ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಕಂಪೆನಿಯಿಂದ ಸಾವಿರ ಕೋಟಿಗೂ ಅಧಿಕ ಹೂಡಿಕೆ
Team Udayavani, Dec 31, 2022, 6:25 AM IST
ಉಡುಪಿ : ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳ ಸಹಿತ 15 ಕಂಪೆನಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿ ರೂ. ಗಳಿಗೂ ಅಧಿಕ ಬಂಡ ವಾಳ ಹೂಡಿಕೆ ಮಾಡಲು ಮುಂದಾಗಿವೆ.
ಇದರಿಂದ ಸುಮಾರು 6 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಲಭಿಸುವ ನಿರೀಕ್ಷೆಯಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕೆಲವು ತೈಲೋತ್ಪನ್ನ ಕಂಪೆನಿಗಳು ಹೂಡಿಕೆ ಮಾಡಿವೆ. ಈಗ ಸಣ್ಣ ಮತ್ತು ದೊಡ್ಡ ಪ್ರಮಾಣದ ಕೈಗಾ ರಿಕೆಗಳು ಆಸಕ್ತಿ ತಾಳಿವೆ.
2019ರಿಂದ ಕರಾವಳಿ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪನೆ ಸಂಬಂಧ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ, ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನೆ ಸಮಿತಿಯು 16 ಯೋಜನೆ ಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ 5 ಉಡುಪಿ, 15 ದ.ಕ. ಜಿಲ್ಲೆ ಹಾಗೂ 1 ಉತ್ತರ ಕನ್ನಡ ಜಿಲ್ಲೆಗೆ ಸೇರಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಕೈಗಾರಿಕೆ ಪ್ರದೇಶ, ಬೈಕಂಪಾಡಿ ಕೈಗಾರಿಕೆ ಪ್ರದೇಶ, ಗಂಜಿಮಠ ಕೈಗಾರಿಕೆ ಪ್ರದೇಶ, ಇಪಿಐಪಿ ಕೈಗಾರಿಕೆ ಪ್ರದೇಶ, ಎಂಎಸ್ಇಝಡ್ ಪ್ರದೇಶಗಳಲ್ಲಿ ಕೆಲವು ಸಂಸ್ಥೆಗಳು ಹೂಡಿಕೆಗೆ ಮನಸ್ಸು ಮಾಡಿದ್ದರೆ, ಇನ್ನು ಕೆಲವು ಕೈಗಾರಿಕೆ ಪ್ರದೇಶ ಹೊರತುಪಡಿಸಿ ಬೇರೆ ಪ್ರದೇಶದಲ್ಲೂ ಹೂಡಿಕೆಗೆ ಮುಂದಾಗಿವೆ.
ಉಡುಪಿಯ ನಂದಿಕೂರು ಕೈಗಾರಿಕೆ ಪ್ರದೇಶ 3, ನಡ್ಸಾಲ್ ನಲ್ಲಿ 1 ಹಾಗೂ ಕಾರ್ಕಳ ಕೈಗಾರಿಕೆ ಪ್ರದೇಶದಲ್ಲಿ ಒಂದು ಕಂಪೆನಿ ಹೂಡಿಕೆಗೆ ನಿರ್ಧರಿಸಿದೆ.
ದ.ಕ.ದಲ್ಲಿ 800 ಕೋ.ರೂ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪೆನಿಯು 495 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಸುಮಾರು 4,010 ಉದ್ಯೋಗಾವಕಾಶ ಕಲ್ಪಿಸುವ ಸಾಧ್ಯತೆಗಳಿವೆ. ಇನ್ನು ಬಿಗ್ಬ್ಯಾಗ್ ಕಂಪೆನಿಯು 70 ಕೋಟಿ ರೂಪಾಯಿ ಹೂಡಿಕೆ ಮಾಡಿ, ಒಂದು ಸಾವಿರ ಜನರಿಗೆ ಉದ್ಯೋಗ ನೀಡಲಿದೆ. ಫ್ಯಾಬ್ ಇಕೊ ಕ್ಲೀನ್ ಎನರ್ಜಿ ವೆಂಚರ್ ಕಂಪೆನಿಯ ವತಿಯಿಂದ 20 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗುತ್ತಿದ್ದು, 155 ಮಂದಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ. ಫಿನ್ಫವರ್ ಏರೋಕಾನ್ ಸಿಸ್ಟಮ್ಸ್ ಕಂಪೆನಿಯಿಂದ 17.35 ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿಕೆಯಾಗಲಿದ್ದು, 120 ಮಂದಿಗೆ ಉದ್ಯೋಗ ಸಿಗಲಿದೆ. ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಉದ್ಯಮ ಸಂಸ್ಥೆಗಳು ಸುಮಾರು 805.99 ಕೋ.ರೂ. ಹೂಡಿಕೆ ಮಾಡಿ 5,786 ಮಂದಿಗೆ ಉದ್ಯೋಗ ಒದಗಿಸಲಿವೆ.
ಉಡುಪಿಯಲ್ಲೆಷ್ಟು?
ಉಡುಪಿ ಜಿಲ್ಲೆಯಲ್ಲಿ ಎಂ11 ಇಂಡಸ್ಟ್ರೀಸ್ 96 ಕೋ.ರೂ. ಹೂಡಿಕೆ ಮಾಡಿ 100 ಮಂದಿಗೆ ಉದ್ಯೋಗಾವಕಾಶ, ಶ್ರೀಚಕ್ರ ಕಂಟೈನರ್ 18.95 ಕೋ.ರೂ. ಹೂಡಿಕೆ ಮಾಡಿ 102 ಮಂದಿಗೆ ಉದ್ಯೋಗ -ಹೀಗೆ 5 ಸಂಸ್ಥೆಗಳಿಂದ ಸುಮಾರು 208.23 ಕೋ.ರೂ. ಹೂಡಿಕೆ ಮತ್ತು 359 ಮಂದಿಗೆ ಉದ್ಯೋಗ ಸಿಗಲಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಜಿಲ್ಲೆಗಳಲ್ಲಿ 15 ಸಂಸ್ಥೆಗಳಿಂದ 1,014.22 ಕೋ.ರೂ. ಹೂಡಿಕೆಯಾಗಲಿದ್ದು, 6,145 ಮಂದಿಗೆ ಉದ್ಯೋಗ ಸಿಗಲಿದೆ. ಇದರಲ್ಲಿ ಕೆಲವು ಸಂಸ್ಥೆಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಆಕ್ಸಿಜನ್ ಆಧಾರಿತ ಕೈಗಾರಿಕೆಗಳು ಕರಾವಳಿ ಭಾಗಕ್ಕೆ ಬರಲಿವೆ ಎನ್ನಲಾಗಿತ್ತು. ಇದಕ್ಕೆ ಪೂರಕವಾಗಿ ಜಮೀನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಹೂಡಿಕೆಯಿಂದ ಸ್ಥಳೀಯವಾಗಿ ಒಂದಷ್ಟು ಉದ್ಯೋಗ ಸೃಷ್ಟಿಯಾಗಲಿದೆ.
-ನಾಗರಾಜ ವಿ. ನಾಯಕ್, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕೆ ಕೇಂದ್ರ, ಉಡುಪಿ
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.