ಕಠಿಣ ಪದ ಬಳಕೆ ಮಾಡಬೇಕು, ಕುಲದೀಪ್ ರನ್ನು ಕೈಬಿಟ್ಟಿದ್ದು ನಂಬಲಸಾಧ್ಯ: ಗಾವಸ್ಕರ್ ಅಸಮಾಧಾನ
ಇತರ ಸ್ಪಿನ್ನರ್‌ಗಳಲ್ಲಿ ಒಬ್ಬರನ್ನು ಕೈಬಿಡಬಹುದಿತ್ತು. ಆದರೆ....
Team Udayavani, Dec 22, 2022, 3:25 PM IST
ನವದೆಹಲಿ: ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕೈಬಿಟ್ಟಿರುವುದಕ್ಕೆ ಕ್ರಿಕೆಟ್ ದಂತಕಥೆ ಸುನಿಲ್ ಗಾವಸ್ಕರ್ ಅವರು ತೀವ್ರ ಟೀಕೆ ಮಾಡಿದ್ದು, ”ಸರಣಿಯ ಆರಂಭಿಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ನೀಡಿದ ಆಟಗಾರನನ್ನು ಕೈಬಿಟ್ಟಿರುವುದು ನಂಬಲಾಗದ ವಿಚಾರ” ಎಂದು ಬಹಿರಂಗ ಅಸಮಾಧಾನ ಹೊರ ಹಾಕಿದ್ದಾರೆ.
“ಪಂದ್ಯ ಪುರುಷನನ್ನು ಕೈಬಿಡುವುದು ನಂಬಲಸಾಧ್ಯ. ಅದು ನಾನು ಬಳಸಬಹುದಾದ ಏಕೈಕ ಪದ ಮತ್ತು ಇದು ಸೌಮ್ಯವಾದ ಪದವಾಗಿದೆ. ನಾನು ಸಾಕಷ್ಟು ಬಲವಾದ ಪದಗಳನ್ನು ಬಳಸಲು ಬಯಸುತ್ತೇನೆ, ಆದರೆ ನೀವು 20 ವಿಕೆಟ್‌ಗಳಲ್ಲಿ ಎಂಟು ವಿಕೆಟ್‌ಗಳನ್ನು ಪಡೆದ ‘ಮ್ಯಾನ್ ಆಫ್ ದಿ ಮ್ಯಾಚ್’ ಅನ್ನು ಕೈಬಿಟ್ಟಿರುವುದು ನಂಬಲಾಗದ ಸಂಗತಿ, ”ಎಂದು ಸರಣಿಯ ಪ್ರಸಾರಕರಾದ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಕಾಮೆಂಟ್ ಮಾಡುವಾಗ ಗಾವಸ್ಕರ್ ಹೇಳಿದ್ದಾರೆ.
“ನಿಮಗೆ ಇನ್ನಿಬ್ಬರು ಸ್ಪಿನ್ನರ್‌ಗಳು (ಅಕ್ಸರ್ ಪಟೇಲ್ ಮತ್ತು ಆರ್. ಅಶ್ವಿನ್) ಸಿಕ್ಕಿದ್ದಾರೆ. ಆದ್ದರಿಂದ ಖಚಿತವಾಗಿ, ಇತರ ಸ್ಪಿನ್ನರ್‌ಗಳಲ್ಲಿ ಒಬ್ಬರನ್ನು ಕೈಬಿಡಬಹುದಿತ್ತು. ಆದರೆ ಎಂಟು ವಿಕೆಟ್‌ಗಳನ್ನು ಕಬಳಿಸಿದ ಈ ವ್ಯಕ್ತಿ ಇಂದು ಗೌರವದಿಂದ ಆಡಬೇಕಿತ್ತು” ಎಂದಿದ್ದಾರೆ.
ಪಿಚ್ ಹೇಗಿದೆ ಎಂಬುದರ ಕುರಿತಾಗಿ ” 22 ಯಾರ್ಡ್ ಸ್ಟ್ರಿಪ್ ಗೊಂದಲಮಯವಾಗಿದೆ” ಎಂದು ನಾಯಕ ಕೆ.ಎಲ್. ರಾಹುಲ್ ಅವರ ವಾದಕ್ಕೆ ಪ್ರತಿಯಾಗಿ ಗಾವಸ್ಕರ್ ಹೇಳಿದ್ದಾರೆ.
28 ವರ್ಷ ವಯಸ್ಸಿನ ಎಡಗೈ ರಿಸ್ಟ್ ಸ್ಪಿನ್ನರ್ ಕುಲದೀಪ್ ಚಟ್ಟೋಗ್ರಾಮ್‌ನಲ್ಲಿನ ಆರಂಭಿಕ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ವೃತ್ತಿಜೀವನದ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದರು. ಭಾರತವು ಬಾಂಗ್ಲಾದೇಶವನ್ನು 188 ರನ್‌ಗಳಿಂದ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು 8 ವಿಕೆಟ್ ಪಡೆದಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಐದು ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.
ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯದೇವ್ ಉನಾದ್ಕತ್ ಅವರು ಕುಲದೀಪ್ ಯಾದವ್ ಅವರ ಬದಲಿ ಆಟಗಾರನಾಗಿ ಆಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.