ಮಾತೃಭಾಷೆ ಸ್ವಾಭಿಮಾನ ಬೆಳೆಸಿ; ಈಶ್ವರ ಸಂಪಗಾವಿ

ನಾಡು-ನುಡಿ ವಿಷಯದಲ್ಲಿ ಯಾವತ್ತೂ ಬದ್ಧತೆ ತೋರುತ್ತಿರುವೆ

Team Udayavani, Dec 31, 2022, 1:43 PM IST

ಮಾತೃಭಾಷೆ ಸ್ವಾಭಿಮಾನ ಬೆಳೆಸಿ; ಈಶ್ವರ ಸಂಪಗಾವಿ

ಖಾನಾಪುರ: ಗಡಿಭಾಗದ ಕನ್ನಡೇತರರಿಗೂ ಕನ್ನಡ ಭಾಷೆ-ಅನ್ನದ ಭಾಷೆ ಎಂಬ ಸತ್ಯವನ್ನು ಮನವರಿಕೆ ಮಾಡುವ ಕೆಲಸವಾಗಬೇಕು ಎಂದು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಈಶ್ವರ ಸಂಪಗಾವಿ ಹೇಳಿದರು. ಅವರು ಪಟ್ಟಣದ ಶನಯಾ ಪಾಮ್ಸ್‌ ಕಲ್ಯಾಣ ಮಂಟಪದಲ್ಲಿ ನಡೆದ 8ನೇ ತಾಲೂಕಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಗಡಿ ಭಾಗದಲ್ಲಿ ಸಾಹಿತ್ಯ ಪರಸ್ಪರ ವಿನಿಮಯಗೊಳ್ಳುವುದರ ಮೂಲಕ ಭಾವನೆಗಳನ್ನು ಬೆಸೆಯುವ ಕಾರ್ಯವಾಗಬೇಕು. ಅನ್ಯ ಭಾಷೆ ವ್ಯಾಮೋಹದಲ್ಲಿ ಮಾತೃಭಾಷೆ ಕೊಚ್ಚಿ ಹೋಗದಂತೆ ಮಕ್ಕಳಲ್ಲಿ ಸ್ವಾಭಿಮಾನ ಬೆಳೆಸಬೇಕು. ತಾಲೂಕಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇರುವ ಕುರಿತು ಕಳವಳ ವ್ಯಕ್ತಪಡಿಸಿದರಲ್ಲದೆ ಇದಕ್ಕೆ ಕ್ರಿಯಾಯೋಜನೆ ಜಾರಿಗೊಳ್ಳ ಬೇಕು ಎಂದು ಆಗ್ರಹಿಸಿದರು. ತಾಲೂಕು ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಿರಿ ಹೊಂದಿರುವ
ವಿಶಿಷ್ಟ ಭೂ ಪ್ರದೇಶವಾಗಿದ್ದು ದೇಶದ ಬೆನ್ನೆಲುಬಾದ ಕೃಷಿ ಕ್ಷೇತ್ರವನ್ನು ಉದ್ಯೋಗವಾಗಿ ಪರಿಗಣಿಸ ಬೇಕು.

ಯಾವ ಕಾರಣಕ್ಕೂ ಗಡಿ ಭಾಗದ ಶಾಲೆಗಳನ್ನು ಮುಚ್ಚಬಾರದು. ಯುವಕರಿಗೆ ಉದ್ಯೋಗಕ್ಕಾಗಿ ಉದ್ಯಮಗಳ ಸ್ಥಾಪನೆಯಾಗಬೇಕು. ಹಲಸಿಯಲ್ಲಿ ಕದಂಬೋತ್ಸವಕ್ಕೆ ಮತ್ತೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕಿ ಡಾ| ಅಂಜಲಿ ನಿಂಬಾಳಕರ ಮಾತನಾಡಿ, ಭಾಷೆ, ಜಾತಿ-ಧರ್ಮಗಳ ವ್ಯತ್ಯಾಸ ಮಾಡದೆ ಎಲ್ಲರು ಸೌಹಾರ್ದಯುತವಾಗಿ ಸಾಮರಸ್ಯದಿಂದ ಬದುಕಬೇಕು. ತಾವು ಮಹಾರಾಷ್ಟ್ರದಲ್ಲಿ ಹುಟ್ಟಿದರೂ ಇದು ಕರ್ಮಭೂಮಿಯಾಗಿದ್ದು ನಾಡು-ನುಡಿ ವಿಷಯದಲ್ಲಿ ಯಾವತ್ತೂ ಬದ್ಧತೆ ತೋರುತ್ತಿರುವೆ ಎಂದರು. ಕಳೆದ 60 ವರ್ಷಗಳಿಂದ ಇಲ್ಲಿಯ ನಾಯಕರು ರಾಜ್ಯೋತ್ಸವ, ಕನ್ನಡ ಸಮಾರಂಭಗಳಲ್ಲಿ ಭಾಗವಹಿಸಲು ಹಿಂಜಿರಿಯುತ್ತ ಬಂದಿದ್ಧರು. ತಾವು ಈ ನಾಡಭಾಷೆಗೆ ಗೌರವ ಕೊಡುವುದರ ಮೂಲಕ ಹೊಸ ನಾಂದಿ ಹಾಡಿರುವೆ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಇಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ದೊರಕಿದ ನಿವೇಶನದಲ್ಲಿ ಶೀಘ್ರವಾಗಿ ಭವನ ನಿರ್ಮಾಣ ಮಾಡಲಾಗುವುದು ಎಂದರು. ಗುರುದೇವಿ ಹುಲೆಪ್ಪನವರಮಠ,ಉದ್ಯಮಿ ನಾಸೀರ ಬಾಗವಾನ, ಪರಿಷತ್ತ ಸದಸ್ಯ ನಾಗರಾಜ ಯಾದವ ಮಾತನಾಡಿದರು.

ವೇದಿಕೆ ಮೇಲೆ ಬಿಜೆಪಿ ಧುರೀಣ ವಿಠಲ ಹಲಗೇಕರ, ಧನಶ್ರೀ ಸರದೇಸಾಯಿ, ಆರ್‌.ಡಿ.ಹಂಜಿ, ಮೇಘಾ ಕುಂದರಗಿ, ಪ್ರಾಚಾರ್ಯ ದಿಲೀಪ ಜವಳಕರ, ದಶರಥ ಬನೋಶಿ, ರೇವಣಸಿದ್ದಯ್ನಾ ಹಿರೇಮಠ, ರವಿಂದ್ರ ಕಾಡಗಿ ಮುಂತಾದವರು ಉಪಸ್ಥಿತರಿದ್ದರು. ತಾಲೂಕು ಕಸಾಪ ಅಧ್ಯಕ್ಷ ಬಸವಪ್ರಭು ಹಿರೇಮಠ ಸ್ವಾಗತಿಸಿದರು.

ವಿವೇಕ ಕುರಗುಂದ ಮತ್ತು ಅಪ್ಪಯ್ನಾ ಕೊಡೋಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಭುದೇವ ಹಿರೇಮಠ ವಂದಿಸಿದರು. ಸಮ್ಮೇಳನ ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಧ್ವಜಾರೋಹಣ, ಬಸವೇಶ್ವರ ವೃತ್ತದಿಂದ ವೇದಿಕೆವರೆಗೆ ಸಮ್ಮೇಳನ ಸರ್ವಾಧ್ಯಕ್ಷ ಈಶ್ವರ ಸಂಪಗಾವಿ ದಂಪತಿಗಳ ಮೆರವಣಿಗೆ ನಡೆಯಿತು.

ಟಾಪ್ ನ್ಯೂಸ್

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ

Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ

Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!

Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!

1-belagavi

Belagavi: ಆಟೋ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆ

ಅಕ್ರಮ ಆಸ್ತಿ ಸಂಪಾದನೆ ಆರೋಪ: ಬೆಳಗಾವಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಲೋಕಾಯುಕ್ತ ದಾಳಿ

Belagavi: ಅಕ್ರಮ ಆಸ್ತಿ ಸಂಪಾದನೆ ಆರೋಪ… ಬೆಳಗಾವಿ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

4

Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು

ud

Puttur: ಮನೆ ಅಂಗಲದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಕಳವು

byndoor

Siddapura: ಲಾರಿ ಚಾಲನೆಯಲ್ಲಿಯೇ ಹೃದಯಾಘಾತ; ಚಾಲಕ ಸಾವು

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

byndoor

Udupi: ಬೈಕ್‌ ಢಿಕ್ಕಿ; ಸೈಕಲ್‌ ಸವಾರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.