![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Dec 29, 2022, 3:59 PM IST
ನವದೆಹಲಿ: ಎಸ್.ಎಸ್.ರಾಜಮೌಳಿ ಅವರ “ಆರ್ ಆರ್ ಆರ್” ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಏತನ್ಮಧ್ಯೆ ಆರ್ ಆರ್ ಆರ್ ಸಿನಿಮಾ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿರುವ ಸಂದರ್ಭದಲ್ಲಿ ಗೇಮ್ ಆಫ್ ಥ್ರೋನ್ಸ್ ನಟಿ ನತಾಲೈ ಎಮಾನ್ಯುಯೆಲ್ ಅಪಸ್ವರ ಎತ್ತಿದ್ದಾರೆ.
ಇದನ್ನೂ ಓದಿ:ಕಾಮರೂಪಿ ಖ್ಯಾತಿಯ ಹಿರಿಯ ಪತ್ರಕರ್ತ ಎಂ.ಎಸ್. ಪ್ರಭಾಕರ್ ವಿಧಿವಶ
“ಆರ್ ಆರ್ ಆರ್” ಅನಾರೋಗ್ಯಕರ ಸಿನಿಮಾ ಎಂದು ನತಾಲೈ ಟ್ವೀಟ್ ಮಾಡಿದ್ದು, ಬಳಿಕ ಕೂಡಲೇ ನಾನು ಆ ಶಬ್ದ(Sick)ವನ್ನು ಹೊಗಳಿಕೆಯ ಅರ್ಥದಲ್ಲಿ ಬಳಸಿರುವುದಾಗಿ ಸಮಜಾಯಿಷಿ ನೀಡಿರುವುದಾಗಿ ವರದಿ ತಿಳಿಸಿದೆ.
RRR ಸಿನಿಮಾದಲ್ಲಿನ ಅಲಿಯಾ ಭಟ್ ಸೀತಾ ಪಾತ್ರವನ್ನು ನತಾಲೈ ಶ್ಲಾಘಿಸಿದ್ದು, ಚಿತ್ರ ತಂಡದ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. “ಆರ್ ಆರ್ ಆರ್ ಅನಾರೋಗ್ಯಕರ ಸಿನಿಮಾವಾಗಿದೆ. ಈ ಬಗ್ಗೆ ನನಗೆ ಯಾರೂ ಬೇರೆ ರೀತಿ ಹೇಳಬಹುದಿತ್ತು ಎನ್ನುವಂತಿಲ್ಲ. ನಾನು ಸಿನಿಮಾದ ಬಗ್ಗೆ ನನ್ನ ಅನಿಸಿಕೆ ಹಂಚಿಕೊಂಡಿದ್ದೇನೆ. ಜ್ಯೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ನಡುವಿನ ಡ್ಯಾನ್ಸ್ ನಿಜಕ್ಕೂ ಅದ್ಭುತ ಎಂದು ನಟಿ ಹೊಗಳಿದ್ದಾರೆ.
ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಭಾರತದ ಕ್ರಾಂತಿಕಾರಿ ಕಾಲಘಟ್ಟದ ಕಥಾಹಂದರವನ್ನು ಒಳಗೊಂಡಿತ್ತು. ಅಲ್ಲುರಿ ಸೀತಾರಾಮ ರಾಜು ಪಾತ್ರವನ್ನು ರಾಮ್ ಚರಣ್ ನಿರ್ವಹಿಸಿದ್ದು, ಜ್ಯೂ.ಎನ್ ಟಿಆರ್ ಕೋಮರ್ರಮ್ ಭೀಮ್ ಪಾತ್ರದಲ್ಲಿ ಮಿಂಚಿದ್ದರು. ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಸಂದರ್ಭದಲ್ಲಿ 1920ರ ಕಾಲಘಟ್ಟಟದ ಕಥೆಯನ್ನೊಳಗೊಂಡಿದೆ. ಬಾಲಿವುಡ್ ನ ಅಲಿಯಾ ಭಟ್ ಮತ್ತು ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ ಆರ್ ಆರ್ ಸಿನಿಮಾ ಒಟ್ಟು 1,200 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.