ಮೀಸಲಾತಿ ವಿಚಾರದಲ್ಲಿ ದುಡುಕಿದ ಸರಕಾರ: ಡಿ.ಕೆ.ಶಿವಕುಮಾರ್‌

Team Udayavani, Dec 22, 2022, 1:21 AM IST

ಮೀಸಲಾತಿ ವಿಚಾರದಲ್ಲಿ ದುಡುಕಿದ ಸರಕಾರ: ಡಿ.ಕೆ.ಶಿವಕುಮಾರ್‌

ಬೆಳಗಾವಿ: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ದುಡುಕಿರುವ ಸರಕಾರ ತರಾತುರಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿದೆ. ಅವರಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಸಂವಿಧಾನದ 9ನೇ ಶೆಡ್ನೂಲ್‌ಗೆ ಸೇರಿಸಿ ತಿದ್ದುಪಡಿ ತರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂವಿಧಾನ ತಿದ್ದುಪಡಿ ತರದೇ ಇಲ್ಲಿ ಏನು ಮಾಡಿದರೂ ಪ್ರಯೋಜನವಿಲ್ಲ. ಇಲ್ಲಿ ಕಾನೂನು ತರುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹೇಗಿದ್ದರೂ ಸಂಸತ್‌ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಕಾನೂನನ್ನು ಅಲ್ಲಿಗೆ ಕಳುಹಿಸಿ ಅನುಮೋದನೆ ಪಡೆಯಲಿ. ಅದನ್ನು ಬಿಟ್ಟು ನಾವು ಮಾಡಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ದುಡುಕಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ನಿಲುವಿನ ಬಗ್ಗೆ ನಮ್ಮ ನಾಯಕರು ಮಾತನಾಡಿದ್ದಾರೆ. ಉಳಿದಂತೆ ಯಾರೂ ಬಂದು ನಮ್ಮ ಬಳಿ ಚರ್ಚೆ ಮಾಡಿಲ್ಲ. ಸರಕಾರ ಮೊದಲು ತನ್ನ ನಿಲುವು ಪ್ರಕಟಿಸಲಿ. ಇದರಲ್ಲಿ ಕಾನೂನು ಅಡಚಣೆಗಳೇನು ಎಂಬುದು ಗೊತ್ತಿಲ್ಲ. ಈ ವಿಚಾರವಾಗಿ ಆಡಳಿತ ಪಕ್ಷ ತೀರ್ಮಾನ ಮಾಡಬೇಕು. ಕಾನೂನು ಏನಿದೆ ಎಂದು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು ಎಂದರು.

ಮೀಸಲಾತಿ ಹೆಚ್ಚಳ ಮಾಡುವಂತೆ ಅನೇಕ ಸಮಾಜಗಳು ಒತ್ತಾಯ ಮಾಡುತ್ತಿವೆ. ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಕುರುಬರು ಹೋರಾಟ ಮಾಡುತ್ತಿದ್ದಾರೆ. ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳದ ವಿಚಾರವಾಗಿ ಸರಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸಭೆಯಲ್ಲಿ ಸಚಿವರು ಉತ್ತರಿಸಿದ್ದಾರೆ.

ಹೀಗಾಗಿ ಮೀಸಲಾತಿ ವಿಚಾರ ಗೊಂದಲದ ಗೂಡಾಗಿದೆ. ಇದರ ಕಾನೂನು ಅಂಶಗಳನ್ನು ತಿಳಿದು ಕೊಳ್ಳಲು ಎಐಸಿಸಿಯಿಂದ ಒಂದು ಸಮಿತಿ ಮಾಡಲಾಗಿದೆ. ಇದರ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.

ಟಾಪ್ ನ್ಯೂಸ್

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ

Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ

Police-Head

Karnataka Police ಸುಳ್ಳು ಸುದ್ದಿ ತಡೆಗೆ ಎಐ ಬಳಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

Heavy rain in Amboli; Five feet water rise in Hidkal reservoir in one day

Belagavi: ಅಂಬೋಲಿ ಭಾಗದಲ್ಲಿ ಭಾರಿ ಮಳೆ; ಹಿಡಕಲ್ ಜಲಾಶಯದಲ್ಲಿ ಒಂದೇ ದಿನ ಐದಡಿ ನೀರು ಏರಿಕೆ

belagBelagavi; ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರ ಸ್ವೀಕಾರ

Belagavi; ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರ ಸ್ವೀಕಾರ

laxmi-hebbalkar

Belagavi; ಅಭಯ್ ಪಾಟೀಲ್ ‘ಕೇಂದ್ರದ ಮೊಬೈಲ್’ ಹೇಳಿಕೆಗೆ ಸಚಿವೆ ಹೆಬ್ಬಾಳ್ಕರ್ ಗರಂ

vijaya-sankeshwar1

ಮಾಟಮಂತ್ರದ ಕಾಟ: ಕುಟುಂಬದ ವಿರುದ್ಧವೇ ದೂರು ನೀಡಲು ಮುಂದಾದ ಉದ್ಯಮಿ ವಿಜಯ ಸಂಕೇಶ್ವರ ಪುತ್ರಿ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.