ದೇಗುಲಗಳ ಬಾಡಿಗೆ ಹಣ ದೇವರ ಲೆಕ್ಕಕ್ಕೆ


Team Udayavani, Dec 27, 2022, 10:11 AM IST

tdy-6

ಬೆಂಗಳೂರು ಒಂದೆಡೆ ಸರ್ಕಾರ ಆರ್ಥಿಕ ಮಿತವ್ಯಯದ ಜಪ ಮಾಡುತ್ತದೆ. ಮತ್ತೂಂದೆಡೆ ಸರ್ಕಾರಿ ಇಲಾಖೆಗಳೇ ತಮಗೆ ಬರಬೇಕಾದ ಹಣವನ್ನು ಹಲವು ವರ್ಷಗಳಿಂದ ವಸೂಲು ಮಾಡದೆ ಬಾಕಿ ಉಳಿಸಿಕೊಂಡಿವೆ.

ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಡಿ ನಗರದಲ್ಲಿ ದೇವಾಲಯಗಳ ಸುಪರ್ದಿಯಲ್ಲಿ ನಡೆಸುವ ಕೆಲವು ಶಿಕ್ಷಣ ಹಾಗೂ ವಾಣಿಜ್ಯ ಸಂಸ್ಥೆಗಳು ಲಕ್ಷಾಂತರ ಬಾಡಿಗೆ ಬಾಕಿ ಉಳಿಸಿಕೊಂಡಿದ್ದು, ಅವುಗಳ ಮೊತ್ತ ಸುಮಾರು 6 ರಿಂದ 7 ಕೋಟಿ ರೂಪಾಯಿ ಆಗುತ್ತದೆ. ಈ ಹಣದಲ್ಲಿ ಆಯಾ ದೇವಾಲಯಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಆದರೆ, ನಿಯಮಿತವಾಗಿ ಬಾಡಿಗೆ ಬಾರದಿರುವುದರಿಂದ ಇದು ಸಾಧ್ಯವಾಗುತ್ತಿಲ್ಲ. ದತ್ತಿ ಇಲಾಖೆಯಡಿ ರಾಜ್ಯದಲ್ಲಿ ಒಟ್ಟು 34,336 ಹಾಗೂ ರಾಜಧಾನಿಯಲ್ಲಿ 1,065 ದೇವಾಲಯಗಳು ಬರುತ್ತವೆ.  ನಗರದಲ್ಲಿನ ಬಹುತೇಕರು ಸುಮಾರು ನಾಲ್ಕೈದು ವರ್ಷಗಳಿಂದ ಬಾಡಿಗೆ ಹಣವನ್ನು ಪಾವತಿಸದೆ, ಪ್ರತಿ ದೇವಾಲಯವು ಲಕ್ಷಗಟ್ಟಲೇ ಹಣ ಬಾಕಿ ಉಳಿಸಿಕೊಂಡಿವೆ.

ಇದರಲ್ಲಿ ನಗರದಲ್ಲಿನ ಹಲವು ದೇವಸ್ಥಾನಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಹೆಚ್ಚಿವೆ ಎನ್ನಲಾಗಿದೆ. ಮಲ್ಲೇಶ್ವರ ರಾಘವೇಂದ್ರ ಆಂಜನೇಯಸ್ವಾಮಿ ದೇವಸ್ಥಾನದ ಜಾಗದಲ್ಲಿರುವ ಅಂಗಡಿಯವರು ಒಟ್ಟು 83,42,600 ರೂ. ಬಾಡಿಗೆಯನ್ನು ಒದಗಿಸಬೇಕಿದೆ. ಚಾಮರಾಜಪೇಟೆಯ ಮಿಂಟೋ ಆಂಜನೇಯಸ್ವಾಮಿ ದೇವಾಲಯದಡಿ ಇರುವ ಚಾಮರಾಜಪೇಟೆ ಶಾಖೆಯು ಪ್ರತಿಷ್ಠಿತ ಹಣಕಾಸು ಸಂಸ್ಥೆಯೊಂದು 66,93,302 ರೂ. ಹಾಗೂ ಆದಾಯ ತೆರಿಗೆ ಸಂಸ್ಥೆಯು 3.53 ಲಕ್ಷ ರೂ.ಗಳನ್ನು ದತ್ತಿ ಇಲಾಖೆಗೆ ಬಾಡಿಗೆ ನೀಡಬೇಕಿದೆ. ಕೆ.ಜಿ. ರಸ್ತೆಯಲ್ಲಿರುವ ಬಂಡಿಶೇಶಮ್ಮ ದೇವಾಲಯವು 87 ಸಾವಿರ ರೂ., ಬಳೆ ಪೇಟೆಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ವ್ಯಾಪ್ತಿಯಲ್ಲಿನ ಸಂಸ್ಥೆಯಿಂದ 2.18ಲಕ್ಷ ಬಾಡಿಗೆ ಹಣ ಬಾಕಿ ಇದ್ದರೆ, ಚಾಮರಾಜಪೇಟೆಯ ಕರಿಕಲ್ಲು ಆಂಜ ನೇಯ ದೇವಾಲಯಕ್ಕೆ ಸಂಬಂಧ ಜಾಗದಲ್ಲಿರುವ ಬಹುತೇಕ ಅಂಗಡಿಗಳು 3 ಕೋಟಿ ಪಾವತಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾಕಿ ಉಳಿಯಲು ಪರೋಕ್ಷವಾಗಿ ಇಲಾಖೆ ತೆಗೆದುಕೊಂಡ ನಿರ್ಧಾರವೂ ಕಾರಣವಾಗಿದೆ. ಮಲ್ಲೇಶ್ವರದಲ್ಲಿರುವ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಾಲಯದ ಪ್ರದೇಶದಲ್ಲಿರುವ ವಿದ್ಯಾ ಮಂದಿರ ವಿದ್ಯಾ ಸಂಸ್ಥೆಯು ಸುಮಾರು 40 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, 2016ರ ಮೊದಲು ಚದರಡಿಗೆ 30 ರೂ.ನಂತೆ ಬಾಡಿಗೆ ನೀಡುತ್ತಿತ್ತು. ಅದರಂತೆ ತಿಂಗಳಿಗೆ 4.12 ಲಕ್ಷ ರೂ. ಬಾಡಿಗೆ ಕಟ್ಟುತ್ತಿದ್ದರು. ತದನಂತರ ಚದರಡಿಗೆ 77 ರೂ.ಗಳನ್ನು ಹೆಚ್ಚಿಸಿತು. ಆಗ ತಿಂಗಳಿಗೆ 10.52 ಲಕ್ಷ ರೂ. ಕಟ್ಟಬೇಕಿದೆ. ಆದರೆ, ದೇವಸ್ಥಾನ ಆವರಣದಲ್ಲಿ ಬಹುತೇಕ ದತ್ತಿ ಶಿಕ್ಷಣ ಸಂಸ್ಥೆಗಳೂ ಇವೆ. ಅವೆಲ್ಲವೂ ಬಡಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸುತ್ತಿವೆ. ಅಂತಹ ಸಂಸ್ಥೆಗಳಿಗೆ ಇಲಾಖೆ ಈ “ದುಬಾರಿ ಬಾಡಿಗೆ’ ಹೊರೆಯಾಗಿ ಪರಿಣಮಿಸಿದೆ. ಅಷ್ಟಕ್ಕೂ ದೇವಸ್ಥಾನದ ಸಮಿತಿಗಳು, “ಸಮಾಜ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಏಕಾಏಕಿ ಚದರಡಿಗೆ ದುಪ್ಪಟ್ಟು ಹಣ ಹೆಚ್ಚಿಸಿದರೆ ಪಾವತಿಸುವುದು ಹೇಗೆ ಎಂದು ವಿರೋಧಿಸಿ, ಬಾಡಿಗೆ ನೀಡಲು ನಿರಾಕರಿಸುತ್ತಿದ್ದಾರೆ.

ಕೋರ್ಟ್‌ ಮೊರೆ ಹೋದ ಬಾಡಿಗೆದಾರರು : ಸರ್ಕಾರವು ನಿಗದಿಪಡಿಸಿದ ಬಾಡಿಗೆ ಹಣವು ಅಧಿಕವಾಗಿದ್ದು, ಸಮಾಜ ಸೇವೆ ಹಾಗೂ ವಿದ್ಯಾ ದಾನವನ್ನು ನೀಡುವ ದೇವಾಲಯಗಳಿಗೆ ಬಾಡಿಗೆ ದರವನ್ನು ದುಪ್ಪಟ್ಟು ಮಾಡುವುದು ಸರಿಯೇ ಎಂದು ಕೋರ್ಟ್‌ ಮೊರೆ ಹೋಗಿದ್ದಾರೆ. ಚದರಡಿಗೆ ಸರಿಯಾದ ಬೆಲೆಯನ್ನು ನಿಗದಿಪಡಿಸಿದರೆ ಮಾತ್ರ ಬಾಡಿಗೆ ಕಟ್ಟುತ್ತೇವೆ ಎನ್ನುವುದು ಬಾಡಿಗೆದಾರರ ವಾದ.

ಹಣ ಬಂದರೆ ದೇಗುಲ ಅಭಿವೃದ್ಧಿಗೆ ಬಳಕೆ: ಬಾಕಿ ಇರುವ ಸುಮಾರು ಆರರಿಂದ ಏಳು ಕೋಟಿ ರೂ. ಇಲಾಖೆಗೆ ಬಂದಿದ್ದರೆ, ಬಾಡಿಗೆ ಹಣದಿಂದ ಆಯಾ ದೇವಾಲ ಯದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತಿತ್ತು. ಜತೆಗೆ ದೇವಾಲಯಗಳಿಗೆ ಮೂಲಸೌಕರ್ಯ, ಕಟ್ಟಡ ಕಾಮಗಾರಿ, ನೌಕರರಿಗೆ ವೇತನದಲ್ಲಿ ಹೆಚ್ಚಳ, ದೇವರಿಗೆ ಚಿನ್ನಾಭರಣಗಳ ಖರೀದಿಗೆ ಬಳಸಲಾಗುತ್ತಿತ್ತು ಎಂಬುದು ಅಧಿಕಾರಿಗಳ ವಾದ.

ದತ್ತಿ ಇಲಾಖೆಯಡಿ ಬರುವ ದೇವಾಲಯ, ಶಿಕ್ಷಣ ಸಂಸ್ಥೆ ಹಾಗೂ ವಾಣಿಜ್ಯ ಸಂಸ್ಥೆಗಳಿಂದ ಕಡ್ಡಾಯವಾಗಿ ಬಾಡಿಗೆ ಸಂಗ್ರಹಿಸಬೇಕು ಎಂದು ಸರ್ಕಾರ ಅಥವಾ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ. ಇಲಾಖೆಯು ಈ ಬಗ್ಗೆ ಕ್ರಮ ಕೈಗೊಂಡರೆ, ಅದನ್ನು ನಾವು ಪಾಲಿಸುತ್ತೇವೆ. -ಎಸ್‌.ಆರ್‌.ಅರವಿಂದ ಬಾಬು, ಮುಜರಾಯಿ ತಹಶೀಲ್ದಾರ್‌

-ಭಾರತಿ ಸಜ್ಜನ್‌

ಟಾಪ್ ನ್ಯೂಸ್

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.