ಬೆತ್ತಲೆಗೊಳಿಸಿ, ಹಿಂಸಿಸಿ ಮರಕ್ಕೆ ನೇತು ಹಾಕಿ ಹತ್ಯೆ

ಗೌರಿಬಿದನೂರಿನ ತೋಟದಲ್ಲಿ ಕೊಲೆ ಚಾರ್ಮಾಡಿ ಘಾಟ್‌ನಲ್ಲಿ ಮೃತದೇಹ

Team Udayavani, Dec 28, 2022, 12:38 PM IST

tdy-7

ಬೆಂಗಳೂರು: ಒಂಭತ್ತು ತಿಂಗಳ ಹಿಂದಿನ ಯುವಕನ ಕೊಲೆ ಪ್ರಕರಣವನ್ನು ಅನಾಮಧೇಯ ಪತ್ರ ಮತ್ತು ವಿಡಿಯೋ ಸಾಕ್ಷ್ಯ ಆಧರಿಸಿ ಕಬ್ಬನ್‌ ಪಾರ್ಕ್‌ ಪೊಲೀಸರು ಭೇದಿ ಸಿದ್ದು, ಚಿಕ್ಕಬಳ್ಳಾಪುರ ಕರವೇ ಅಧ್ಯಕ್ಷ ಮತ್ತು ಆತನ ಪುತ್ರ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಚಿಕ್ಕಬಳ್ಳಾಪುರದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಚ್‌.ಜಿ.ವೆಂಕಟ ಚಲಪತಿ, ಆತನ ಪುತ್ರ ಎ.ವಿ.ಶರತ್‌ ಕುಮಾರ್‌, ಈತನ ಸಹಚರರಾದ ಆರ್‌.ಶ್ರೀಧರ್‌ ಮತ್ತು ಕೆ.ಧನುಷ್‌ ಮತ್ತು ಯಲಹಂಕದ ಎಂ.ಪಿ ಮಂಜು ನಾಥ್‌ ಬಂಧಿತರು. ಆರೋಪಿಗಳು ಮಾರ್ಚ್‌ನಲ್ಲಿ ಕೋಣನಕುಂಟೆ ನಿವಾಸಿ ಎಚ್‌.ಶರತ್‌ನನ್ನು ಅಪಹರಿಸಿ ಹತ್ಯೆಗೈದು, ಮೃತದೇಹವನ್ನು ಚಾರ್ಮಾಡಿ ಘಾಟ್‌ನಲ್ಲಿ ಎಸೆದಿದ್ದರು. ಇತರೆ ಆರೋಪಿಗಳು ಹಾಗೂ ಮೃತದೇಹ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್‌ ಗೌಡ ಹೇಳಿದರು.

ಏನಿದು ಪ್ರಕರಣ?: ಕೊಲೆಯಾದ ಶರತ್‌ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಕಾರುಗಳನ್ನು ಕೊಡಿಸುವುದಾಗಿ ಚಿಕ್ಕಬಳ್ಳಾಪುರ ಮತ್ತು ಯಲಹಂಕ ವಾಸಿಗಳಿಂದ ಲಕ್ಷಾಂತರ ರೂ. ಪಡೆದುಕೊಂಡಿದ್ದ. ಆದರೆ, ಕಾರುಗಳನ್ನು ಕೊಡಿಸದೆ ವಂಚಿಸಿದ್ದ. ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಶರತ್‌ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಮತ್ತೂಂದೆಡೆ ಹಣ ಕಳೆದುಕೊಂಡ ವ್ಯಕ್ತಿಗಳು ಹಣ ವಸೂಲಿಗಾಗಿ ಮಾರ್ಚ್‌ನಲ್ಲಿ ಕರವೇ ಅಧ್ಯಕ್ಷ ವೆಂಕಟಾಚಲಪತಿಗೆ ಕೋರಿದ್ದರು. ಅದನ್ನು ತನ್ನ ಪುತ್ರ ಶರತ್‌ಕುಮಾರ್‌ಗೆ ಸೂಚಿಸಿದ್ದ. ಶರತ್‌ ಕುಮಾರ್‌ ತನ್ನ ಸ್ನೇಹಿತರ ಮತ್ತು ಹಣಕೊಟ್ಟಿದ್ದ ಕೆಲವರ ಜತೆ ಸೇರಿ ಎಚ್‌.ಶರತ್‌ನನ್ನು ಬನಶಂಕರಿ ಬಳಿ ಕರೆಸಿಕೊಂಡು ಅಪಹರಿಸಿ, ಸಂಕೇತ್‌ ಎಂಬಾತನ ಗೌರಿಬಿದನೂರಿನ ವಾಟದಹೊಸಹಳ್ಳಿ ಯಲ್ಲಿರುವ ತೋಟದ ಮನೆಯಲ್ಲಿ ಆರೇಳು ದಿನ ಅಕ್ರಮ ಬಂಧನದಲ್ಲಿರಿಸಿ ಅರೆಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿದ್ದರು. ಅಲ್ಲದೆ, ಮಾವಿನ ಮರಕ್ಕೆ ಕೈ, ಕಾಲುಗಳನ್ನು ಕಟ್ಟಿ ನೇತುಹಾಕಿ ಹತ್ಯೆಗೈದಿ ದ್ದರು. ನಂತರ ಸಾಕ್ಷ್ಯ ನಾಶಗೊಳಿಸಲು ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್‌ನಲ್ಲಿ ಶವ ಎಸೆದಿದ್ದರು.

ನಿಗೂಢವಾಗಿ ನಾಪತ್ತೆ: 9 ತಿಂಗಳ ಹಿಂದೆ ಬನಶಂಕರಿಯಲ್ಲಿ ಶರತ್‌ನನ್ನು ಅಪಹರಿಸಿದ ಹಂತಕರು, ಕೆಲ ಹೊತ್ತಿನ ಬಳಿಕ ಆತನ ಪೋಷಕರಿಗೆ ಮೊಬೈಲ್‌ ಸಂದೇಶ ಮತ್ತು ಆತನಿಂದಲೇ ಕರೆ ಮಾಡಿಸಿದ್ದರು. “ನಾನು ದುಡಿಯಲು ಹೊರ ರಾಜ್ಯಕ್ಕೆ ಹೋಗುತ್ತಿದ್ದೇನೆ. ನನ್ನ ಹುಡುಕಬೇಡಿ’ ಎಂದು ಸಂದೇಶ ಹಾಗೂ ನೇರವಾಗಿ ಹೇಳಿಸಿದ್ದರು. ಆ ಮೊಬೈಲ್‌ ಅನ್ನು ಲಾರಿಯೊಂದರ ಮೇಲೆ ಎಸೆದಿದ್ದರು. ನಂತರ ಶರತ್‌ನನ್ನು ಗೌರಿಬಿದನೂರಿನ ತೋಟದ ಮನೆಗೆ ಕರೆದೊಯ್ದಿದ್ದರು. ಮತ್ತೂಂದೆಡೆ ಮೊಬೈಲ್‌ ಬಿದ್ದಿದ್ದ ಲಾರಿ ಮೈಸೂರು ಮಾರ್ಗವಾಗಿ ನೆರೆ ರಾಜ್ಯಕ್ಕೆ ಹೋಗಿ, ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ಪೋಷಕರು ದೂರು ನೀಡಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು. ‌

ಅನಾಮಧೇಯರಿಂದ ವಿಡಿಯೋ, ಪತ್ರ: ಈ ಮಧ್ಯೆ ಕೆಲ ತಿಂಗಳ ಹಿಂದೆ ಕೇಂದ್ರ ವಿಭಾಗದ ಕಬ್ಬನ್‌ ಪಾರ್ಕ್‌ ಎಸಿಪಿ ಡಿ.ಎಸ್‌.ರಾಜೇಂದ್ರ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಪತ್ರ ಬರೆದು ಶರತ್‌ ಅಪಹರಣದ ಬಗ್ಗೆ ಮಾಹಿತಿ ನೀಡಿದ್ದರು. ಜತೆಗೆ ಆತನ ಮೇಲಿನ ಹಲ್ಲೆ ಬಗ್ಗೆಯೂ ಪೆನ್‌ಡ್ರೈವ್‌ನಲ್ಲಿ ವಿಡಿಯೋಗಳನ್ನು ಹಾಕಿ ಕಳುಹಿಸಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ರಾಜೇಂದ್ರ, ಹೆಚ್ಚಿನ ತನಿಖೆ ನಡೆಸುವಂತೆ ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಚೈತನ್ಯಗೆ ಸೂಚಿಸಿದ್ದರು. ಬಳಿಕ ತಾಂತ್ರಿಕ ತನಿಖೆ ಹಾಗೂ ಇತರೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ, ವಿಡಿಯೋದಲ್ಲಿ ಶರತ್‌ಗೆ ಹಲ್ಲೆ ನಡೆಸುವ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದೆ. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲ ಆರೋಪಿಗಳ ಬಗ್ಗೆ ಬಾಯಿಬಿಟ್ಟಿದ್ದಾರೆ. ಬಳಿಕ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.