ರಜೆಯ ಮಜಾ “ಸಜೆ’ಯಾಗದಿರಲಿ; ಕೋವಿಡ್ ಬಗ್ಗೆ ಜಾಗೃತರಾಗಿರಿ: ಪ್ರಧಾನಿ ಮೋದಿ ಸಲಹೆ
ಈ ವರ್ಷದ ಕೊನೆಯ "ಮನ್ ಕಿ ಬಾತ್'
Team Udayavani, Dec 25, 2022, 8:43 PM IST
ನವದೆಹಲಿ:“ಹಲವು ದೇಶಗಳಲ್ಲಿ ಈಗ ಮತ್ತೆ ಕೊರೊನಾ ವೈರಸ್ ಹಬ್ಬುತ್ತಿದೆ. ಈ ಬಗ್ಗೆ ಎಲ್ಲರೂ ಜಾಗರೂಕರಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕಿನಿಂದ ರಕ್ಷಿಸಿಕೊಳ್ಳಿ.’
ಭಾನುವಾರ ತಮ್ಮ ಈ ವರ್ಷದ ಕೊನೆಯ “ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕಿವಿಮಾತಿದು.
ಬಹಳಷ್ಟು ಮಂದಿ ಈಗ ರಜೆಯಲ್ಲಿದ್ದೀರಿ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗೆಂದು ಪ್ರವಾಸ, ದೂರ ಪ್ರಯಾಣಕ್ಕೂ ಪ್ಲ್ರಾನ್ ಮಾಡಿಕೊಂಡಿರುತ್ತೀರಿ. ಆದರೆ, ನಿಮ್ಮ ಈ ರಜೆಯ ಮಜಾದ ಮೇಲೆ ವೈರಸ್ ಪ್ರತಿಕೂಲ ಪರಿಣಾಮ ಬೀರಬಾರದು ಎಂದಾದರೆ ಮಾಸ್ಕ್ಧಾರಣೆ, ಕೈಗಳನ್ನು ಸ್ವತ್ಛಗೊಳಿಸುವಿಕೆ ಮುಂತಾದ ಎಲ್ಲ ಮಾರ್ಗಸೂಚಿಗಳನ್ನೂ ಪಾಲಿಸಬೇಕು ಎಂದೂ ಮೋದಿ ಸಲಹೆ ನೀಡಿದ್ದಾರೆ.
2022 ಸ್ಫೂರ್ತಿದಾಯಕ ವರ್ಷ:
ಇದೇ ವೇಳೆ, 2022ನೇ ವರ್ಷವು ಭಾರತದ ಮಟ್ಟಿಗೆ ಬೇರೆ ಬೇರೆ ರೀತಿಯಲ್ಲಿ ಸ್ಫೂರ್ತಿದಾಯಕವಾಗಿತ್ತು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಸುಮಾರು 22 ಕೋಟಿ ಡೋಸ್ ಲಸಿಕೆ ವಿತರಣೆ ಮೂಲಕ ಭಾರತವು ಜಗತ್ತಿನಲ್ಲೇ ತನ್ನದೇ ಆದ ವಿಶೇಷ ಛಾಪು ಮೂಡಿಸಿತು. ಇದಲ್ಲದೇ, ಭಾರತವು 5ನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಿ ರೂಪುಗೊಳ್ಳುತ್ತಿದೆ. ಭಾರತವು ರಫ್ತಿನಲ್ಲಿ 400 ಶತಕೋಟಿ ಡಾಲರ್‌ನ ದಾಖಲೆ ಬರೆದಿದೆ. ಬಾಹ್ಯಾಕಾಶ, ರಕ್ಷಣೆ, ಡ್ರೋನ್ ವಲಯದಲ್ಲೂ ಹೊಸ ಮೈಲುಗಲ್ಲುಗಳನ್ನು ಸಾಧಿಸಿದೆ ಎಂದು ಮೋದಿ ನುಡಿದರು.
ಶಿವಮೊಗ್ಗ, ಗದಗದ ಸಾಧಕರ ಪ್ರಸ್ತಾಪ
ಮನದ ಮಾತಿನಲ್ಲಿ ಮೋದಿಯವರು, ಅಡಿಕೆ ಹಾಳೆಯಿಂದ ವಿಶೇಷ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡುತ್ತಿರುವ ಶಿವಮೊಗ್ಗದ ದಂಪತಿ ಸುರೇಶ್-ಮೈಥಿಲಿ ದಂಪತಿಯ ಸಾಧನೆಯನ್ನು ಕೊಂಡಾಡಿದ್ದಾರೆ. ಜತೆಗೆ, ಕಳೆದ 25 ವರ್ಷಗಳಿಂದ ಕರ್ನಾಟಕದ ಕಲೆ-ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ “ಕಲಾ ಚೇತನ’ ಎಂಬ ವೇದಿಕೆ ಸೃಷ್ಟಿಸಿರುವ ಗದಗ ಜಿಲ್ಲೆಯ ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ ಅವರನ್ನೂ ಮೋದಿ ಶ್ಲಾ ಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.