ಯೋಧರಿಗೆ 3ಡಿ ಪ್ರಿಂಟೆಡ್ ವಸತಿ ಗೃಹ
ಅಹಮದಾಬಾದ್‌ನ ಕಂಟೋನ್ಮೆಂಟ್‌ನಲ್ಲಿ ನಿರ್ಮಾಣ
Team Udayavani, Dec 30, 2022, 6:30 AM IST
ಗುಜರಾತ್‌ನ ಅಹಮದಾಬಾದ್‌ನ ಕಂಟೋನ್ಮೆಂಟ್‌ನಲ್ಲಿ ಭಾರತೀಯ ಸೇನೆಯ ಮೊತ್ತ ಮೊದಲ 3ಡಿ-ಪ್ರಿಂಟೆಡ್ ವಸತಿ ಗೃಹಗಳು ಲೋಕಾರ್ಪಣೆಗೊಂಡಿವೆ. ಸಂಕೀರ್ಣ ಸಾಫ್ಟ್ವೇರ್ ಮತ್ತು ರೊಬೋಟಿಕ್ ಘಟಕವನ್ನು ಬಳಸಿಕೊಂಡು ಇವುಗಳನ್ನು ನಿರ್ಮಿಸಲಾಗಿದೆ.
ಎಲ್ಲಿ?: ಅಹಮದಾಬಾದ್ ಕಂಟೋನ್ಮೆಂಟ್
ಯಾರಿಂದ ನಿರ್ಮಾಣ?: ಮಿಲಿಟರಿ ಎಂಜಿನಿಯರಿಂಗ್ ಸರ್ವಿಸಸ್(ಎಂಇಎಸ್) ಮತ್ತು ಮೈಕಾಬ್ ಪ್ರೈ.ಲಿ.
ವಾಸದ ಘಟಕದ ವಿಸ್ತೀರ್ಣ: 71 ಚದರ ಮೀಟರ್
ಎಷ್ಟು ಮಹಡಿಯ ಮನೆ?: 2
ನಿರ್ಮಾಣಕ್ಕೆ ತಗುಲಿದ ಅವಧಿ : ಕೇವಲ 12 ವಾರಗಳು
ವೈಶಿಷ್ಟ?:
ಅತ್ಯಾಧುನಿಕ 3ಡಿ ಕ್ಷಿಪ್ರ ನಿರ್ಮಾಣ ತಂತ್ರಜ್ಞಾನ ಬಳಸಿಕೊಂಡು ಈ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಇವುಗಳ ಅಡಿಪಾಯ, ಗೋಡೆ, ಸ್ಲ್ಯಾಬ್‌ಗಳೆಲ್ಲ 3ಡಿ ಪ್ರಿಂಟೆಡ್ ಆಗಿವೆ. ಭೂಕಂಪವನ್ನು ತಾಳಿಕೊಳ್ಳುವಂತೆ ಹಾಗೂ ಪರಿಸರಸ್ನೇಹಿಯಾಗಿ ಇವುಗಳನ್ನು ನಿರ್ಮಿಸಲಾಗಿದೆ.
ಎಲ್‌ಎಸಿಯಲ್ಲೂ ನಿರ್ಮಾಣ?:
ಭಾರತೀಯ ಸೇನೆಯ ಘಟಕಗಳು ಈಗಾಗಲೇ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿಕೊಂಡು ನಿರ್ಮಾಣಗಳನ್ನು ಮಾಡುತ್ತಿದೆ. ಎಲ್ಲ ರೀತಿ ಭೂಪ್ರದೇಶಗಳಲ್ಲೂ ಇವುಗಳನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲೂ ಇವುಗಳು ತಲೆಎತ್ತಿವೆ ಎಂದು ಸೇನೆ ತಿಳಿಸಿದೆ. ಪೂರ್ವ ಲಡಾಖ್‌ನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಸಮೀಪ ಈ ತಂತ್ರಜ್ಞಾನ ಬಳಸಿಕೊಂಡು ಶಾಶ್ವತ ಕಟ್ಟಡಗಳನ್ನು ನಿರ್ಮಿಸುವ ಚಿಂತನೆ ಮಾಡಲಾಗಿದೆ. ಇದರಿಂದ ಸಮಯದ ಉಳಿತಾಯದ ಜೊತೆಗೆ, ರಕ್ಷಣಾ ಸನ್ನದ್ಧತೆಯೂ ಸುಧಾರಣೆ ಸಾಧ್ಯ ಎಂದೂ ರಕ್ಷಣಾ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಹಂತಕ
Ambulance ಇಂಜಿನ್ ಗೆ ಬೆಂಕಿ-ಆಕ್ಸಿಜನ್ ಸಿಲಿಂಡರ್ ಸ್ಫೋಟ;ಗರ್ಭಿಣಿ ಪ್ರಾಣಾಪಾಯದಿಂದ ಪಾರು!
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
By Election: ವಯನಾಡ್ ಉಪಸಮರ: ಶೇ.65ರಷ್ಟು ಮತದಾನ
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.