2022ರ ನೆನಪುಗಳ ಮೆರವಣಿಗೆ; ದೇಶದ ದಿಕ್ಕು ಬದಲಿಸಿದ ಸುಪ್ರೀಂ ಕೋರ್ಟ್‌ನ ಐದು ತೀರ್ಪುಗಳು
Team Udayavani, Dec 29, 2022, 6:40 AM IST
2022 ವರ್ಷ ಹಲವು ರೀತಿಯ ಅನುಭವ ಕೊಟ್ಟಿದೆ. ಸುಪ್ರೀಂ ಕೋರ್ಟ್ 5 ಮಹತ್ವದ ತೀರ್ಪುಗಳನ್ನು ನೀಡಿದೆ. ಜತೆಗೆ ಸಿನೆಮಾ ಕ್ಷೇತ್ರದಲ್ಲಿ ಕನ್ನಡದ 2 ಸಿನೆಮಾಗಳ ಅದ್ದೂರಿ ದಿಗ್ವಿಜಯ. ಇನ್ನು ಈ ವರ್ಷ 5 ಹಾಡುಗಳು ಹೆಚ್ಚು ಸದ್ದು ಮಾಡಿದ್ದವು.
ಈ ವರ್ಷ ಗುನುಗಿದ ಟಾಪ್ 5ಹಾಡುಗಳು
1.ಸಿಂಗಾರ ಸಿರಿಯೇ…
ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಕಾಂತಾರ ಚಿತ್ರದಲ್ಲಿ ಗಾಯಕ ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿಬಂದ ಸಿಂಗಾರ ಸಿರಿಯೇ ಹಾಡು ಗಮನ ಸೆಳೆದಿತ್ತು.
2.ನಾಟು- ನಾಟು..
ಆರ್‌ಆರ್‌ಆರ್ ಚಿತ್ರದ ನಾಯಕರಾದ ಜೂನಿಯರ್ ಎನ್‌ಟಿಆರ್-ರಾಮ್‌ಚರಣ್ ಇಬ್ಬರು ಪೈಪೋಟಿಗೆ ಬಿದ್ದವರಂತೆ ಡ್ಯಾನ್ಸ್ ಮಾಡಿದ್ದ ನಾ ಬಾಟಸೂಡು ನಾಟು-ನಾಟು ವಿಶ್ವಾದ್ಯಂತ ಸದ್ದು ಮಾಡಿತ್ತು. ಇದು ಒರಿಜಿನಲ್ ಲಿರಿಕ್ಸ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯ ನಾಮನಿರ್ದೇಶನದ ಅಂತಿಮ ಹಂತವನ್ನು ತಲುಪಿದೆ.
3.ರಾ ರಾ..ರಕ್ಕಮ್ಮ
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡೀಸ್ ಮೈ ಬಳುಕಿಸಿದ್ದ “ರಾರಾ ರಕ್ಕಮ್ಮ ಯಕ್ಕಾ ಸಕ್ಕಾ ..’ ಹಾಡು ದೇಶಾದ್ಯಂತ ಭಾರೀ ಧೂಳೆಬ್ಬಿಸಿತ್ತು.
4. ಹು ಅಂಟಾವಾ
ಪುಷ್ಪ ಸಿನೆಮಾದ “ಹು ಅಂಟಾವಾ…ಮಾಮಾ ಹು ಹು ಅಂಟಾವಾ…’ ಹಾಡಿನಲ್ಲಿ ಅಲ್ಲು ಅರ್ಜುನ ಜತೆ ನಟಿ ಸಮಂತಾ ಮಿಂಚಿದ್ದು, ಸದ್ದು ಮಾಡಿತ್ತು.
5.ಹಲಾಮಿತಿ ಹಬೀಬೊ
ತಮಿಳು ಸ್ಟಾರ್ ನಟ ವಿಜಯ್ ಅಭಿನಯದ ಬೀಸ್ಟ್ ಚಿತ್ರದಲ್ಲಿ ವಿಜಯ್-ಪೂಜಾ ಹೆಗ್ಡೆ ಅವರ ಹಲಾಮಿತಿ ಹಬೀಬೋ ಹಾಡು ಗಮನ ಸೆಳೆದಿತ್ತು.
ಟಾಪ್ 5 ಸುಪ್ರೀಂ ತೀರ್ಪುಗಳು
1. ಹಿಜಾಬ್ ವಿವಾದ: ಭಿನ್ನ ತೀರ್ಪು
ರಾಜ್ಯದಲ್ಲಿ ಎದ್ದಿದ್ದ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಅ.13ರಂದು ಸುಪ್ರೀಂ ಕೋರ್ಟ್ ತೀರ್ಪು ಹೊರಬಿತ್ತು. ದ್ವಿಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳಿಬ್ಬರೂ ಭಿನ್ನ ತೀರ್ಪು ನೀಡಿದ ಕಾರಣ, ವಿಸ್ತೃತ ಪೀಠ ರಚಿಸಲು ಸಿಜೆಐಗೆ ಪ್ರಕರಣ ವರ್ಗಾವಣೆ ಯಾಯಿತು. ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿದ್ದ ರಾಜ್ಯ ಸರಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು.
2. ವೇಶ್ಯಾವಾಟಿಕೆ ಕಾನೂನುಬದ್ಧ
ಲೈಂಗಿಕ ಕಾರ್ಯಕರ್ತೆಯರು ನೆಮ್ಮದಿಯ ನಿಟ್ಟುಸಿರು ಬಿಡುವಂಥ ತೀರ್ಪನ್ನು ಮೇಯಲ್ಲಿ ಸುಪ್ರೀಂ ಕೋರ್ಟ್ ನೀಡಿತು. ವೇಶ್ಯಾವಾಟಿಕೆ ಕಾನೂನುಬದ್ಧ ಎಂದಿತು. ಒಪ್ಪಿಗೆ ಮೇರೆಗೆ ವೇಶ್ಯಾವೃತ್ತಿಯಲ್ಲಿ ತೊಡಗಿರುವವರಿಗೆ ಪೊಲೀಸರು ಕಿರುಕುಳ ನೀಡುವಂತಿಲ್ಲ. ದಾಳಿ ನಡೆಸಿದಾಗ ಅವರನ್ನು ಬಂಧಿಸುವುದು, ದಂಡ ವಿಧಿಸುವಂತಿಲ್ಲ ಎಂದಿತು.
3.ದೇಶದ್ರೋಹ ಕಾನೂನಿಗೆ ತಡೆ
ವಿವಾದಿತ ದೇಶದ್ರೋಹ ಕಾನೂನಿಗೆ ಸುಪ್ರೀಂ ಮೇ 11ರಂದು ತಡೆಯಾಜ್ಞೆ ತಂದಿತು. ಕೇಂದ್ರ ಪರಾಮರ್ಶೆ ಮಾಡುವವರೆಗೂ 152 ವರ್ಷ ಹಳೆಯ ಈ ಕಾನೂನನ್ನು ಯಾರ ಮೇಲೆಯೂ ಪ್ರಯೋಗಿಸುವಂತಿಲ್ಲ ಎಂದು ತೀರ್ಪು ನೀಡಿತು. ದೇಶದ್ರೋಹ ಆರೋಪ ಹೊರಿಸಿ ಹೊಸ ಕೇಸ್ ದಾಖಲಿಸುವಂತಿಲ್ಲ ಎಂದ ಕೋರ್ಟ್, ಈ ಕಾನೂನಿನಡಿ ಬಂಧಿತರಾಗಿರುವವರಿಗೆ ಜಾಮೀನು ಅರ್ಜಿ ಸಲ್ಲಿಸಲೂ ಅವಕಾಶ ಕಲ್ಪಿಸಿತು.
4. ಗರ್ಭಪಾತದ ಅಧಿಕಾರ
ವಿವಾಹಿತೆಯಾಗಿರಲೀ, ಅವಿವಾಹಿತೆಯಾಗಿರಲೀ ಗರ್ಭ ಧರಿಸಿ 20ರಿಂದ 24 ವಾರಗಳಾಗಿದ್ದರೆ ಅಂಥವರಿಗೆ ಗರ್ಭಪಾತ ಮಾಡಿಸಿಕೊಳ್ಳುವ ಅಧಿಕಾರ ಇದೆ. ಇದು ಸುಪ್ರೀಂ ಕೋರ್ಟ್ ಸೆಪ್ಟಂಬರ್‌ನಲ್ಲಿ ನೀಡಿದ ಐತಿಹಾಸಿಕ ತೀರ್ಪು. 20ರಿಂದ 24 ವಾರಗಳೊಳಗಿನ ಭ್ರೂಣ ತೆಗೆದುಹಾಕಲು ಅವಿವಾಹಿತ ಮಹಿಳೆಗೆ ಅನುಮತಿ ನೀಡದೇ ಇರುವುದು ಆಕೆಯ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದೂ ಹೇಳಿತು. ಗರ್ಭಪಾತ ಕಾಯ್ದೆ ಪ್ರಕಾರ, ವೈವಾಹಿಕ ಅತ್ಯಾಚಾರವೂ ಅತ್ಯಾಚಾರದ ವ್ಯಾಪ್ತಿಗೆ ಬರುತ್ತದೆ ಎಂದೂ ತೀರ್ಪಿತ್ತಿತು.
5.ಎಸಿಬಿ ರದ್ದು ಮಾಡಿದ ಹೈಕೋರ್ಟ್
ರಾಜ್ಯ ಸರಕಾರ 2016ರಲ್ಲಿ ಜಾರಿಗೆ ತಂದಿದ್ದ ಭ್ರಷ್ಟಾಚಾರ ನಿಗ್ರಹ ಬ್ಯೂರೋವನ್ನು ರದ್ದು ಮಾಡಿ ಆ.11ರಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಎಸಿಬಿ ಬಳಿಯಿದ್ದ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸಲು ಆದೇಶಿಸಿತ್ತು.ಅಲ್ಲದೆ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಲೋಕಾಯುಕ್ತವನ್ನು ಬಲಪಡಿಸುವಂತೆಯೂ ಸೂಚಿಸಿತು.
ಟಾಪ್ 5 ಸಿನೆಮಾಗಳು
1. ಕೆಜಿಎಫ್-2
ಪ್ರಶಾಂತ್ ನೀಲ್ ನಿರ್ದೇಶನದ ಹೊಂಬಾಳೆ ಫಿಲ್ಮ್ ಬ್ಯಾನರ್‌ನ ಕೆಜಿಎಫ್-2 ಫೆ.14ರಂದು ಬಿಡುಗಡೆ. 1, 200ಕೋಟಿ ರೂ. ಅಧಿಕ ಮೊತ್ತ ಬಾಚಿಕೊಂಡಿತು.
2.ಕಾಂತಾರ
ಸೆ. 30ರಂದು ತೆರೆಕಂಡ “ಕಾಂತಾರ’ ಹೊಸ ಸಂಚಲನ ಮೂಡಿಸಿದ ಚಿತ್ರ. 16 ಕೋಟಿ ರೂ. ಹೂಡಿಕೆ ಯಿಂದ ಬರೋಬ್ಬರಿ 400 ಕೋಟಿ ಗಳಿಕೆ.
3.ಆರ್‌ಆರ್‌ಆರ್
ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ 2022ರ ಫೆ.3ರಂದು ತೆರೆಕಂಡಿತು. ಸ್ವಾತಂತ್ರ್ಯ ಹೋರಾಟದ ಕಥೆಗೆ ಕಾಲ್ಪನಿಕ ಸ್ಪರ್ಶ. ಸುಮಾರು 550 ಕೋಟಿ ರೂ.ಬಜೆಟ್‌ನ ಸಿನೆಮಾ 1,200 ಕೋಟಿ ರೂ.ಗಳಿಗಿಂತಲೂ ಹೆಚ್ಚು ಮೊತ್ತ ಬಾಚಿಕೊಂಡಿತು.
4.ಅವತಾರ್-2
ಜೇಮ್ಸ್ ಕ್ಯಾಮರನ್ ನಿರ್ದೇಶನದ ಅವತಾರ್-2 ಡಿ. 16ರಂದು ತೆರೆಕಂಡಿತು. ಜನರು ನೀರಿನೊಂದಿಗೆ ಹೊಂದಿರುವ ಸಂಬಂಧ ಕಥಾವಸ್ತು. ಸದ್ಯ ಈ ಚಿತ್ರ 7 ಸಾವಿರ ಕೋಟಿ ರೂ ಗಳಿ ಸಿದೆ. ಅದ್ದೂರಿ ಗ್ರಾಫಿಕ್ಸ್ ಅದರ ಹೆಗ್ಗಳಿಕೆಯಾಗಿದೆ.
5.ದಿ ಕಾಶ್ಮೀರ್ ಫೈಲ್ಸ್
ಮಾ.11 ರಂದು ತೆರೆಕಂಡು ಸಂಚಲನ ಮೂಡಿಸಿದ ಸಿನೆಮಾ. 1990ರಲ್ಲಿ ಕಾಶ್ಮೀರ ಪಂಡಿ ತರ ವಿರುದ್ಧದ ದೌಜ್ಯìನದ ಬಗ್ಗೆ ಚಿತ್ರದಲ್ಲಿ ಹೆಚ್ಚಿನ ಬೆಳಕು ಚೆಲ್ಲಲಾಗಿದೆ.
– ಸಂಕಲನ: ಸದಾಶಿವ ಕೆ. -ಅನಂತನಾಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.