ಕುಂದಾಪುರ ವೃತ್ತಕ್ಕೆ ಅಂತೂ ಬಂತು ಶಾಸ್ತ್ರಿ ಪ್ರತಿಮೆ

15 ಲಕ್ಷ ರೂ. ವೆಚ್ಚದಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಪ್ರತಿಮೆ ನಿರ್ಮಾಣ

Team Udayavani, Dec 29, 2022, 11:40 AM IST

ಕುಂದಾಪುರ ವೃತ್ತಕ್ಕೆ ಅಂತೂ ಬಂತು ಶಾಸ್ತ್ರಿ ಪ್ರತಿಮೆ

ಕುಂದಾಪುರ: ನಗರದ ಪ್ರವೇಶದ್ವಾರ ಶಾಸ್ತ್ರಿ ವೃತ್ತದಲ್ಲಿ ವಿನೂತನ ಮಾದರಿಯಲ್ಲಿ ರಚನೆಯಾಗುತ್ತಿರುವ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಬುಧವಾರ ಲಾಲ್‌ ಬಹದ್ದೂರ್‌ ಶಾಸ್ತ್ರಿಗಳ ಕಂಚಿನ ಪ್ರತಿಮೆ ಕುಂದಾಪುರಕ್ಕೆ ಆಗಮಿಸಿದ್ದು ವೃತ್ತದಲ್ಲಿ ನಿಲ್ಲಿಸಲಾಗಿದೆ.

ಪ್ರತಿಮೆ
ಸೇನಾಪುರ ಗ್ರಾಮದ ಶಿಲ್ಪಿ ಶ್ರೀತಿನ್‌ ಶೆಟ್ಟಿಗಾರ್‌ ಬಂಟ್ವಾಡಿ ಅವರು ಮೈಸೂರಿನಲ್ಲಿ ನಿಂತ ಭಂಗಿಯಲ್ಲಿ ಇರುವ ಶಾಸ್ತ್ರಿಗಳ ಈ ಶಿಲ್ಪವನ್ನು ನಿರ್ಮಿಸಿದ್ದು ಸುಮಾರು 15 ಲಕ್ಷ ರೂ. ವೆಚ್ಚವಾಗಿದೆ. ಪ್ರತಿಮೆಯ ವೆಚ್ಚವನ್ನು ಈ ಹಿಂದೆ ಪ್ರತಿಮೆ ನೀಡಿದ್ದ ಇಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟರ ಹೆಸರಿನಲ್ಲಿ ಎಸ್‌ ಎಸ್‌ಎನ್‌ ಕನ್‌ಸ್ಟ್ರಕ್ಷನ್‌ ಕಂಪೆನಿ ನೀಡುವ ಭರವಸೆ ನೀಡಿದೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಯತ್ನದಿಂದ ಇದು ಸಾಕಾರವಾಗಿದೆ. ಪೂರ್ಣ ಪ್ರಮಾಣದ ಪ್ರತಿಮೆ ಇಡುವುದೋ, ಈ ಹಿಂದೆ ಇದ್ದಂತೆ ತಲೆಯ ಭಾಗ ಮಾತ್ರ ಇಡುವುದೋ ಎಂದು ಚರ್ಚೆಗೀಡಾಗಿತ್ತು. ಕೊನೆಗೆ ಶಾಸಕರ ಮಧ್ಯಸ್ಥಿಕೆಯಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

ಬಾಕಿ
ಇನ್ನು ವೃತ್ತದ ಸುತ್ತ ತಡೆಬೇಲಿ, ಉದ್ಯಾನವನ ನಿರ್ಮಾಣ ಆಗಬೇಕಿದೆ. ಹೈಮಾಸ್ಟ್‌ ದೀಪದ ಸ್ಥಳಾಂತರ ನಡೆದಿದೆ. ದೀಪ ಹಾಗೂ ಕಂಬ ಕೂರಿಸುವ ಕೆಲಸ ಇನ್ನಷ್ಟೇ ಆಗಬೇಕಿದೆ. ಪಂಚಾಂಗ ನಿರ್ಮಿಸಲಾಗಿದೆ.

ಕಾಮಗಾರಿಗೂ ಮುನ್ನ ಇದನ್ನು ಮೈಸೂರು ಜಯಚಾಮರಾಜೇಂದ್ರ ವೃತ್ತದ ಮಾದರಿಯಲ್ಲಿ ವಿನ್ಯಾಸಗೊಳಿಸುವ ಇರಾದೆಯಿತ್ತು. ಅನಂತರ ವಿನ್ಯಾಸ ಬದಲಾಯಿತು. ಸಿಮೆಂಟ್‌ ಬದಲು ಕಲ್ಲು ಬಳಸಲಾಯಿತು. ನಿಗದಿ ಪಡಿಸಿದ ಮೊತ್ತವೂ ಹೆಚ್ಚಾಯಿತು. ಅದು ಸಾಮಾಜಿಕ ಜಾಲತಾಣದಲ್ಲಿ ಬಂದು ಪುರಸಭೆ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಯಿತು. ಒಂದಷ್ಟು ವಿವಾದ, ಟೀಕೆ ಎಲ್ಲ ಆಯಿತು. ಒಂದೇ ಬಜೆಟ್‌ ತೋರಿಸುವ ಬದಲು ತುಂಡು ತುಂಡು ಕಾಮಗಾರಿಗೆ ಮೊತ್ತ ತೋರಿಸಲಾಯಿತು.

ಸರ್ಕಲ್‌ ಅವಶ್ಯ
ಕುಂದಾಪುರ ಶಾಸ್ತ್ರಿ ಸರ್ಕಲ್‌, ಶಾಸ್ತ್ರಿ ಪಾರ್ಕ್‌ ಹೆಸರು ವಾಸಿ. ಕುಂದಾಪುರಕ್ಕೆ ಎಲ್ಲಿಂದಲೇ ಬಂದರೂ ಬಸ್‌ ನಿಂದಿಳಿಯಲು ಸೂಚನೆ ಕೊಡುವುದು ಇದೇ ವೃತ್ತವನ್ನು. ಯಾವುದೇ ಸ್ಥಳದ ಗುರುತು ಪರಿಚಯ ಹೇಳಬೇಕಾದರೂ ಶಾಸ್ತ್ರಿ ಸರ್ಕಲನ್ನು ಹೆಸರಿಸುತ್ತಾರೆ. ಇಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟರ ಹೆಸರಿನಲ್ಲಿ ಎಸ್‌ಎಸ್‌ಎನ್‌ ಕನ್‌ಸ್ಟ್ರಕ್ಷನ್‌ ಕಂಪೆನಿ ನೀಡಿದ ಲಾಲ್‌ಬಹದ್ದೂರ್‌ ಶಾಸ್ತ್ರಿಗಳ ಸುಂದರ ಪ್ರತಿಮೆಯಿತ್ತು. ಅದೆಷ್ಟೋ ವರ್ಷಗಳಿಂದ ಹಸುರು ಹುಲ್ಲಿನ ನಡುವೆ
ಶಿಲೆಯ ಮೇಲೆ ಕೂರಿಸಲ್ಪಟ್ಟ ಶಾಸ್ತ್ರಿ ವಿಗ್ರಹವುಳ್ಳ ಸರ್ಕಲ್‌ ಈಚಿನ ದಿನಗಳಲ್ಲಿ ಬೀಡಾಡಿಗಳ ತಾಣವಾಗಿತ್ತು. ಈಗ ಇವರೆಲ್ಲ ಫ್ಲೈಓವರ್‌ ಅಡಿಗೆ ಸ್ಥಳಾಂತರಗೊಂಡಿದ್ದಾರೆ!

ಹೊಸ ಸರ್ಕಲ್‌
ಶಾಸ್ತ್ರಿಗಳ ಪ್ರತಿಮೆಗೂ ಸೂಕ್ತ ಭದ್ರತೆ ಇರಲಿಲ್ಲ. ಶಾಸ್ತ್ರಿ ಸರ್ಕಲ್‌ನ ಸೌಂದರ್ಯ ಹೆಚ್ಚಿಸಬೇಕೆಂದು ಪುರಸಭೆ ಆಡಳಿತ ಇಲ್ಲಿ ಕಾಮಗಾರಿ ನಡೆಸಿದೆ. ವೃತ್ತ ರಚನೆಯಾಗಿದ್ದು ಮೂರ್ತಿಯೂ ಬಂದಿದೆ. ಇನ್ನು ತಡೆಬೇಲಿ, ಉದ್ಯಾನವನ ಆದಲ್ಲಿಗೆ ಶಾಸ್ತ್ರಿ ಸರ್ಕಲ್‌ಗೆ ಹೊಸ ಕಳೆ ಬರಲಿದೆ. ಸುಂದರ ಕುಂದಾಪುರ ಕಲ್ಪನೆಗೆ ಪೂರಕ ಮನಃಸ್ಥಿತಿ ನಿರ್ಮಾಣವಾಗುತ್ತದೆ ಎಂದು ಪುರಸಭೆ ಆಡಳಿತ ಭಾವಿಸಿದೆ. ಈ ನಿಟ್ಟಿನಲ್ಲಿ ಪುರಸಭೆ ವೃತ್ತ ನಿರ್ಮಾಣ ಮಾಡಿದೆ.

ಟಾಪ್ ನ್ಯೂಸ್

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura: ರಿಕ್ಷಾದಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

Kundapura: ರಿಕ್ಷಾದಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.