![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 30, 2022, 6:55 AM IST
ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯು 2022-23ನೇ ಸಾಲಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಪೀಠೊಪಕರಣ, ಪಠ್ಯಪುಸ್ತಕ, ದೂರವಾಣಿ, ನೀರು, ಕಚೇರಿ ಹಾಗೂ ಇತರ ವೆಚ್ಚಕ್ಕಾಗಿ ಬಿಡುಗಡೆ ಮಾಡಿರುವ ಅನುದಾನವನ್ನು ಜ. 7ರೊಳಗೆ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.
ಈ ಮೊದಲು ಅನುದಾನ ಬಳಕೆ ಮಾಡಿಕೊಂಡು ಅದರ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಲು ಡಿ. 23ರ ವರೆಗೆ ಅವಕಾಶ ನೀಡಲಾಗಿತ್ತು. ಬಹುತೇಕ ಕಾಲೇಜುಗಳು ಇದನ್ನು ಬಳಕೆ ಮಾಡಿಕೊಳ್ಳದೇ ಇದ್ದುದರಿಂದ ಶಿಕ್ಷಣ ಇಲಾಖೆಯು ಇದೀಗ ಈ ಸೂಚನೆ ನೀಡಿದೆ.
ಒಂದು ವೇಳೆ ನಿಗದಿತ ಅವಧಿ ಯೊಳಗೆ ಬಳಕೆ ಮಾಡಿಕೊಳ್ಳದೇ ಇದ್ದರೆ ಅನುದಾನದ ಆವಶ್ಯಕತೆ ಇಲ್ಲವೆಂದು ತಿಳಿದು, ಬಿಡುಗಡೆ ಮಾಡಿರುವ ಅನುದಾನ
ವನ್ನು ಹಿಂಪಡೆಯಲಾಗುವುದು ಎಂದು ಕಾಲೇಜು ಮತ್ತು ಶಿಕ್ಷಣ ಇಲಾಖೆ ನಿರ್ದೇಶಕರು ಕಾಲೇಜು ಪ್ರಾಂಶುಪಾಲರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.