ಪಣಜಿ: ಪ್ರಯಾಣಿಕರನ್ನು ದರೋಡೆ ಮಾಡುವ ಟ್ಯಾಕ್ಸಿ ಚಾಲಕರ ವಿರುದ್ಧ ಕ್ರಮಕ್ಕೆ ಒತ್ತಾಯ
Team Udayavani, Dec 29, 2022, 5:40 PM IST
ಪಣಜಿ: ಕಳೆದ ಕೆಲ ದಿನಗಳ ಹಿಂದಷ್ಟೇ ಉಧ್ಘಾಟನೆಗೊಂಡಿರು ಗೋವಾದ ಮೊಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಹಾಗಾಗಿ ಪ್ರಯಾಣಿಕರಿಗೆ ಟ್ಯಾಕ್ಸಿ ವ್ಯವಸ್ಥೆ ಅಗತ್ಯ. ಆದರೆ, ಟ್ಯಾಕ್ಸಿ ಚಾಲಕರು ಪ್ರಯಾಣಿಕರಿಗೆ ದುಬಾರಿ ಶುಲ್ಕ ವಿಧಿಸುತ್ತಾರೆ. ಇದರಿಂದ ಗೋವಾದ ಹೆಸರು ಕೆಡುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಕಿಲೋಮೀಟರ್ ಗೆ ಪ್ರಯಾಣ ದರವನ್ನು ನಿಗದಿಪಡಿಸಬೇಕು ಪ್ರಯಾಣಿಕರನ್ನು ದರೋಡೆ ಮಾಡುವ ಟ್ಯಾಕ್ಸಿ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಂದು ದಕ್ಷಿಣ ಗೋವಾ ಸಂಸದ ಫ್ರಾನ್ಸಿಸ್ ಸಾರ್ಡಿನ್ ಒತ್ತಾಯಿಸಿದ್ದಾರೆ.
ದಕ್ಷಿಣ ಗೋವಾದ ಮಡಗಾಂ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗೋವಾ ರಾಜ್ಯವು ದೇಶದ ಪ್ರಮುಖ ಪ್ರವಾಸಿ ಕೇಂದ್ರವಾಗಿರುವುದರಿಂದ ಲಕ್ಷಾಂತರ ದೇಶಿ ಮತ್ತು ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಸ್ತುತ, ಕ್ರಿಸ್‍ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ಪ್ರವಾಸಿಗರು ಜಮಾಯಿಸಿದ್ದಾರೆ. ಹಾಗಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಪ್ರಮುಖ ನಗರಗಳು, ಸೇತುವೆಗಳು ಮತ್ತು ಕಡಲತೀರಗಳು ಟ್ರಾಫಿಕ್ ಜಾಮ್ ಅನ್ನು ಅನುಭವಿಸುತ್ತಿವೆ. ಈ ಟ್ರಾಫಿಕ್ ಜಾಮ್‍ಗೆ ಪರಿಹಾರವೆಂದರೆ ಗೋವಾದಲ್ಲಿ ಹೆಚ್ಚಿನ ಟ್ರಾಫಿಕ್ ಪೊಲೀಸರ ಅಗತ್ಯವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಕಾಣುತ್ತಿಲ್ಲ. ಹೊಸ ವರ್ಷದಲ್ಲಿ ಹೆಲ್ಮೆಟ್ , ಸೀಟ್ ಬೆಲ್ಟ್ , ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕಡ್ಡಾಯವಾಗಿ ಕ್ರಮ ಕೈಗೊಳ್ಳಬೇಕು. ಸುಗಮ ಸಂಚಾರಕ್ಕೆ ಸಂಚಾರ ಪೊಲೀಸರು ಗಮನಹರಿಸಬೇಕು ಎಂದು ಸಂಸದ ಫ್ರಾನ್ಸಿಸ್ ಸರ್ದಿನ್ ಆಗ್ರಹಿಸಿದರು.
ಗೋವಾದಲ್ಲಿ ಕೃಷಿ ಕ್ಷೇತ್ರವು ಆರ್ಥಿಕವಾಗಿ ಸದೃಢವಾಗಿರಬೇಕು. ಇತರ ರಾಜ್ಯಗಳಿಗೆ ಹೋಲಿಸಿದರೆ ಗೋವಾದಲ್ಲಿ ಕಾರ್ಮಿಕರ ಗೋಚರತೆ ಹೆಚ್ಚಾಗಿದೆ. ಆದ್ದರಿಂದ ಕೃಷಿ ಇಲಾಖೆ ರೈತರಿಗೆ ಗರಿಷ್ಠ ಅನುದಾನ ನೀಡಬೇಕು. ಮದುವೆ ಅಥವಾ ಜಾತ್ರೆ, ಹಬ್ಬ ಇತ್ಯಾದಿ ಸ್ಥಳಗಳಲ್ಲಿ ಶಬ್ದದ ಮಿತಿಯನ್ನು ಸಡಿಲಿಸುವುದು ಅವಶ್ಯಕ. ಅದೇ ಸಮಯದಲ್ಲಿ ಗೋವಾದಲ್ಲಿ ರೇವ್‍ಗಳು, ಸನ್‍ಬರ್ನ್‍ಗಳು ಅಥವಾ ಇತರ ಪಾರ್ಟಿಗಳು ನಡೆಯುತ್ತವೆ, ಅಲ್ಲಿನ ಕರ್ಕಶ ಶಬ್ದವು ಕಿವುಡಗೊಳಿಸುವಂತಿರುತ್ತದೆ. ಇದರ ಮೇಲೆ ಸರಕಾರ ನಿಬರ್ಂಧ ಹೇರಬೇಕು ಎಂದು ಸಂಸದ ಫ್ರಾನ್ಸಿಸ್ ಸರ್ದಿನ್ ಆಗ್ರಹಿಸಿದರು.
ಇದನ್ನೂ ಓದಿ: ಮಹತ್ವಾಕಾಂಕ್ಷೆಯ ಕಳಸಾ ಬಂಡೂರಿ ವಿಸ್ತೃತ ಯೋಜನೆಗೆ ಕೇಂದ್ರ ಜಲ ಆಯೋಗ ಅನುಮತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.