ಯಶಸ್ವಿನಿ ವಂತಿಗೆಯಲ್ಲಿ ನಗರ-ಗ್ರಾಮೀಣ ತಾರತಮ್ಯ
ಗ್ರಾಮೀಣಕ್ಕೆ 500 ರೂ., ನಗರಕ್ಕೆ 1,000 ರೂ. ನಿಗದಿ
Team Udayavani, Dec 28, 2022, 7:05 AM IST
ಮಂಗಳೂರು: ಯಶಸ್ವಿನಿ ಯೋಜನೆಯಲ್ಲಿ ಗ್ರಾಮೀಣ ಹಾಗೂ ನಗರ ಸಹಕಾರಿ ಸಂಘಗಳ ಸದಸ್ಯರಿಗೆ ಪಾವತಿಸಬೇಕಾದ ವಂತಿಗೆಯಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ ಎಂಬ ಟೀಕೆ ಕೇಳಿಬಂದಿದೆ.
ಗ್ರಾಮೀಣ ಸಹಕಾರ ಸಂಘಗಳ/ಸ್ವಸಹಾಯ ಗುಂಪುಗಳ 4 ಸದಸ್ಯರ ಕುಟುಂಬಕ್ಕೆ ವಾರ್ಷಿಕ 500 ರೂ. ಹಾಗೂ ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿ ಸದಸ್ಯರಿಗೆ ಶೇ.20ರಷ್ಟು ಹೆಚ್ಚುವರಿಯಾಗಿ ಎಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ 100 ರೂ. ಪಾವತಿಸಬೇಕಿದೆ.
ಆದರೆ ನಗರ ಸಹಕಾರಿ ಸಂಘಗಳ ಗರಿಷ್ಠ 4 ಸದಸ್ಯರ ಕುಟುಂಬವೊಂದಕ್ಕೆ ವಾರ್ಷಿಕ 1,000 ರೂ. ಮತ್ತು ಹೆಚ್ಚುವರಿ ಸದಸ್ಯರಿಗೆ 200 ರೂ. ನೀಡಬೇಕಿದೆ.
ಯಶಸ್ವಿನಿ ಅನುಷ್ಠಾನ ಅಧಿಕಾರಿಗಳ ಪ್ರಕಾರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ(ಪ್ಯಾಕ್ಸ್) ಶಾಖೆಗಳು ನಗರ ಪ್ರದೇಶದಲ್ಲಿದ್ದರೂ ಅದರ ಸದಸ್ಯರನ್ನು ಗ್ರಾಮೀಣ ಸದಸ್ಯರೆಂದೇ ಪರಿಗಣಿಸಲಾಗುತ್ತದೆ. ಅದೇ ರೀತಿ ಟಿಎಪಿಸಿಎಂಎಸ್ (ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರುಕಟ್ಟೆ ಸೊಸೈಟಿ) ಮತ್ತು ಪಿಎಲ್‌ಡಿ (ಪ್ರಾಥಮಿಕ ಭೂ ಅಭಿವೃದ್ಧಿ) ಬ್ಯಾಂಕ್ ಸದಸ್ಯರನ್ನೂ ಗ್ರಾಮೀಣ ಎಂದೇ ಪರಿಗಣಿಸಲಾಗುತ್ತದೆ.
ಪಟ್ಟಣ ಸಹಕಾರ ಬ್ಯಾಂಕ್‌ಗಳು/ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ನಗರ ಪ್ರದೇಶದ ಇತರ ಸಹಕಾರ ಸಂಘಗಳಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದ ಸದಸ್ಯರಿದ್ದರೂ, ಅವರನ್ನು ಗ್ರಾಮೀಣ ಎನ್ನಲಾಗದು.
ಯಶಸ್ವಿನಿ ಯೋಜನೆ ನಿಯಮದಿಂದಾಗಿ ಪಟ್ಟಣ, ನಗರದ ಸಹಕಾರ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿ ಸುತ್ತಿಲ್ಲ. ಸಹಕಾರ ಸಂಘಗಳ ಸದಸ್ಯರ ವಂತಿಗೆಯ ಸಂಗ್ರಹದಲ್ಲಿ ಏಕರೂಪ ಅವಶ್ಯ.
– ಚಿತ್ತರಂಜನ್ ಬೋಳಾರ್,
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು
ಈ ವಿಷಯವನ್ನು ಹಿರಿಯ ಅಧಿಕಾರಿ ಗಳ ಗಮನಕ್ಕೆ ತಂದಿದ್ದೇವೆ. ನಗರ ವ್ಯಾಪ್ತಿ ಯಲ್ಲಿ ಹಿಂದೆ ಒಬ್ಬರು ಸದಸ್ಯರಿಗೆ 750 ರೂ. ವಂತಿಗೆ ಇತ್ತು. ಈಗ ನಾಲ್ವರು ಸದಸ್ಯರಿರುವ ಕುಟುಂಬಕ್ಕೆR 1000 ರೂ. ಇದೆ. ವಾಸ್ತವ ವಾಗಿ ವಂತಿಗೆ ಕಡಿಮೆಯಾಗಿದೆ. ಇದನ್ನು ಸದಸ್ಯರಿಗೆ ಮನವರಿಕೆ ಮಾಡಬೇಕಿದೆ.
– ರಮೇಶ್ ಎಚ್.ಎನ್.,
ಸಹಕಾರಿ ಉಪನಿಬಂಧಕರು, ದಕ್ಷಿಣ ಕನ್ನಡ
- ವೇಣು ವಿನೋದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.