ಉಳ್ಳಾಲ: ಹೋಮದ ಹೊಗೆಯ ಮಧ್ಯೆ ಕಳ್ಳನ ಕೈಚಳಕ: ಗೃಹಪ್ರವೇಶದ ದಿನವೇ ನಡೆದ ಘಟನೆ
Team Udayavani, Dec 21, 2022, 10:14 PM IST
ಉಳ್ಳಾಲ: ಗೃಹಪ್ರವೇಶದ ವಾಸ್ತು ಪೂಜೆಯ ಸಂದರ್ಭ ಮನೆಯ ಕೆಲಸದ ನಾಟಕವಾಡಿ ಎಲ್ಲರ ಮುಂದೆ ಕಳವು ನಡೆಸಿದ ಕಳ್ಳನೋರ್ವ, ಅದೇ ರಾತ್ರಿ ನೆರೆಮನೆಯಿಂದಲೂ ಲಕ್ಷಾಂತರ ಮೌಲ್ಯದ ನಗ ನಗದು ದೋಚಿದ ಘಟನೆ ಕೋಟೆಕಾರು ಬಳಿ ನಡೆದಿದೆ. ಪೂಜೆ ಆಗುವ ಸಂದರ್ಭ ಬರ್ಮುಡ ಧರಿಸಿದ ಯುವಕನೋರ್ವ ಎಲ್ಲರ ಸಮ್ಮುಖದಲ್ಲೇ ಕೋಣೆಗೆ ನುಗ್ಗುವ ದೃಶ್ಯ ಪೂಜೆಯ ಚಿತ್ರೀಕರಣ ಮಾಡುತ್ತಿದ್ದ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಕೋಟೆಕಾರಿನ ಅಡ್ಕಬೈಲು ಸ್ಮಿತಾ ದಾಮೋದರ್ ಅವರ ಮನೆಯಲ್ಲಿ ರಾತ್ರಿ ವಾಸ್ತುಪೂಜೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದ್ದು, ಕೋಣೆಯಲ್ಲಿಟ್ಟಿದ್ದ ಬ್ಯಾಗ್‌ನಿಂದ 15,000 ರೂ. ನಗದು, ಮೊಬೈಲ್ ಚಾರ್ಜರ್ ಮತ್ತು ಬೆಲೆ ಬಾಳುವ ಕಾಸೆ¾ಟಿಕ್ಸ್ ಕಳವುಗೈ ದಿದ್ದಾನೆ. ಹೋಮ ನಡೆಯುತ್ತಿದ್ದ ವೇಳೆ ಕಳ್ಳ ಮನೆಯೊಳಗಿನ ಕೋಣೆಗೆ ನುಗ್ಗಿ ಹೊರನಡೆಯುವ ದೃಶ್ಯ ವೀಡಿಯೋದಲ್ಲಿ ದಾಖಲಾಗಿದೆ.
ಅದೇ ದಿನ ಮಧ್ಯರಾತ್ರಿ ಅಲ್ಲೇ ಸಮೀಪದ ಶಿವಸುಬ್ರಹ್ಮಣ್ಯ ಪ್ರಸಾದ್ ಭಟ್ ಅವರ ಮನೆಗೂ ನು ಗ್ಗಿದ ಕಳ್ಳ ಬಾಗಿಲನ್ನು ಒಡೆದು ಕೋಣೆಯೊಳಗಿನ ಕಪಾಟಲ್ಲಿದ್ದ 11,000 ರೂ. ನಗದು, 32 ಗ್ರಾಂ ಚಿನ್ನ, 8 ಬೆಳ್ಳಿಯ ನಾಣ್ಯ ಮತ್ತು 3 ರ್ಯಾಡೋ ವಾಚ್‌ಗಳು ಸೇರಿ ಒಟ್ಟು 1,49,000 ರೂ. ಮೌಲ್ಯದ ನಗ, ನಗದನ್ನು ಕದ್ದೊಯ್ದಿದ್ದಾನೆ.
ಬರ್ಮುಡ ಧರಿ ಸಿದ ಕಳ್ಳನ ಜತೆ ಇನ್ನೋರ್ವ ಇದ್ದು ಇವರಿಬ್ಬರು ಅಡ್ಕಬೈಲಿಗೆ ದ್ವಿಚಕ್ರ ವಾಹನದಲ್ಲಿ ಬಂದಿ ರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದು ಕಳ್ಳರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.