![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 29, 2022, 11:47 PM IST
ಸುಳ್ಯ: ಸುಳ್ಯದ ಖಾಸಗಿ ದಂತ ವೈದ್ಯಕೀಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಗಳು ಕೂಡ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಠಾಣೆಗೆ ಪ್ರತಿದೂರು ನೀಡಿದ್ದಾರೆ.
ಬೆಂಗಳೂರು ಮೂಲದ ಡಾ| ಪಲ್ಲವಿ ದೂರು ನೀಡಿದ ವಿದ್ಯಾರ್ಥಿನಿ. ಕಳೆದ 6 ತಿಂಗಳಿನಿಂದ ತಾನು ಕಲಿಯುತ್ತಿರುವ ಕಾಲೇಜಿನ ಸಹಪಾಠಿ ವೈದ್ಯರಾದ ಡಾ| ವಿಶಾಕ್, ಡಾ| ಐಶ್ವರ್ಯಾ ಆರ್., ಡಾ| ಅಲ#ಮೇರಿ ಮ್ಯಾಥ್ಯೂ, ಡಾ| ಡೆನಲ್ ಸಭಾ ಸ್ಟೀಲ್, ಡಾ| ರಿಷಿಕೇಶ್, ದಯಾ ಆನ್ ವರ್ಗೀಸ್ ಮತ್ತು ಇತರರು ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಡಿ. 21ರಂದು ರಾತ್ರಿ ಅಣ್ಣ ವಿಜಯ್ ಮತ್ತು ಸಹಪಾಠಿಯೋರ್ವರೊಂದಿಗಿದ್ದ ಸಂದರ್ಭ ನಮ್ಮನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಡಾ| ವಿಶಾಕ್ ಪಣಿಕ್ಕರ್ ಕೂಡ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಡಾ| ಪಲ್ಲವಿ, ಡಾ| ಹನೀಶ್, ಪಲ್ಲವಿ ಅಣ್ಣ ಮತ್ತು ಇನ್ನೋರ್ವ ಅಪರಿಚಿತ ವ್ಯಕ್ತಿಯ ಮೇಲೆ ದೂರು ನೀಡಿದ್ದಾರೆ. ಡಿ. 21ರಂದು ರಾತ್ರಿ 10.30ಕ್ಕೆ ಸ್ನೇಹಿತನನ್ನು ಪಿಜಿಗೆ ಡ್ರಾಪ್ ಮಾಡಲು ಹೋಗುತ್ತಿದ್ದಾಗ ಕಾರೊಂದು ಬೆನ್ನಟ್ಟಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಕಾರಿನಲ್ಲಿ ವೈದ್ಯರಾದ ಪಲ್ಲವಿ, ಅನೀಶ್, ಪಲ್ಲವಿಯ ಅಣ್ಣ ಹಾಗೂ ಅಪರಿಚಿತ ವ್ಯಕ್ತಿ ಓರ್ವರು ಇದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸ್ಥೆಯ ಸ್ಪಷ್ಟನೆ: ಡಾ| ಪಲ್ಲವಿ ದೂರಿರುವಂತೆ ಘಟನೆ ಸಾರ್ವಜನಿಕ ಸ್ಥಳದಲ್ಲಿ ನಡೆದಿದೆ. ಆರು ತಿಂಗಳಿನಿಂದ ರ್ಯಾಗಿಂಗ್ ನಡೆದಿರುತ್ತದೆ ಎಂಬ ದೂರಿಗೆ ಸಂಬಂಧಿಸಿದಂತೆ ಸಂಸ್ಥೆಗೆ ಯಾವುದೇ ರೀತಿಯ ದೂರು ಬಂದಿಲ್ಲ. ಡಿ. 21ರಂದು ರಾತ್ರಿ ಹಲ್ಲೆ ನಡೆಸಿ ರುವುದನ್ನು ಪ್ರಾಂಶುಪಾಲರಿಗೆ ತಿಳಿಸಿರುತ್ತಾರೆ. ಡಾ| ಪಲ್ಲವಿ ಹೇಳಿಕೊಂಡಂತೆ ನಮ್ಮ ಸಂಸ್ಥೆಯಲ್ಲಿ ಯಾವುದೇ ಪ್ರಾಧ್ಯಾಪಕರಾಗಲಿ, ವಿದ್ಯಾರ್ಥಿಗಳಾಗಲಿ ಜಾತಿ ನಿಂದನೆ ಮಾಡಿ ಹಿಂಸೆ ಕೊಟ್ಟಿರುವುದಿಲ್ಲ. ಇದೊಂದು ಸ್ವಯಂ ಹೇಳಿಕೆಯಾಗಿದ್ದು ಸತ್ಯಕ್ಕೆ ದೂರವಾಗಿದೆ ಎಂದು ಸಂಸ್ಥೆಯು ಸ್ಪಷ್ಟೀಕರಣ ನೀಡಿದೆ.
You seem to have an Ad Blocker on.
To continue reading, please turn it off or whitelist Udayavani.