ತೀರ್ಥಹಳ್ಳಿ: ಕುರುವಳ್ಳಿ ಬಳಿ ಆನೆ ಹಾವಳಿ
Team Udayavani, Dec 31, 2022, 9:59 AM IST
ತೀರ್ಥಹಳ್ಳಿ: ಪಟ್ಟಣದ ವಾರ್ಡ್ 14ರ ಕುರುವಳ್ಳಿಯಲ್ಲಿ ಡಿ.31 ರಂದು ಬೆಳಗ್ಗಿನ ಸಮಯ ಸುಮಾರು 3.30 ಗಂಟೆಗೆ ಕಾಡಾನೆಯೊಂದು ಸ್ಥಳೀಯ ನಿವಾಸಿ ಒಬ್ಬರಿಗೆ ಕಾಣಿಸಿಕೊಂಡಿದ್ದು ಆನೆಯ ಹೆಜ್ಜೆ ಗುರುತು ಕೂಡ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆ ಶೇಡ್ಗಾರ್, ಕಟ್ಟೆಹಕ್ಲು ಸಮೀಪ ಕಾಣಿಸಿಕೊಂಡಿತ್ತು ಎಂದು ಹೇಳಲಾಗುತ್ತಿದ್ದೂ ಅದೇ ಆನೆ ಈ ಕಡೆ ಬಂದಿರಬಹುದು ಎಂದು ಊಹಿಸಲಾಗುತ್ತಿದೆ.
ರಾಷ್ಟಿಯ ಹೆದ್ದಾರಿ 169 ರ ತೀರ್ಥಹಳ್ಳಿ-ಕೊಪ್ಪ- ಶೃಂಗೇರಿ ಮಾರ್ಗದಲ್ಲಿರುವ ಕುರುವಳ್ಳಿ ಮುಖ್ಯ ರಸ್ತೆಯಲ್ಲಿ ಓಡಾಡಿ ಅಂಗಡಿ ಒಂದರ ನೇಮ್ ಬೋರ್ಡ್ ಪುಡಿ ಪುಡಿ ಮಾಡಿ ಬುಕ್ಲಾಪುರ ಸಮೀಪ ತುಂಗಾ ನದಿ ದಡಕ್ಕೆ ತಲುಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಸ್ಥಳೀಯರು ಸೇರಿ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯ ಹುಡುಕಾಟ ನಡೆಸುತಿದ್ದಾರೆ.
ಕಾಡಿನಲ್ಲಿ ಇರಬೇಕಾದ ಕಾಡಿನ ರಾಜ ಊರಿಗೆ ಬಂದಿರುವುದು ಜನರಲ್ಲಿ, ಸ್ಥಳೀಯ ನಿವಾಸಿಗಳಲ್ಲಿ ಆತಂಕ ವ್ಯಕ್ತವಾಗುತ್ತಿದ್ದರೆ ಇತ್ತ ಹೊಸ ವರ್ಷ ಆಚರಣೆ ಮಾಡಲು ಬಂದಿರಬಹುದು ಎಂದು ಸ್ಥಳೀಯರು ತಮಾಷೆಯಾಗಿಯೂ ಮಾತನಾಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.