ಅಮೆರಿಕವನ್ನು ಥರಗುಟ್ಟಿಸಿದ ಬಾಂಬ್‌ ಸೈಕ್ಲೋನ್‌! ಕ್ರಿಸ್ಮಸ್‌, ಹೊಸ ವರ್ಷದ ಸಂಭ್ರಮಕ್ಕೆ ತಡೆ

ಮೈನಸ್‌ 40 ಡಿ.ಸೆ. ತಾಪಮಾನದೊಂದಿಗೆ ಬೀಸುತ್ತಿದೆ ಶೀತ ಚಂಡಮಾರುತ

Team Udayavani, Dec 24, 2022, 8:10 AM IST

ಅಮೆರಿಕವನ್ನು ಥರಗುಟ್ಟಿಸಿದ ಬಾಂಬ್‌ ಸೈಕ್ಲೋನ್‌! ಕ್ರಿಸ್ಮಸ್‌, ಹೊಸ ವರ್ಷದ ಸಂಭ್ರಮಕ್ಕೆ ತಡೆ

ಶಿಕಾಗೋ: ಅಮೆರಿಕದ ಹಲವು ಭಾಗಗಳಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನವಾದ “ಬಾಂಬ್‌ ಸೈಕ್ಲೋನ್‌’ ಆರಂಭವಾಗಿದೆ. ಮೈನಸ್‌ 40 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಬೀಸುತ್ತಿರುವ ಚಳಿ ಗಾಳಿಯು ನಾಗರಿಕರನ್ನು ಥರಗುಟ್ಟುವಂತೆ ಮಾಡಿದೆ.

ಕ್ರಿಸ್ಮಸ್‌, ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಜ್ಜಾಗಿದ್ದ ಅಮೆರಿಕನ್ನರಿಗೆ “ತಲೆಮಾರಿನಲ್ಲಿ ಒಂದು ಬಾರಿಯಷ್ಟೇ’ ಕಂಡುಬರುವಂಥ “ಬಾಂಬ್‌ ಸೈಕ್ಲೋನ್‌’ ಆಘಾತ ಉಂಟುಮಾಡಿದೆ. ವಿಪರೀತ ಚಳಿಯ ಜತೆಗೆ ಶೀತ ಗಾಳಿ ಹಾಗೂ ಮುಂದೆ ಏನಿದೆ ಎಂಬುದು ಗೋಚರಿಸದಂತೆ ದಟ್ಟ ಮಂಜು ಕವಿದಿದ್ದು, ಸಾವಿರಾರು ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಪ್ರಮುಖ ಹೆದ್ದಾರಿಗಳನ್ನೂ ಬಂದ್‌ ಮಾಡಲಾಗಿದೆ. ಈ ಮಂಜಿನ ಚಂಡಮಾರುತದಿಂದಾಗಿ ರಜೆಯ ಮಜಾ ಅನುಭವಿಸಬೇಕಿದ್ದ ಅಮೆರಿಕನ್ನರು ಈಗ ಮನೆಯೊಳಗೇ ಬಂಧಿಯಾಗಿದ್ದಾರೆ. ಕೆಂಟುಕಿ, ಮಿಸೌರಿ, ಓಕ್ಲಹೋಮಾ, ಜಾರ್ಜಿಯಾ ಮತ್ತು ನಾರ್ತ್‌ ಕರೋಲಿನಾದಲ್ಲಿ ತುರ್ತು ಪರಿಸ್ಥಿತಿಯ ಸ್ಥಿತಿಯಿದೆ.

ಏನಿದು ಬಾಂಬ್‌ ಸೈಕ್ಲೋನ್‌?
ವಾಯುಭಾರ ಒತ್ತಡವು ಇಳಿಕೆಯಾಗಿ, ಶೀತ ಗಾಳಿಯ ದ್ರವ್ಯರಾಶಿಯು ಬಿಸಿಗಾಳಿಯ ದ್ರವ್ಯರಾಶಿಯೊಂದಿಗೆ ಘರ್ಷಣೆಯಾದಾಗ “ಬಾಂಬ್‌ ಸೈಕ್ಲೋನ್‌’ ಉಂಟಾಗುತ್ತದೆ. ಒತ್ತಡವು ಎಷ್ಟು ಕಡಿಮೆಯಾಗುತ್ತದೋ ಗಾಳಿಯು ಎಷ್ಟೇ ಬಲಿಷ್ಠವಾಗುತ್ತದೆ. ಕೆಲವೇ ಗಂಟೆಗಳ ಅವಧಿಯಲ್ಲಿ ತಾಪಮಾನ 11 ಡಿ.ಸೆ.ಗಿಂತಲೂ ಹೆಚ್ಚು ಇಳಿಯುತ್ತದೆ.

ಫ್ರಾಸ್ಟ್‌ಬೈಟ್‌ ಆತಂಕ
ಲಕ್ಷಾಂತರ ಮಂದಿಗೆ ಈ ಚಳಿ ಚಂಡಮಾರುತದ ಎಚ್ಚರಿಕೆ ನೀಡಲಾಗಿದ್ದು, ಮನೆಗಳಿಂದ ಹೊರಗೆ ಕಾಲಿಡದಂತೆ ಸೂಚನೆ ನೀಡಲಾಗಿದೆ. ಕೆಲವು ಪ್ರದೇಶಗಳಲ್ಲಂತೂ ಪರಿಸ್ಥಿತಿ ಹೇಗಿದೆಯೆಂದರೆ ಮನೆಯಿಂದ ಹೊರಗೆ ಕಾಲಿಟ್ಟರೆ ಕ್ಷಣಮಾತ್ರದಲ್ಲಿ ಫ್ರಾಸ್ಟ್‌ಬೈಟ್‌(ಶೀತದಿಂದ ಉಂಟಾಗುವ ಉರಿಯೂತ) ಉಂಟಾಗುತ್ತದೆ ಎಂದೂ ಎಚ್ಚರಿಸಲಾಗಿದೆ. ಫ್ರಾಸ್ಟ್‌ಬೈಟ್‌ ಎಂದರೆ ಅತಿಯಾದ ಶೀತಕ್ಕೆ ಮೈ ಒಡ್ಡಿಕೊಂಡರೆ ದೇಹದ ಅಂಗಾಂಶಗಳಿಗೆ ಉಂಟಾಗುವ ಗಾಯ. ಮೂಗು, ಕೈಬೆರಳು, ಕಾಲೆºರಳುಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗ್ಯಾಂಗ್ರೀನ್‌ಗೂ ಕಾರಣವಾಗಬಹುದು.

12 ಗಂಟೆ; 104 ಅಪಘಾತ!
ದಟ್ಟ ಮಂಜಿನಿಂದಾಗಿ ದೃಷ್ಟಿ ಗೋಚರತೆ ಶೂನ್ಯಕ್ಕೆ ತಲುಪಿದೆ. ಕೇವಲ 12 ಗಂಟೆಗಳ ಅವಧಿಯಲ್ಲಿ 104 ಅಪಘಾತಗಳು ಸಂಭವಿಸಿವೆ. ಅಮೆರಿಕದ ವ್ಯೋಮಿಂಗ್‌ ಹೆದ್ದಾರಿ ಗಸ್ತು ಪಡೆಯೊಂದಕ್ಕೇ 787 ಕರೆಗಳು ಬಂದಿವೆ. ರ್ಯಾಪಿಡ್‌ ಸಿಟಿಯಲ್ಲಿ ಸಂಚರಿಸಲಾಗದೇ 100ಕ್ಕೂ ಹೆಚ್ಚು ಬೈಕ್‌ ಸವಾರರು ಅತಂತ್ರರಾಗಿದ್ದಾರೆ.

ಇದು ನೀವು ಸಾಮಾನ್ಯವಾಗಿ ನೋಡುವ ಮಂಜಿನ ಮಳೆಯಲ್ಲ. ದಯವಿಟ್ಟು ಯಾರೂ ಇದನ್ನು ಹಗುರವಾಗಿ ಪರಿಗಣಿಸಬೇಡಿ. ಇದೊಂದು ಗಂಭೀರ ವಿಚಾರ. ನಿಮ್ಮ ಪ್ರಯಾಣವನ್ನೆಲ್ಲ ಮುಂದೂಡಿ.
-ಜೋ ಬೈಡೆನ್‌, ಅಮೆರಿಕ ಅಧ್ಯಕ್ಷ

ಟಾಪ್ ನ್ಯೂಸ್

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.