ಅಧಿವೇಶನ ಬಳಿಕ ಅಭ್ಯರ್ಥಿಗಳ ಮೌಲ್ಯಮಾಪನ
Team Udayavani, Dec 27, 2022, 4:26 PM IST
ಚನ್ನರಾಯಪಟ್ಟಣ: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ನಿಧಾನವಾಗಿ ಪ್ರಾರಂಭವಾಗುತ್ತಿದ್ದು ಚಳಿಗಾಲದ ಅಧಿವೇಶನ ಮುಗಿದ ಬಳಿಕ ಕ್ಷೇತ್ರದಲ್ಲಿ ರಾಜಕೀಯ ಕಾವು ಮತಷ್ಟು ಏರಿಕೆ ಆಗುವ ಲಕ್ಷಣಗಳು ಕಾಣುತ್ತಿವೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲು ಈಗಾಗಲೆ ಏಳು ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿ ದ್ದಾರೆ. ಇವರಲ್ಲಿ ಯಾರಿಗೆ ಒಲಿಯಲಿದೆ ಆ ಅದೃಷ್ಟ ಎನ್ನುವುದು ಮಾತ್ರ ಇಂದಿಗೂ ನಿಗೂಢವಾಗಿದೆ. ಆದರೂ, ಅರ್ಜಿ ಸಲ್ಲಿಸಿದ ವರೆಲ್ಲ ಸುಮ್ಮನೆ ಕುಳಿತಿಲ್ಲ. ತಮ್ಮದೇ ತಂತ್ರಗಾರಿಕೆಯಲ್ಲಿ ಪಕ್ಷದ ವರಿ ಷ್ಠರ ಬಳಿ ಟಿಕೆಟ್‌ಗೆ ಲಾಬಿ ನಡೆಸಿದ್ದು, ಕ್ಷೇತ್ರದ ಮತದಾರರನ್ನು ಒಂದಲ್ಲ ಒಂದು ರೀತಿಯಲ್ಲಿ ತಲುಪುವ ಪ್ರಯತ್ನ ಮಾಡುತ್ತಿದ್ದಾರೆ.
ಯಾರ್ಯಾರು ಅರ್ಜಿ ಸಲ್ಲಿಸಿದ್ದಾರೆ: ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ, ಶ್ರೀಕಂಠಯ್ಯ ಕುಟುಂಬದಿಂದ ಸೊಸೆ ರಾಜೇಶ್ವರಿ ವಿಜಯ ಕುಮಾರ್, ಮೊಮ್ಮಗ ಲಲಿತ ರಾಘವ್ (ದೀಪು), ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎಂ. ಶಂಕ ರ್, ಮಾಜಿ ಶಾಸಕ ಪುಟ್ಟೇಗೌಡರ ಪುತ್ರ ಜಿಪಂ ಮಾಜಿ ಸದಸ್ಯ ಎನ್.ಡಿ. ಕಿಶೋರ್, ಕೊರೊನಾ ವೇಳೆ ಕ್ಷೇತ್ರದ ಜನರ ಪಾಲಿನ ಸಂಜೀವಿನಿ ಎಂದು ಖ್ಯಾತಿ ಪಡೆದಿರುವ ಮನೋಹರ್ ಕುಂಬೇನಹಳ್ಳಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.
ಜನಾಶೀರ್ವಾದ ಸಮಾರಂಭ: ಕ್ಷೇತ್ರದ ಮತದಾರರನ್ನು ತಲುಪುವ ಉದ್ದೇಶದಿಂದ ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಜನಾಶೀರ್ವಾದ ಹಾಗೂ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಿ, ಗ್ರಾಮೀಣ ಭಾಗದಿಂದ ಸಾವಿರಾರು ಜನರನ್ನು ತಲುಪುವ ಪ್ರಯತ್ನ ಮಾಡಿದರು. ಮುಂದಿನ ಹೆಜ್ಜೆಯಾಗಿ ಪ್ರತಿ ಮತದಾರರನ್ನು ತಲುಪುವ ನಿಟ್ಟಿನಲ್ಲಿ ಎಲ್ಲ ಹೋಬಳಿಯಲ್ಲಿ ಆರೋಗ್ಯ ತಪಾ ಸಣಾ ಶಿಬಿರ ಆಯೋಜನೆಗೆ ಸಕಲ ತಯಾರಿ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಬೂಸ್ಟರ್: ಎಂ.ಎ.ಗೋಪಾಲಸ್ವಾಮಿ ಕಾಂಗ್ರೆಸ್ ಪಕ್ಷದ ಬೂಸ್ಟರ್, ಶ್ರೀಕಂಠಯ್ಯ ನಂತರ ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಿದರು. ಇನ್ನು 2016ರಲ್ಲಿ ಜೆಡಿಎಸ್ ವಿರುದ್ದ ಎಂಎಲ್‌ಸಿ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ಗೋಪಾಲಸ್ವಾಮಿ ಹೆಸರು ಮಾಡಿದಲ್ಲದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿ ಸುವ ಮೂಲಕ ರಾಹುಲ್ ಗಾಂಧಿ ರಾಜ್ಯಮಟ್ಟದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಇತರ ನಾಯ ಕರ ಮನ ಮುಟ್ಟಿದ್ದರು.
ಶ್ರೀ ಕಂಠಯ್ಯರ ಶ್ರೀರಕ್ಷೆ: ಶ್ರೀ ಕಂಠಯ್ಯ ಕುಟುಂಬದವರು ಕ್ಷೇತ್ರದಲ್ಲಿ ಅಷ್ಟಾಗಿ ಸಂಚಾರ ಮಾಡಿ ಮತದಾರರನ್ನು ತಲುಪುವ ಹರಸಾಹಕ್ಕೆ ಕೈ ಹಾಕಿಲ್ಲ. ಅವರಿಗೆ ಶ್ರೀಕಂಠಯ್ಯ ಹೆಸರೇ ಶ್ರೀ ರಕ್ಷೆಯಾಗಿದೆ. ಸ್ಥಳೀಯವಾಗಿ ವಾಸವಾಗಿರುವ ವಿಜಯಕುಮಾರ್ ಪಕ್ಷದ ಸಭೆ ಸಮಾರಂಭದಲ್ಲಿ ಮಾತ್ರ ಪಾಲ್ಗೊಳ್ಳುತ್ತಾರೆ. ಉಳಿದಂತೆ ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡಿದ್ದು ತಮ್ಮ ಪತ್ನಿ ರಾಜೇಶ್ವರಿಗೆ ಟಿಕೆಟ್ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ಚುನಾವಣೆ ವೇಳೆ ಪ್ರಜ್ವಲಿಸಿದ ದೀಪು: ಶ್ರೀಕಂಠಯ್ಯ ಜೇಷ್ಠ ಪುತ್ರ ಚಂದ್ರು ಅವರ ಪುತ್ರ ಲಲಿತ ರಾಘವ್ (ದೀಪು) ತಾವು ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗುವ ಅಭಿಪ್ರಾಯ ವ್ಯಕ್ತಪಡಿಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ವಾಸವಿದ್ದು ಗ್ರಾಪಂ, ತಾಲೂಕು ಹಾಗೂ ಜಿಪಂ ಚುನಾ ವಣೆ ವೇಳೆ ಸ್ಥಳೀಯವಾಗಿ ವಾಸವಿರುವುದನ್ನು ಹಲವು ವರ್ಷದಿಂದ ರೂಢಿಸಿಕೊಂಡು ಬಂದಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರು, ಕ್ಷೇತ್ರದಲ್ಲಿ ವಾಸವಿಲ್ಲ. ಆದರೂ, ಟಿಕೆಟ್ ಪಡೆಯಲು ಬೆಂಗಳೂರು ಮಟ್ಟದಲ್ಲಿ ಲಾಭಿ ಮಾಡುತ್ತಿದ್ದಾರೆ.
ಪ್ರಿಯಾಂಕ ಖರ್ಗೆ ಒಡನಾಟ: ಶ್ರೀಕಂಠಯ್ಯ ಹಾಗೂ ಖರ್ಗೆ ಉತ್ತಮ ಬಾಂಧವ್ಯ ಹೊಂದಿದ್ದರು, ಇದೇ ಹಾದಿಯನ್ನು ಮುಂದುವರೆಸಿರುವ ದೀಪು, ಖ ರ್ಗೆ ಪುತ್ರ ಪ್ರಿಯಾಂಕ ಖರ್ಗೆ ಜತೆ ಉತ್ತಮ ಬಾಂಧವ್ಯ ಹೊಂದಿದ್ದು ಸ್ನೇಹಿತರಾಗಿದ್ದಾರೆ. ಈಗ ಖರ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಇಂತಹ ವೇಳೆ ಶ್ರೀಕಂಠಯ್ಯರ ಕುಟುಂಬಕ್ಕೆ ನಿಷ್ಠೆ ತೋರುತ್ತಾರೆ ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಇನ್ನು ಪ್ರಿಯಾಂಕ ಹಾಗೂ ದೀಪು ಸ್ನೇಹವನ್ನು ಕ್ಷೇತ್ರದ ಜನತೆ ಮಾತನಾಡುತ್ತಿದ್ದು ಟಿಕೆಟ್ ದೀಪುಗೆ ದೊರೆಯುವ ಲಕ್ಷಣಗಳು ಕಾಣುತ್ತಿವೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆಎಂಆರ್: ಜೆ.ಎಂ. ರಾಮಚಂದ್ರ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಸ್ಥಳಿಯವಾಗಿ ಉತ್ತಮ ಹೆಸರು ಮಾಡಿದ್ದಾರೆ, ಡಿಕೆಶಿ ಹಾಗೂ ಸಿದ್ದರಾಮಯ್ಯ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸ್ಥಳೀಯವಾಗಿ ಕ್ಷೇತ್ರದ ಜನರ ಕೈಗೆ ಸಿಗುವ ಸಹರಳ ವ್ಯಕ್ತಿತ್ವ ಹೊಂದಿದ್ದಾರೆ. ಕಳೆದ ಮೂರು ದಶಕದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗದೆ ಕಾರ್ಯಕರ್ತರು ಅನಾಥರಾಗಿದ್ದಾರೆ. ಈ ಚುನಾವಣೆಯಲ್ಲಿ ಶತಾಯಗತ ಗೆಲುವು ಸಾಧಿಸುವುದೇ ಪಕ್ಷದ ಮುಖಂಡರ ಗುರಿಯಾಗಿದೆ. ಆ ನಿಟ್ಟಿ ನಲ್ಲಿ ಹೋರಾಟಕ್ಕಿಳಿದಿರುವ ವರಿಷ್ಠರು ಏಳು ಮಂದಿಯಲ್ಲಿ ಟಿಕೆಟ್ ಯಾರಿಗೆ ನೀಡಿದರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ. -ಜೆ.ಎಂ.ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಏಳು ಮಂದಿ ಟಿಕೆಟ್ ಕೇಳುತ್ತಿದ್ದಾರೆ ಎಂದರೆ ಕ್ಷೇತ್ರದಲ್ಲಿ ಪಕ್ಷ ಎಷ್ಟು ಗಟ್ಟಿಯಾಗಿದೆ ಎನ್ನುವುದನ್ನು ಸಾಬೀತಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ ಹೊರಗಿಡಲು ಮೈತ್ರಿ ಸರ್ಕಾರ ರಚನೆ ಮಾಡಿದೆ. ಕ್ಷೇತ್ರದ ಹಲವು ಮಂದಿ ಮತದಾರರಲ್ಲಿ ಇಂದಿಗೂ ಗೊಂದಲವಿದೆ. ಇದನ್ನು ಹೋಗಲಾಡಿಸಲು ವರಿಷ್ಠರು ಆದಷ್ಟು ಬೇಗೆ ಅಭ್ಯರ್ಥಿ ಘೋಷಣೆ ಮಾಡುವುದು ಸೂಕ್ತ. -ಎಂ.ಎ.ಗೋಪಾಲಸ್ವಾಮಿ, ಮಾಜಿ ಎಂಲ್‌ಸಿ.
-ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.