Viral Video: ಪುಟಾಣಿ ಹೀರೋಗೆ ಸೆಲ್ಯೂಟ್…ಛಾವಣಿ ಹಿಡಿದು ನೇತಾಡುತ್ತಿದ್ದ ಅಮ್ಮನನ್ನು ರಕ್ಷಿಸಿದ ಪುಟಾಣಿ ಬಾಲಕ
ಬಾಲಕನ ವೀಡಿಯೊ ಕ್ಲಿಪ್ ಅನ್ನು ಶೇರ್ ಮಾಡಿದ್ದು, ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Team Udayavani, Dec 24, 2022, 5:53 PM IST
ನವದೆಹಲಿ: ತಾಯಿಗೆ ಮಕ್ಕಳೆಂದರೆ ಎಷ್ಟು ಪ್ರೀತಿಯೋ ಅದೇ ರೀತಿ ಮಕ್ಕಳಿಗೂ ಕೂಡಾ ತಾಯಿ ಬಗ್ಗೆ ತುಂಬಾ ಪ್ರೀತಿ ಮತ್ತು ಕಾಳಜಿ ಹೊಂದಿರುತ್ತಾರೆ. ಅದಕ್ಕೊಂದು ಸೇರ್ಪಡೆ ಎಂಬಂತೆ ತನ್ನ ಬುದ್ಧಿ ಚಾತುರ್ಯದಿಂದ ತಾಯಿಯ ಜೀವ ಉಳಿಸಿದ ಪುಟ್ಟ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ.
ಇದನ್ನೂ ಓದಿ:ಬೆತ್ತಲೆ ಫೋಟೋ ಶೂಟ್, ಟ್ವೀಟ್ ವಾರ್,ಬಾಯ್ಕಾಟ್.. 2022 ರ ಬಿಟೌನ್ ವಿವಾದಗಳ ಸುತ್ತ
ಈ ವಿಡಿಯೋ ಪುಟ್ಟ ಬಾಲಕನನ್ನು ಮೆಚ್ಚುವಂತೆ, ಗೌರವಿಸುವ ಜೊತೆಗೆ ಸ್ವಲ್ಪ ಭಾವನಾತ್ಮಕವಾಗುವಂತೆ ಮಾಡಬಹುದು. ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಬಾಲಕನ ವೀಡಿಯೊ ಕ್ಲಿಪ್ ಅನ್ನು ಶೇರ್ ಮಾಡಿದ್ದು, ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೀಡಿಯೋದಲ್ಲೇನಿದೆ?
ಮಹಿಳೆಯೊಬ್ಬರು ತನ್ನ ಗ್ಯಾರೇಜ್ ನ ಬಾಗಿಲನ್ನು ರಿಪೇರಿ ಮಾಡಲು ಏಣಿ ಹತ್ತಿದ್ದರು. ಆದರೆ ಆಗ ಏಣಿ ದಿಢೀರನೆ ಕೆಳಗೆ ಬಿದ್ದಿದ್ದು, ಆಕೆ ಛಾವಣಿಯನ್ನು ಹಿಡಿದುಕೊಂಡು ನೇತಾಡತೊಡಗಿದ್ದು, ಸಹಾಯ ಮಾಡುವಂತೆ ಕೂಗಿಕೊಂಡಿದ್ದಳು. ಪಕ್ಕದಲ್ಲಿದ್ದ ಪುಟ್ಟ ಮಗ ಕೂಡಲೇ ಓಡಿ ಹೋಗಿ ಏಣಿಯನ್ನು ಪ್ರಯತ್ನಪಟ್ಟು ತಾಯಿಯ ಬಳಿ ತಂದಿದ್ದ, ಆಗ ತಾಯಿ ಕಾಲಿನಿಂದ ಏಣಿಯನ್ನು ತನ್ನತ್ತ ಎಳೆದುಕೊಂಡು ನಿಧಾನಕ್ಕೆ ಕೆಳಕ್ಕೆ ಇಳಿಯುತ್ತಿರುವ ದೃಶ್ಯ ಸೆರೆಯಾಗಿದೆ.
माँ गैराज का दरवाज़ा रिपेयर कर रहीं थी कि तभी उनकी सीढ़ी गिर गयी. माँ ऊपर लटके देख नन्हे जांबाज़ ने पूरी जान लगाकर सीढ़ी को वापस लगाकर उनक़ी मदद क़ी…
इस छोटे बच्चे क़ी सूझ-बूझ और हिम्मत क़ी जितनी प्रशांसा क़ी जाए कम है. pic.twitter.com/GjX6Ol3pid
— Dipanshu Kabra (@ipskabra) December 23, 2022
ಈ ಪುಟ್ಟ ಮಗುವಿನ ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಎಷ್ಟು ಹೊಗಳಿದರೂ ಸಾಕಾಗುವುದಿಲ್ಲ ಎಂದು ದೀಪಾಂಶು ಕಬ್ರಾ ಹಿಂದಿಯಲ್ಲಿ ಕ್ಯಾಪ್ಶನ್ ನೀಡಿ ವಿಡಿಯೋವನ್ನು ಶೇರ್ ಮಾಡಿದ್ದು, ಎಲ್ಲರೂ ಮಗುವಿನ ಚಾಣತನಕ್ಕೆ ಶಹಬ್ಬಾಸ್ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.