ಹಿಂದೂ ರಾಷ್ಟ್ರ ಆದರೆ ದೇಶದ ಜನತೆ ಸುಖವಾಗಿರುತ್ತದೆ: ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್
Team Udayavani, Dec 25, 2022, 8:07 PM IST
ಶಿವಮೊಗ್ಗ: ತಾವು ಎಲ್ಲೇ ಇದ್ದರೂ ತಮ್ಮ ಗುರುತನ್ನು ಉಳಿಸಿಕೊಳ್ಳಬೇಕು. ನಮ್ಮ ಜನ್ಮ ಭೂಮಿ ಸ್ವರ್ಗಕ್ಕೆ ಸಮಾನ. ಇದರ ಋಣವನ್ನು ನಾವು ತೀರಿಸಲೇಬೇಕು. ಸತ್ಯ, ಧರ್ಮದ ಮೇಲೆ ನಡೆಯುವವರು ಪ್ರಾಣತ್ಯಾಗಕ್ಕೂ ಸಿದ್ಧ. ಪ್ರಾಣ ತೆಗೆಯುವುದಕ್ಕೂ ಸಿದ್ಧ ಎಂದು ಶಿವಮೊಗ್ಗದಲ್ಲಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಹೇಳಿದರು.
ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ನಡೆಯುತ್ತಿರುವ ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ ತ್ರೈವಾರ್ಷಿಕ ಸಮ್ಮೇಳನ ಹಾಗೂ ಸಾರ್ವಜನಿಕ ಸಭೆಯಲ್ಲಿ ಮಾತಾನಾಡಿದ ಅವರು, ಮೊಗಲರ ಕಾಲದಲ್ಲಿ ವೀರ ಶಿವಾಜಿ ಸೇರಿದಂತೆ ಹಲವರು ವೀರಗತಿ ಪಡೆದಿದ್ದರು. ಶಿವಮೊಗ್ಗದಲ್ಲಿ ವೀರ ಶಿವಮೂರ್ತಿ, ಬಿಜೆಪಿ ಕಾರ್ಯಕರ್ತ ವಿಶ್ವನಾಥ ಶೆಟ್ಟಿ, ಗೋವಿಂದ್ ರಾಜ್, ಭಜರಂಗದಳ ಗೋಕುಲ್ ಇವರನ್ನು ಹತ್ಯೆಗೆಯಲಾಯಿತು. ಹಿಂದೂ ಹರ್ಷನ ಹತ್ಯೆಗೈದು ಹೆಚ್ಚು ದಿನ ಆಗಲಿಲ್ಲ. ರುದ್ರೇಶ್, ಪ್ರವೀಣ್ ನೆಟ್ಟಾರ್, ಕುಟ್ಟಪ್ಪ, ಸೌಮ್ಯ ಭಟ್ ಮೊದಲಾದವರ ಹತ್ಯೆ ಮಾಡಲಾಗಿದೆ. ಈ ವೀರರಿಗೆ ನನ್ನ ಪ್ರಾಣಾಮಗಳು. ಈಗ ಸಾಯುವ ಅಲ್ಲ. ಕಾಲ ಸಾಯಿಸುವ ಕಾಲ ಎಂದರು.
ನನ್ನ ಈ ರೀತಿ ಹೇಳಿಕೆ ಕೊಟ್ಟರೆ ಬಿಜೆಪಿ ಸಂಸದ ಎಂದು ಕರೆಯುತ್ತಾರೆ. ನಾನು ಹಿಂದುತ್ವದ ಕಾರಣದಿಂದಲೇ ಬಿಜೆಪಿ ಸಂಸದೆಯಾಗಿದ್ದೇನೆ. ನನ್ನನ್ನು ಸಾಯಿಸಲು ಬಹಳಷ್ಟು ಬೆದರಿಕೆಗಳು ಬರುತ್ತದೆ. ನಾನು ಅವರಿಗೆ ಎದುರಿಗೆ ಬನ್ನಿ ಎಂದು ಸವಾಲು ಒಡ್ಡುತ್ತೇನೆ ನಾರಿ ಶಕ್ತಿ ಹೇಗಿರುತ್ತದೆ, ಸನಾತನ ಶಕ್ತಿ ಹೇಗಿರುತ್ತೆ ಎಂದು ತೋರಿಸುತ್ತೇನೆ. ರಾಜಕೀಯ ಇರುತ್ತದೆ ಹೋಗುತ್ತದೆ ಆದರೆ ಸನ್ಯಾಸತ್ವ ಹಾಗಲ್ಲ. ಕಾಶ್ಮೀರ ಬಿಟ್ಟು ಕೊಡಿ ಎನ್ನುತ್ತಾರೆ. ಅದು ಕೇವಲ ತುಂಡುಭೂಮಿಯಲ್ಲ ಭಾರತಮಾತೆಯ ಶಿರ ಎಂದರು.
ಇದನ್ನೂ ಓದಿ: ರಾಹುಲ್ ಯಾತ್ರೆ ತಡೆಗೆ ಕೋವಿಡ್ ನೆಪ: ಸತೀಶ್ ಜಾರಕಿಹೊಳಿ
ನರೇಂದ್ರ ಮೋದಿ ಸುಮ್ಮನೆ ಪ್ರಧಾನಿ ಆಗಲಿಲ್ಲ . ಅವರ ತನುಮನದಲ್ಲಿ ದೇಶಕ್ಕೆ ಅರ್ಪಣೆ ಇದೆ. ಪ್ರಪಂಚದ ದೊಡ್ಡ ದೊಡ್ಡ ದೇಶಗಳಲ್ಲಿ ಭಾರತದ ಧ್ವಜ ಹಿಡಿದರೇ ಸಾಕು ಆತ ಸುರಕ್ಷಿತಯಾಗುತ್ತಾನೆ. ಹಿಂದೂವಿಗೆ ಅಪಮಾನ ಮಾಡುವುದನ್ನು ಕಾಂಗ್ರೆಸ್ ಬಿಡಬೇಕು. ಹಿಂದು ಈಗ ಜಾಗೃತನಾಗಿದ್ದಾನೆ. ಹಿಂದೂ ಉಗ್ರಗಾಮಿ ಆಗಿದ್ದರೆ ದೇಶ ಸುರಕ್ಷಿತವಾಗಿ ಇರುತ್ತಿರಲಿಲ್ಲ. ಅತಿಥಿ ದೇವೋಭವ ಎಂದು ರೋಹಿಂಗ್ಯಾಗಳನ್ನು ಭಾರತದಲ್ಲಿ ಬಿಟ್ಟುಕೊಂಡು ಅವರು ಉಗ್ರ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಲವ್ ಜಿಹಾದ್ ಮಾಡುವವರಿಗೆ ಲವ್ ಜಿಹಾದ್ ಮೂಲಕ ಉತ್ತರ ಕೊಡಿ. ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತವಾಗಿಸಿ ಸಿದ್ಧವಾಗಿಡಿ.ಯಾವ ಸಮಯ ಬರುತ್ತೋ ಗೊತ್ತಿಲ್ಲ. ಆತ್ಮ ರಕ್ಷಣೆಗಾಗಿ ನಾವು ದಾಳಿ ಮಾಡಬೇಕಾಗುತ್ತದೆ. ಹರ್ಷ ಹಿಂದೂ ಸೇರಿದಂತೆ ಹಲವರ ಮೇಲೆ ನಡೆದ ದಾಳಿ ನಮ್ಮ ಮೇಲೂ ಆಗಬಹುದು. ಹೆಣ್ಣು ಮಕ್ಕಳನ್ನು ನಡೆದಾಡುವ ಆಟಂ ಬಾಂಬುಗಳಂತೆ ಸಿದ್ಧಪಡಿಸಬೇಕು. ಹೆಣ್ಣು ಮಕ್ಕಳ ಮರ್ಯಾದೆಗೆ ಬಂದರೆ ತಿರುಗಿ ಬೀಳಬೇಕಿದೆ. ನಮ್ಮ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ನಮ್ಮ ಕುಟುಂಬದ, ನಮ್ಮ ಪ್ರದೇಶದ ಹಾಗೆ ದೇಶದ ರಕ್ಷಣೆಗೆ ಸಿದ್ದರಾಗಬೇಕು. ಆಯುಧ ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನುಬಾಹಿರ ಇರಬಹುದು ಆದರೆ, ಆತ್ಮರಕ್ಷಣೆಗಾಗಿ ಆಯುಧಗಳನ್ನು ಇಟ್ಟುಕೊಳ್ಳುವುದು ತಪ್ಪಲ್ಲ. ಅಗತ್ಯ ಬಿದ್ದರೆ ಆಯುಧಗಳಿಗೆ ಪರವಾನಿಗೆಯನ್ನು ಇಟ್ಟುಕೊಳ್ಳಿ ಧರ್ಮದ ಪಕ್ಷದಲ್ಲಿದ್ದರೆ ಯಾವುದಕ್ಕೂ ಹೆದರಬೇಕಾಗಿಲ್ಲ ಎಂದರು.
ಸಿಎಎ ವಿರುದ್ಧ ಪ್ರತಿಭಟನೆ ಬೇಕಿರಲಿಲ್ಲ ಆದರೂ ಪ್ರತಿಭಟನೆ ನಡೆಸಿದರು. ಜನಸಂಖ್ಯಾ ನಿಯಂತ್ರಣ ದೇಶದಲ್ಲಿ ಆಗಬೇಕಿದೆ. ಹಿಂದೂ ರಾಷ್ಟ್ರ ಆದರೆ ದೇಶದ ಜನತೆ ಸುಖವಾಗಿರುತ್ತದೆ ಎಂದರು.
ಮಿಷನರಿ ಶಾಲೆಗಳಲ್ಲಿ ಮಕ್ಕಳನ್ನು ಕಳಿಸಬೇಡಿ. ಅಂತಹವರು ಮುಂದೆ ವೃದ್ಧಾಶ್ರಮಕ್ಕೆ ಹೋಗಬೇಕಾಗುತ್ತದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಕಲಿಸಿ. ಗೀತೋಪದೇಶ, ರಾಮಾಯಣ, ಹನುಮಾನ್ ಚಾಲಿಸಾ ಕಲಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.