ಕುಮಾರ ಶ್ರೀಗಳ ರಥಯಾತ್ರೆ ಯಶಸ್ವಿಗೊಳಿಸಿ; ಸದಾಶಿವ ಶ್ರೀ
ಡಿ. 29ರಂದು ಮ.4ಕ್ಕೆ ಗುಳೇದಗುಡ್ಡದಿಂದ ಬಾದಾಮಿಗೆ ಆಗಮಿಸಿ ನಂತರ ಶಿವಯೋಗಮಂದಿರಕ್ಕೆ ತೆರಳಲಿದೆ
Team Udayavani, Dec 26, 2022, 7:00 PM IST
ಬಾದಾಮಿ: ಧಾರ್ಮಿಕ, ಸಾಮಾಜಿಕ ಕಳಕಳಿ, ಶೈಕ್ಷಣಿಕ ಅಭಿವೃದ್ಧಿಗೆ ಭದ್ರಬುನಾದಿ ಮೂಲಕ ಶತಮಾನದ ಹಿಂದೆ ಕ್ರಾಂತಿಕಾರಿ ಕಾರ್ಯೋನ್ಮುಖೀಯಾಗಿ ಕಾಯಕ ಯೋಗಿ ಲಿಂ| ಗುರುಕುಮಾರ ಶಿವಯೋಗಿಗಳವರ ಚಲನಚಿತ್ರ ವಿರಾಟಪುರ ವಿರಾಗಿ ಪ್ರಚಾರ ಹಾಗೂ ಕುಮಾರ ಶ್ರೀಗಳವರ ರಥಯಾತ್ರೆ ಯಶಸ್ವಿಗೊಳಿಸಬೇಕು ಎಂದು ಶಿವಯೋಗ ಮಂದಿರ ಸಂಸ್ಥೆಯ ಉಪಾಧ್ಯಕ್ಷ ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀ ಹೇಳಿದರು.
ಇಲ್ಲಿಯ ಶಿವಯೋಗಮಂದಿರ ಶಾಖಾ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಮಾರ ಶ್ರೀಗಳು ನಮಗೆ ದೇವರ ಸ್ವರೂಪ. ಸಂಸ್ಕಾರದ ದಾರಿ ತೋರಿದ ಅವರನ್ನು ನಿತ್ಯ ಸ್ಮರಿಸಿ ಜೀವಿಸುವುದು ಎಲ್ಲರ ಕರ್ತವ್ಯ. ರಾಜ್ಯದ ವಿವಿಧೆಡೆ ಈಗಾಗಲೆ ರಥಯಾತ್ರೆ ಆರಂಭಗೊಂಡಿದೆ. ಡಿ. 29ರಂದು ಮ.4ಕ್ಕೆ ಗುಳೇದಗುಡ್ಡದಿಂದ ಬಾದಾಮಿಗೆ ಆಗಮಿಸಿ ನಂತರ ಶಿವಯೋಗಮಂದಿರಕ್ಕೆ ತೆರಳಲಿದೆ. ನಗರದ ಬಸವೇಶ್ವರ ಸರ್ಕಲ್‌ಗೆ ಆಗಮಿಸುವ ರಥ ಯಾತ್ರೆಯನ್ನು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಅದ್ದೂರಿಯಿಂದ ಸ್ವಾಗತಿಸಿ ಪ್ರಸಾದ ವ್ಯವಸ್ಥೆಗೆ ನಿರ್ಣಯಿಸಲಾಗಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕುಮಾರ ಶ್ರೀಗಳ ಕೃಪೆಗೆ ಪಾತ್ರರಾಗಬೇಕು ಎಂದರು. ಶಿವಯೋಗ ಮಂದಿರ ಧರ್ಮದರ್ಶಿ ಎಂ.ಬಿ.ಹಂಗರಗಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ವೀರಪುಲಿಕೇಶಿ ವಿದ್ಯಾ ಸಂಸ್ಥೆ ಚೇರಮನ್ ಎ.ಸಿ. ಪಟ್ಟಣದ, ನಿವೃತ್ತ ಪ್ರಾಚಾರ್ಯ ಆರ್.ಬಿ.ಸಂಕದಾಳ ಮಾತನಾಡಿದರು.
ಮುಖಂಡರಾದ ಮುದಕಯ್ಯನವರು ಹಿರೇಮಠ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಶರಣಗೌಡ ಪಾಟೀಲ, ಪಿ.ಆರ್. ಗೌಡರ, ಪುರಸಭೆ ಅಧ್ಯಕ್ಷ ಆರ್. ಎಫ್.ಬಾಗವಾನ, ಮಹೇಶ ಹೊಸಗೌಡ್ರ, ಸಿದ್ದಣ್ಣ ಟೆಂಗಿನಕಾಯಿ, ಕಸ್ತೂರಮ್ಮ ಮಮದಾಪುರ, ಸುನೀಲ ಕಾರುಡಗಿಮಠ, ಪಂಪಣ್ಣ ಕಾಚೆಟ್ಟಿ, ನಾಗರತ್ನಾ ಪಟ್ಟಣದ, ಸಿದ್ದಣ್ಣ ಮಿಟ್ಟಲಕೋಡ, ಜಿ.ಎಂ.ಹಿರೇಮಠ, ನಾಗರಾಜ ಕಾಚೆಟ್ಟಿ, ಮುತ್ತಣ್ಣ ಚಿನಿವಾಲರ, ಶರಣಪ್ಪ ಮಾವಿನಮರದ, ಗಣೇಶ ಕುಬಸದ, ಇಷ್ಟಲಿಂಗ ಶಿರಸಿ, ಶಿವು ಹಿರೇಮಠ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.