![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Dec 24, 2022, 6:50 AM IST
ಹೊಸದಿಲ್ಲಿ: ನಿಗದಿಗಿಂತ 6 ದಿನ ಮುಂಚಿತವಾಗಿಯೇ ಸಂಸತ್‌ನ ಚಳಿಗಾಲದ ಅಧಿವೇಶನಕ್ಕೆ ತೆರೆಬಿದ್ದಿದೆ. ಡಿ.7ರಂದು ಆರಂಭವಾಗಿದ್ದ ಅಧಿವೇಶನವು ಡಿ.29ರ ವರೆಗೆ ನಡೆಯಬೇಕಿತ್ತು. ಆದರೆ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಅಧಿವೇಶನವನ್ನು ಅವಧಿಗೆ ಮುನ್ನವೇ ಮುಗಿಸುವಂತೆ ಸದಸ್ಯರು ಮನವಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿ ಶುಕ್ರವಾರವೇ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಖರ್ಗೆ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಪಿಯೂಷ್ ಗೋಯಲ್ ಸಹಿತ ಹಲವರು ಕೊನೆಯ ದಿನದ ಕಲಾಪದಲ್ಲಿ ಪಾಲ್ಗೊಂಡರು. ಇದೇ ವೇಳೆ ಪ್ರಸಕ್ತ ಚಳಿಗಾಲದ ಅಧಿವೇಶನಕ್ಕೆ ಅವಧಿಪೂರ್ವ ತೆರೆ ಬೀಳುವ ಮೂಲಕ ಸತತ 8ನೇ ಬಾರಿಗೆ ಸಂಸತ್ ಅಧಿವೇಶನ ನಿಗದಿಗೆ ಮುನ್ನವೇ ಮುಗಿದಂತಾಗಿದೆ.
ಚೀನ ಅತಿಕ್ರಮಣ, ಹಣದುಬ್ಬರ, ನಿರುದ್ಯೋಗದಂಥ ವಿಚಾರಗಳ ಕುರಿತ ಚರ್ಚೆಯಿಂದ ಸರಕಾರ ಓಡಿಹೋಯಿತು. ಒಂದಕ್ಕೂ ಉತ್ತರಿಸಲು ಸರಕಾರಕ್ಕೆ ಸಾಧ್ಯವಾಗಲಿಲ್ಲ. ಇದು ಕೇಂದ್ರ ಸರಕಾರದ ವೈಫಲ್ಯವನ್ನು ತೋರಿಸಿದೆ.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಜುಲೈ 2013, ಜನವರಿ 2014ರಲ್ಲಿ ಅಂದಿನ ಯುಪಿಎ ಸರಕಾರ ಕೂಡ ಚೀನ ಕುರಿತು ಚರ್ಚೆಗೆ ವಿಪಕ್ಷಗಳು ಮಾಡಿದ್ದ ಮನವಿಯನ್ನು ಒಪ್ಪಿರಲಿಲ್ಲ. ಹಾಗಿದ್ದರೂ ವಿಪಕ್ಷಗಳು ಚೀನ ಚರ್ಚೆಗೆ ಅವಕಾಶ ಕೋರಿ ಕಲಾಪಕ್ಕೆ ಅಡ್ಡಿಪಡಿಸಿದ್ದು ದುರದೃಷ್ಟಕರ.
-ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಲೋಕಸಭೆ ಉತ್ಪಾದಕತೆ- ಶೇ.97
ಕಲಾಪ ನಡೆದ ದಿನಗಳು- 13
ಅಂಗೀಕಾರಗೊಂಡ ಮಸೂದೆಗಳು- 7
ರಾಜ್ಯಸಭೆ ಉತ್ಪಾದಕತೆ -ಶೇ.102
ಕಲಾಪ ನಡೆದ ದಿನಗಳು- 13
ಕಲಾಪ ನಡೆದ ಅವಧಿ- 64 ಗಂಟೆ 50 ನಿಮಿಷ
ಪಾಸ್ ಆದ ಮಸೂದೆಗಳು- 9
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.