“ವಿದ್ಯಾಗಿರಿ’ಯಲ್ಲಿ “ಸಂಗೀತ ಗಾನ ವಿನೋದ’!


Team Udayavani, Dec 23, 2022, 6:17 AM IST

“ವಿದ್ಯಾಗಿರಿ’ಯಲ್ಲಿ “ಸಂಗೀತ ಗಾನ ವಿನೋದ’!

ಮೂಡುಬಿದಿರೆ : ಒಂದು ವೇದಿಕೆ ಯಲ್ಲಿ ಹಿಂದೂಸ್ತಾನಿ ಗಾಯನ, ಇನ್ನೊಂದರಲ್ಲಿ ನಾಟ್ಯ ವೈವಿಧ್ಯ; ಮತ್ತೂಂದರಲ್ಲಿ ಭಾವ ಗಾನ ಮಂಜರಿ, ಮಗದೊಂದು ಕಡೆ ರಸಸಂಜೆ! ವಿದ್ಯಾಗಿರಿ ಅಕ್ಷರಶಃ ಸಾಂಸ್ಕೃತಿಕ ಲೋಕವನ್ನೇ ಧರೆಗಿಳಿಸಿದಂತಿದೆ; ಎಲ್ಲವೂ ಭಿನ್ನ, ವಿಶೇಷ ಹಾಗೂ ಕುತೂಹಲಕಾರಿ. ಜಾಂಬೂರಿಯ 2ನೇ ದಿನ ಗುರುವಾರ ಬೆಳಗ್ಗೆ 9ರಿಂದ ರಾತ್ರಿಯವರೆಗೆ ಪಂಚ ವೇದಿಕೆಗಳಲ್ಲಿ ಸಾಂಸ್ಕೃತಿಕ ದಿಗªರ್ಶನದ ಹೊಸ ಅನುಭೂತಿ ಪಡಿಮೂಡಿತು.

ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ಶಂಕರ್‌ ಮಹಾದೇವನ್‌ ತಂಡದ ಸಂಗೀತ ರಸಸಂಜೆ ಹಾಗೂ ರಾತ್ರಿ ಆಳ್ವಾಸ್‌ ಸಾಂಸ್ಕೃತಿಕ ವೈಭವವು ಹೊಸ ಲೋಕವನ್ನು ತೆರೆಯಿತು.
ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ವಿನುಶ್‌ ಬಳಗದ ಲಘು ಸಂಗೀತ, ಕರ್ನಾಟಕ ಸಂಗೀತದ ಯುವಕಲಾವಿದರಿಂದ ಮಂಜು ನಾದ, ನೌಷಾದ್‌, ನಿಶಾದ್‌ ಸಹೋದರರಿಂದ ಹಿಂದೂಸ್ತಾನಿ ಗಾಯನ, ಸಂಜೆ ಶೇಷಗಿರಿದಾಸ್‌ ಬಳಗದಿಂದ ದಾಸರ ಪದಗಳು, ಸಫìರಾಜ್‌ಖಾನ್‌ ಅವರಿಂದ ಸಾರಂಗಿ, ವಿದುಷಿ ಪ್ರಮೀಳಾ ಲೋಕೇಶ್‌ರಿಂದ ನೃತ್ಯ ವೈವಿಧ್ಯ ಗಮನಸೆಳೆಯಿತು.

ನುಡಿಸಿರಿ ವೇದಿಕೆಯಲ್ಲಿ ವಿಘ್ನೇಶ್ವರ್‌ ಬಳಗದಿಂದ ಮ್ಯಾಂಡೋಲಿನ್‌, ಮಹಾಂತೇಶ್‌ ಹಡಪದ, ಸುನಿಲ್‌ ಅವರಿಂದ ಹಾಸ್ಯಲಹರಿ, ಕೃಷ್ಣಪವನ್‌ ಕುಮಾರ್‌ ಬಳಗದಿಂದ ಕೊಳಲು, ಡಾ| ಮೊಹಸಿನ್‌ ಖಾನ್‌ ಬಳಗದಿಂದ ಸಿತಾರ್‌ ಕೊಳಲು ಜುಗಲ್‌ಬಂದಿ, ವಿಜಯ್‌ ಕುಮಾರ್‌ ಪಾಟೀಲ್‌ ಬಳಗದಿಂದ ದಾಸವಾಣಿ, ಸಂಜೆ ತಾಳ-ಲಯ ವೈವಿಧ್ಯ, ರಾತ್ರಿ ಸಾಯಿ ಡ್ಯಾನ್ಸ್‌ ಇಂಟರ್‌ನ್ಯಾಶನಲ್‌ ಅವರಿಂದ ನಾಟ್ಯ ವೈವಿಧ್ಯ ಮನ ಸೆಳೆಯಿತು. ಪ್ಯಾಲೇಸ್‌ ಗ್ರೌಂಡ್‌ನ‌ಲ್ಲಿ ಸಂಜೆ ನಾಡಿನ ಪ್ರಸಿದ್ಧ ಹಿನ್ನೆಲೆ ಗಾಯಕರಿಂದ ಭಾವಗಾನ ಮಂಜರಿ ಮೋಡಿ ಮಾಡಿತು.

ಕೃಷಿಸಿರಿ ವೇದಿಕೆಯಲ್ಲಿ ಶರಣಪ್ಪ ವಡಿಗೇರಿ ಬಳಗ ಮತ್ತು ಗೀತಾ ಬಳಗದಿಂದ ಜಾನಪದ ಗೀತೆ, ರಾಕೇಶ್‌ ರೈ ಅಡ್ಕ ಸಂಯೋಜನೆಯಲ್ಲಿ ಪುಂಡು ವೇಷ ವೈಭವ, ಬಸವರಾಜ ಶಿಗ್ಗಾಂವಿ ಬಳಗದಿಂದ ದೊಡ್ಡಾಟದ ಹಾಡು, ಉಮೇಶ್‌ ಮಿಜಾರು, ದೀಪಕ್‌ ರೈ ಹಾಸ್ಯ, ಜಗದೀಶ್‌ ಪುತ್ತೂರು ಬಳಗದ ರಸಸಂಜೆ, ಬಯಲು ರಂಗ ಮಂದಿರದಲ್ಲಿ ಶಂಕರ್‌ ಶಾನುಭೋಗ್‌ ಬಳಗದ
ಕನ್ನಡ ಡಿಂಡಿಮ ಆಕರ್ಷಿಸಿತು.

ಎಲ್ಲವೂ ಆಕರ್ಷಕ ಲೋಕ!
12 ಎಕರೆ ವಿಸ್ತಾರದ ಪಾರಂಪರಿಕ ತರ ಕಾರಿ ತೋಟವಿದೆ. 100 ವಿಧ ತರಕಾರಿಗಳ ಅತ್ಯಾಕರ್ಷಕ ನೈಜ ತೋಟವಿದು. ವಿಶಾಲ ಪುಷ್ಪಾಲಂಕಾರವೂ ಗಮನ ಸೆಳೆಯುತ್ತಿದೆ. ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ ವಿದೆ. ಅಸಂಖ್ಯ ಪುಸ್ತಕ ಪ್ರದರ್ಶನವಿದೆ.

ಟಾಪ್ ನ್ಯೂಸ್

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

5-darshan

Bengaluru: ಜೈಲಲ್ಲಿ ವಿಶೇಷ ಆತಿಥ್ಯ: ನಾಗ, ವೇಲು 2 ದಿನ ಕಸ್ಟಡಿಗೆ

ಗಾಂಜಾ ಸೇವನೆ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್

Anandpura: ಗಾಂಜಾ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.