ಉಡುಪಿಯತ್ತ ಪ್ರವಾಸಿಗರ ದಂಡು; ವಾಸ್ತವ್ಯಕ್ಕೆ ಪರದಾಟ
ಕೆಎಂಸಿ ಮ್ಯೂಸಿಯಂ, ಪ್ಲ್ಯಾನಿಟೋರಿಯಂ ವೀಕ್ಷಣೆಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ.
Team Udayavani, Dec 28, 2022, 1:20 PM IST
ಉಡುಪಿ: ಕ್ರಿಸ್ಮಸ್ ರಜೆ, ವರ್ಷಾಂತ್ಯ ಸಂಭ್ರಮ ಹಿನ್ನೆಲೆಯಲ್ಲಿ ಉಡುಪಿಯತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಕೃಷ್ಣಮಠಕ್ಕೆ 20ರಿಂದ 25 ಸಾವಿರ ಮಂದಿವರೆಗೆ ಭಕ್ತರು ಭೇಟಿ ನೀಡುತ್ತಿದ್ದಾರೆ. ಜತೆಗೆ ಮಲ್ಪೆ, ಸೇಂಟ್ ಮೇರಿಸ್ ಐಲ್ಯಾಂಡ್, ಕಾಪು ಬೀಚ್‌ಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ. ಕೃಷ್ಣಮಠ, ಕಡಲ ಕಿನಾರೆಗಳು ಪ್ರವಾಸಿಗರಿಂದ ತುಂಬಿದೆ.
ಒಂದೆಡೆ ಪ್ರವಾಸಿಗರು, ಇನ್ನೊಂದೆಡೆ ಶೈಕ್ಷಣಿಕ ಪ್ರವಾಸದ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಉಡುಪಿಗೆ ಆಗಮಿಸುತ್ತಿದ್ದಾರೆ. ಕೃಷ್ಣ ದೇವರ ದರ್ಶನ, ಕಡಲತೀರ, ನೈಸರ್ಗಿಕ ತಾಣಗಳಿಗೆ ಭೇಟಿ ಜತೆಗೆ ಮಣಿಪಾಲ ಕೆಎಂಸಿ ಮ್ಯೂಸಿಯಂ, ಪ್ಲ್ಯಾನಿಟೋರಿಯಂ ವೀಕ್ಷಣೆಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ.
ಉಡುಪಿ-ಮಲ್ಪೆ ಮುಖ್ಯ ರಸ್ತೆಯಲ್ಲಿ ವಾಹನಗಳ ದಟ್ಟಣೆ ವಿಪರೀತ ಹೆಚ್ಚಾಗಿದ್ದು ವಾರಾಂತ್ಯದಲ್ಲಿ ಕರಾವಳಿ ಬೈಪಾಸ್, ಕಲ್ಸಂಕ, ಇಂದ್ರಾಳಿ, ಮಲ್ಪೆಯಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಳವಾಗಿದೆ.
ಕೃಷ್ಣಮಠಕ್ಕೆ ಸಾವಿರಾರು ಮಂದಿ ಭೇಟಿ
ಕೃಷ್ಣಮಠಕ್ಕೆ 20ರಿಂದ 25 ಸಾವಿರದವರೆಗೂ ಭಕ್ತರು ನಿತ್ಯ ಭೇಟಿ ನೀಡುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಆರಂಭವಾಗುವ ದೇವರ ದರ್ಶನಕ್ಕೆ ರಾತ್ರಿ 9 ಕಳೆದರೂ ಸಾಕಷ್ಟು ಉದ್ದದ ಸರತಿಯಲ್ಲಿ ಭಕ್ತರು ನಿಂತಿರುತ್ತಾರೆ. ನಿತ್ಯಕ್ಕೆ 8ರಿಂದ 10 ಸಾವಿರ ಮಂದಿಗೆ ಊಟದ ವ್ಯವಸ್ಥೆ ಆಗುತ್ತಿದೆ. ಎಂಟು ಮಠದ ಎಲ್ಲ ಛತ್ರಗಳು ಜ.2ರವರೆಗೆ ಭರ್ತಿಯಾಗಿವೆ. ಕೊಠಡಿ ಸಿಗದ ಶಾಲಾ ಮಕ್ಕಳಿಗೆ ರಾಜಾಂಗಣದಲ್ಲಿ ವ್ಯವಸ್ಥೆ ಮಾಡಿಕೊಡುತ್ತಿದ್ದೇವೆ ಎಂದು ಕೃಷ್ಣ ಮಠದ ಮೂಲಗಳು ತಿಳಿಸಿವೆ.
ವಾಸ್ತವ್ಯಕ್ಕೆ ಪರದಾಟ
ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಲಾಡ್ಜ್, ಹೋಂ ಸ್ಟೇ, ಛತ್ರ ಗಳು, ರೆಸಾರ್ಟ್, ಸರ್ವಿಸ್ ಅಪಾರ್ಟ್‌ಮೆಂಟ್ ಭರ್ತಿಯಾಗಿವೆ. ಶೇ.80ಕ್ಕೂ ಹೆಚ್ಚಿನ ಕೊಠಡಿ ಮುಂಚಿತವಾಗಿ ಬುಕ್ ಆಗಿದ್ದರಿಂದ ಕೊಠಡಿ ಕಾದಿರಿಸದೆ ನೇರವಾಗಿ ಬಂದ ಪ್ರವಾಸಿಗರು ವಾಸ್ತವ್ಯಕ್ಕೆ ಪರದಾಡುವಂತಾಗಿದೆ. ಹೆಚ್ಚು ಹಣ ಕೊಟ್ಟರೂ ಕೊಠಡಿ ಸಿಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.