲಕ ಜನರನ್ನು ಸೆಳೆದು ವಿರೋಧ ಪಕ್ಷಗಳಿಗೆ ಸಂದೇಶದ ಜೊತೆಗೆ ಅಚ್ಚರಿ ಅಭ್ಯರ್ಥಿ ಘೋಷಣೆ ಕೂಡ ಮಾಡಿದ್ದಾರೆ.
ಕುತೂಹಲ ಕೆರಳಿಸಿದ ಕನಕಪುರ: ಒಂದು ಹಂತದಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಡಿ.ಕೆ. ಬ್ರದರ್ ಚಾಣಾಕ್ಷ ರಾಜಕಾರ ಣದಲ್ಲಿ ನಿಸ್ಸೀಮರು. ಹಾಗಾಗಿಯೇ ಕಳೆದ ಮೂರು ಚುನಾವಣೆಯಲ್ಲಿ ಸತತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಆದರೆ, ಕನಕಪುರದಲ್ಲಿ ಜೆಡಿಎಸ್ ಭದ್ರವಾಗಿದೆ. ಪಕ್ಷದಿಂದ ಯಾರೇ ಅಭ್ಯರ್ಥಿಯಾದರು 45 ರಿಂದ 50 ಸಾವಿರ ಮತಗಳನ್ನು ಸುಲಭವಾಗಿ ಪಡೆಯುತ್ತಾರೆ. ಅದಕ್ಕಾಗಿಯೇ ಕುಮಾರಸ್ವಾಮಿ ರಥಯಾತ್ರೆ ವೇಳೆ ಘಂಟಾಘೋಷವಾಗಿ ಸಮರ್ಥ ಅಭ್ಯರ್ಥಿ ತರುತ್ತೇನೆ ಎಂದು ತೊಡೆ ತಟ್ಟಿದ್ದಾರೆ ಇದು ಕುತೂಹಲಕ್ಕೂ ಕಾರಣವಾಗಿದೆ.
ಉಭಯ ಸಿಎಂ ಅಭ್ಯರ್ಥಿಗಳ ಪ್ರತಿಷ್ಠೆ ಸಮರ: ಹಾವುಮುಂಗುಸಿಯಾಗಿದ್ದವರ ನಡುವೆ ಸಮ್ಮಿಶ್ರ ಸರ್ಕಾರ ರಚನೆ ಬಳಿಕ ಉತ್ತಮ ಸ್ನೇಹ ಬೆಳೆದಿತ್ತು. ಸರ್ಕಾರ ಪತನದ ಬಳಿಕ ಮುಸು ಕಿನ ಗುದ್ದಾಟ ಆರಂಭವಾಗಿ ಮತ್ತೆ ವೈಮನಸ್ಯ ತಾರಕಕ್ಕೇರಿದೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಬ್ಬರೂ ನಾಯಕರು ಸಿಎಂ ಗದ್ದುಗೆ ಮೇಲೆಯೇ ಕಣ್ಣಿಟ್ಟಿದ್ದಾರೆ. ಆದರೂ, ಇಬ್ಬರ ಗೆಲುವು ಕೂಡ ನಿರೀಕ್ಷಿತವಾಗಲೇಬೇಕಾಗಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವ ಪಡೆಯಲಿದೆ ಕಾದು ನೋಡಬೇಕಿದೆ. ಕನಕಪುರ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆಯಲ್ಲಿ ಎಚ್‌ಡಿಕೆ ಅವರ ನಿರ್ಧಾರದ ಮೇಲೆ ಹಣಾಹಣಿಯ ಪ್ರಶ್ನೆ ಎನ್ನುವ ಮಾತು ಕೇಳಿಬರುತ್ತಿದೆ. ಅದೇನೇ ಆದ್ರೂ ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಇಬ್ಬರು ನಾಯಕರಿಗೂ ಈ ಚುನಾವಣೆ ಪ್ರತಿಷ್ಠೆಯೇ ಸರಿ.
ಕನಕಪುರದಲ್ಲಿ ಶುರುವಾಯ್ತಾ ಹೊಂದಾಣಿಕೆ ಲೆಕ್ಕಾಚಾರ?: ಇನ್ನೂ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಸಿಎಂ ರೇಸ್‌ನಲ್ಲಿದ್ದರೂ ಹಾದಿ ಸುಗಮವಾಗಿಲ್ಲ, ಹಾಗೂ ಜೆಡಿಎಸ್‌ನಿಂದ ಎಚ್‌ಡಿಕೆ ನಿರ್ಧಾರಿತ ಸಿಎಂ ಆಗಿದ್ದಾರೆ. ಯಾರಿಗೂ ಬಹುಮತ ಸಿಗದ ಸಂದರ್ಭ ಎದುರಾದ್ರೆ ರಾಜಕಾರಣದಲ್ಲಿ ಏನು ಬೇಕಾದ್ರೂ ನಡೆಯಬಹುದು. ಅಂತಹ ಸಂದರ್ಭ ಎದುರಾದ್ರೆ ಪರಸ್ಪರ ಇಬ್ಬರು ನಾಯಕರಿಗೆ ಸಹಕಾರ ಅನಿವಾರ್ಯವಾಗುತ್ತೆ. ಈ ಹಿನ್ನೆಲೆ ಅವರವರ ಪ್ರಬಲ ಕ್ಷೇತ್ರಗಳಿಗೆ ತೊಡಕಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಂತಹ ಒಂದು ವಾತಾವರಣ ಸೃಷ್ಟಿಯಾಗಬಹುದೇನೋ ಎನ್ನುವ ಗುಸುಗುಸು ಕೂಡ ಕೇಳಿಬಂದಿದೆ.
ಆದರೆ, ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿ ಘೋಷಿಸಿದ್ದು, ಇದೀಗ ಹೊಸ ಗಾಳವನ್ನು ಜೆಡಿಎಸ್ ಬೀಸುತ್ತಿದೆಯಾ ಎಂಬ ಮಾತುಗಳೂ ಕೂಡ ಕೇಳಿಬರುತ್ತಿದೆ. ಅಲ್ಲದೆ ಡಿ.ಕೆ. ಬ್ರದರ್ಗೆ ಪಕ್ಕಾ ಪೈಪೋಟಿ ಕೊಡಬಲ್ಲ ಅಭ್ಯರ್ಥಿ ಅಲ್ಲಿ ಹಾಕಿದ್ರೆ ಅವರೂ ಕ್ಷೇತ್ರಬಿಟ್ಟು ಹೊರಬರದಂತೆ ಕಟ್ಟಿಹಾಕಬಹುದು ಎಂಬ ಲೆಕ್ಕಾಚಾರ ಜೆಡಿಎಸ್‌ದಾದ್ರೆ, ಚುನಾವಣಾ ಚಾಣಾಕ್ಷ ಎಂದೇ ಕರೆಸಿಕೊಳ್ಳುವ ಸಂಸದ ಡಿ.ಕೆ.ಸುರೇಶ್ ಇರೋದ್ರಿಂದ ಕಷ್ಟವಾಗದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.
ಅದೇನೇ ಆದ್ರೂ ಇಬ್ಬರೂ ನಾಯಕರು ಕೋಲು ಕೊಟ್ಟು ಹೊಡೆಸಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಾ ನೋಡೋಣ ಎನ್ನುವ ಬಗ್ಗೆ ಚಿಂತನೆ ಚರ್ಚೆ ಜೋರಾಗಿದೆ.
-ಎಂ.ಎಚ್.ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.