![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 29, 2022, 7:20 AM IST
ತಿರುಮಲ:ಮುಂದಿನ ತಿಂಗಳ 2ರಿಂದ 11ರ ವರೆಗೆ ತಿರುಮಲದಲ್ಲಿ ಇರುವ ಶ್ರೀ ವೆಂಕಟೇಶ್ವರ ದೇಗುಲದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಪ್ರತಿ ದಿನ 45 ಸಾವಿರ ಸ್ಲಾಟ್‌ಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನಮ್ಸ್ ಅಧ್ಯಕ್ಷ ವೈ.ವಿ.ಸುಬ್ಟಾ ರೆಡ್ಡಿ ಹೇಳಿದ್ದಾರೆ. ಇದಲ್ಲದೆ ಉಚಿತವಾಗಿ ಸರ್ವ ದರ್ಶನ ಟಿಕೆಟ್‌ಗಳನ್ನು ಜ.1ರರಿಂದ ತಿರುಪತಿಯಲ್ಲಿ ಇರುವ 9 ಕೇಂದ್ರಗಳಲ್ಲಿ ವಿತರಿಸಲಾಗುತ್ತದೆ.
ಪವಿತ್ರ ಕ್ಷೇತ್ರದಲ್ಲಿ ಇರುವ ಭೂದೇವಿ ಕಾಂಪ್ಲೆಕ್ಸ್, ಇಂದಿರಾ ಮೈದಾನ, ರಾಮಚಂದ್ರ ಪುಷ್ಕರಿಣಿ ಸೇರಿದಂತೆ ಹಲವು ಕೇಂದ್ರಗಳಲ್ಲಿ ಉಚಿತ ಟಿಕೆಟ್ ನೀಡಲು ವ್ಯವಸ್ಥೆ ಮಾಡಲಾಗಿದೆ.
ತೀರ್ಥಯಾತ್ರಿಗಳಿಗೆ ಸುಗಮವಾಗಿ ಆಹಾರ, ಪಾನೀಯ ವಿತರಿಸುವ ನಿಟ್ಟಿನಲ್ಲಿ ಟಿಟಿಡಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು ಸುಬ್ಬರಾವ್ ಹೇಳಿದ್ದಾರೆ.
ಮುಂಗಡ ಬುಕಿಂಗ್ ರದ್ದು:
ಹೊಸ ವರ್ಷ ದಿನ ಹಾಗೂ ವೈಕುಂಠ ಏಕಾದಶಿ ಪ್ರಯುಕ್ತ ಡಿ.29ರಿಂದ ಜ.3ರ ವರೆಗೆ ವಸತಿ ಗೃಹಗಳಲ್ಲಿ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸುವ ವ್ಯವಸ್ಥೆ ರದ್ದು ಮಾಡಲಾಗಿದೆ ಎಂದು ಟಿಟಿಡಿ ಆಡಳಿತ ಮಂಡಳಿ ಹೇಳಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.