ದಿನಾಂತ್ಯಕ್ಕೆ ಕಹಿ; ವರ್ಷದಲ್ಲಿ ಸಿಹಿ: ಹಲವು ಬಾರಿ ಏರಿಳಿಕೆ ಕಂಡಿದ್ದ ಸೂಚ್ಯಂಕ
Team Udayavani, Dec 31, 2022, 7:10 AM IST
ಮುಂಬಯಿ: ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಪ್ರಸಕ್ತ ವರ್ಷದ ಕೊನೆಯ ವಹಿವಾಟು ಶುಕ್ರವಾರ ಮುಕ್ತಾಯವಾಗಿದೆ. ದಿನದ ವಹಿ ವಾಟು 293.14 ಪಾಯಿಂಟ್ಸ್ನಷ್ಟು ಕುಸಿತ ಕಂಡು 60, 840.74ರಲ್ಲಿ ಸೂಚ್ಯಂಕ ಮುಕ್ತಾಯವಾಗಿದೆ.
ಮಧ್ಯಾಂತರದಲ್ಲಿ 258.8 ಪಾಯಿಂಟ್ಸ್ ವರೆಗೆ ಏರಿಕೆಯಾಗಿ, 61, 392.68ರ ವರೆಗೆ ಜಿಗಿದಿತ್ತು. ಆದರೆ ಐರೋಪ್ಯ ಒಕ್ಕೂಟದ ಷೇರು ಪೇಟೆಯಲ್ಲಿ ನಿರಾಶಾದಾಯಕ ವಹಿವಾಟು ಕಂಡುಬಂದಿತ್ತು. ಹೀಗಾಗಿ, ಅದರ ಪ್ರಭಾವ ಬಾಂಬೆ ಷೇರುಪೇಟೆಯಲ್ಲಿ ಕೂಡ ವ್ಯಕ್ತವಾಗಿದೆ. ಆದರೆ ಪ್ರಸಕ್ತ ವರ್ಷಕ್ಕೆ ಹೋಲಿಕೆ ಮಾಡಿದರೆ ಬಿಎಸ್ಇ ಸೂಚ್ಯಂಕ 2,586.92 ಪಾಯಿಂಟ್ಸ್ ಏರಿಕೆಯಾಗಿದೆ. ಇನ್ನು ನಿಫ್ಟಿ ದಿನದ ಸೂಚ್ಯಂಕ 85.70 ಪಾಯಿಂಟ್ಸ್ ಇಳಿಕೆಯಾಗಿ 18, 105.30 ರಲ್ಲಿ ಮುಕ್ತಾಯವಾಯಿತು. ವರ್ಷದ ಲೆಕ್ಕಾಚಾ ರಕ್ಕೆ ಬಂದರೆ ನಿಫ್ಟಿ 751.25 ಪಾಯಿಂಟ್ಸ್ ಜಿಗಿದಿದೆ. ಡಿ. 1ರಂದು ಸೂಚ್ಯಂಕ 63,583.07 ಪಾಯಿಂಟ್ಸ್ವರೆಗೆ ಗರಿಷ್ಠ ಏರಿಕೆಯಾಗಿತ್ತು. ಜೂ. 17ರಂದು ವರ್ಷದ ಕನಿಷ್ಠವೆಂದರೆ 50, 921.22 ಪಾಯಿಂಟ್ಸ್ಗೆ ಕುಸಿದಿತ್ತು.
16.38 ಲಕ್ಷ ಕೋಟಿ ಲಾಭ: ಹಲವು ಬಾರಿ ಸೂಚ್ಯಂಕ ಏರಿಳಿಕೆ ಕಂಡಿ ದ್ದರೂ ಬಿಎಸ್ಇ ಹೂಡಿಕೆದಾ ರರಿಗೆ ಪ್ರಸಕ್ತ ವರ್ಷ 16. 38 ಲಕ್ಷ ಕೋಟಿ ರೂ. ಲಾಭವಾ ಗಿದೆ. ಹೂಡಿಕೆದಾರ ರಲ್ಲಿ ವಿಶ್ವಾಸ ವೃದ್ಧಿ ಯಾದ ಕಾರಣ ಈ ಬೆಳವಣಿಗೆ ಉಂಟಾಗಿದೆ. ಫೆ. 24ರಂದು ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ಆರಂಭವಾದ ದಿನ ಬಿಎಸ್ಇ ಸೂಚ್ಯಂಕ 2,850 ಪಾಯಿಂಟ್ಸ್ ಕುಸಿದಿತ್ತು.
ಏರಿಕೆ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 14 ಪೈಸೆ ಏರಿಕೆಯಾಗಿದೆ. ಹೀಗಾಗಿ, ದಿನಾಂತ್ಯಕ್ಕೆ 82.73 ರೂ.ಗೆ ಮುಕ್ತಾಯ ವಾಗಿದೆ. ಒಟ್ಟಾರೆ ಹೇಳುವುದಿದ್ದರೆ 2022ರಲ್ಲಿ ಡಾಲರ್ ಎದುರು ರೂಪಾಯಿ ಶೇ.11.36 ಕುಸಿತ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ
Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್ ರಿಜಿಜು
Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ
EVM Issue: ಇವಿಎಂಗೂ ಮುನ್ನ ರಾಹುಲ್ರನ್ನು ಬದಲಿಸಿ ಕಾಂಗ್ರೆಸ್ಗೆ ಬಿಜೆಪಿ ಟಾಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.