ಸುವರ್ಣ ಸೌಧದೆದುರು ವಕೀಲರ ತಳ್ಳಾಟ: ಪೊಲೀಸರ ತಡೆ
ವಕೀಲರ ರಕ್ಷಣ ಕಾಯ್ದೆ ಜಾರಿಗೆ ಪ್ರತಿಭಟನೆ
Team Udayavani, Dec 28, 2022, 1:10 AM IST
ಬೆಳಗಾವಿ: ವಕೀಲರ ರಕ್ಷಣ ಕಾಯ್ದೆ ಜಾರಿಗೆ ಆಗ್ರಹಿಸಿ ರಾಜ್ಯ ವಕೀಲರ ಸಂಘದಿಂದ ಮಂಗಳವಾರ ಪ್ರತಿಭಟನೆ ಮೂಲಕ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಯತ್ನ ನಡೆದಿದ್ದು, ಗೇಟ್ ಎದುರು ಪೊಲೀಸರೊಂದಿಗೆ ವಕೀಲರು ತಳ್ಳಾಟ-ನೂಕಾಟ, ವಾಗ್ವಾದ ನಡೆಸಿದರು.
ಸುವರ್ಣ ವಿಧಾನಸೌಧ ಗೇಟ್ ಬಳಿ ವಕೀಲರ ದಂಡು ಬರುತ್ತಿದ್ದಂತೆ ಗೇಟ್‌ಗಳನ್ನು ಪೊಲೀಸರು ಮುಚ್ಚಿದರು. ಬ್ಯಾರಿಕೇಡ್ ಹಾಕಿ ತಡೆದರು. ಆದರೆ ಪೊಲೀಸರ ಮನವೊಲಿಕೆಗೂ ಬಗ್ಗದೇ ಒಳ ನುಗ್ಗಲು ಯತ್ನಿಸಿದರು. ಇನ್ನೂ ಕೆಲ ವಕೀಲರು ಗೇಟ್ ಮೇಲೆ ಹತ್ತಿ ನಿಂತು ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಬ್ಯಾರಿಕೇಡ್‌ಗಳನ್ನು ತೆಗೆಯುತ್ತಿದ್ದಾಗ ಪೊಲೀಸರೊಂದಿಗೆ ನೂಕಾಟ-ತಳ್ಳಾಟ ನಡೆಯಿತು. ಆಗ ಸಚಿವರು, ಅ ಧಿಕಾರಿಗಳು ಹೊರ ಬರಲಾರದೆ ಪರದಾಡಿದರು. ಅಧಿ ವೇಶನ ಕಣ್ತುಂಬಿಕೊಳ್ಳಲು ಬಂದಿದ್ದ ವಿದ್ಯಾರ್ಥಿಗಳೂ ಗೇಟ್ ಹಾಕಿದ್ದರಿಂದ ನಿರಾಸೆಗೊಂಡರು.
ಬೆಳಗಾವಿ ನಗರದಿಂದ ಕರ್ನಾಟಕ ವಕೀಲರ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸುವರ್ಣ ವಿಧಾನಸೌಧವರೆಗೆ ಪ್ರತಿಭಟನೆ ಆರಂಭಿಸಿದರು.
ಸಚಿವ ಮಾಧುಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ, ಎಲ್ಲ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಗೆ ಡಿ.ಕೆ.ಶಿವಕುಮಾರ್ ಬೆಂಬಲ
ವಕೀಲರ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಪಾಲ್ಗೊಂಡು, ಅವರ ಹೋರಾಟ ಬೆಂಬಲಿಸಿದರು. ವಕೀಲರ ಸಂರಕ್ಷಣ ಕಾಯ್ದೆ ಜಾರಿಗೊಳಿಸಬೇಕು ಎಂಬ ನಿಮ್ಮ ಆಗ್ರಹ ನ್ಯಾಯಬದ್ಧವಾಗಿದೆ. ಬೆಳಗಾವಿ ಅ ಧಿವೇಶನದಲ್ಲಿ ನಿಮ್ಮ ರಕ್ಷಣೆ ಕುರಿತ ಕರಡು ಮಂಡಿಸಿ, ಅಂಗೀಕಾರ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನಾನೂ ಸರಕಾರಕ್ಕೆ ಈ ವಿಚಾರವಾಗಿ ಒತ್ತಾಯ ಮಾಡುತ್ತೇನೆ. ಖಾಸಗಿ ನಿರ್ಣಯ ಮಂಡಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Bailhongal: ಯುವಕನಿಗೆ ಚಾಕು ಇರಿದು ಬರ್ಬರವಾಗಿ ಕೊ*ಲೆ
Belgavi; ಕರಾಳ ದಿನಾಚರಣೆ ನಡೆಸಿದ ಎಂಇಎಸ್ ನವರ ವಿರುದ್ಧ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.