ಕಳಸಾ-ಬಂಡೂರಿ; ರಾಜಕೀಯ ಉದ್ದೇಶದಿಂದ ಇಲ್ಲ ಸಲ್ಲದ ಆರೋಪ: ಪ್ರಹ್ಲಾದ್ ಜೋಶಿ
ಎಚ್.ಕೆ. ಪಾಟೀಲ್ ಮೂರ್ಖತನದಿಂದ ಈ ರೀತಿ ಹೇಳಿದ್ದಾರೋ ಅರ್ಥವಾಗುತ್ತಿಲ್ಲ...
Team Udayavani, Dec 31, 2022, 7:57 PM IST
ಹುಬ್ಬಳ್ಳಿ: ಮಹಾದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ವಿಸ್ತೃತ ಯೋಜನಾ ವರದಿಯನ್ನು( ಡಿಪಿಆರ್) ಕೇಂದ್ರ ಜಲ ಆಯೋಗ ದಿನಾಂಕ ನಿಗದಿಸಿ ಅನುಮತಿ ನೀಡಿದೆ. ಆದರೆ ಕಾಂಗ್ರೆಸ್ ರಾಜಕೀಯ ಉದ್ದೇಶದಿಂದ ಇಲ್ಲ ಸಲ್ಲದ ಆರೋಪಕ್ಕೆ ಮುಂದಾಗಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು.
ಶನಿವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜ್ಯಕ್ಕೆ ಈ ಕುರಿತು ಪತ್ರ ಬರೆದಿದ್ದು, ಅದರಲ್ಲಿ ದಿನಾಂಕವಿರುವುದು ಜಗಜಾಹೀರವಾಗಿದೆ. ಆದರೆ ಕಾಂಗ್ರೆಸ್ ನವರಿಗೆ ದಿನಾಂಕವಿರುವುದನ್ನು ಸರಿಯಾಗಿ ನೋಡಲು ಆಗಿಲ್ಲ ಎಂದು ಕುಟುಕಿದರು.
ಮಾಜಿ ಸಚಿವ ಎಚ್.ಕೆ. ಪಾಟೀಲ್ ರಾಜಕೀಯ ಲಾಭಕ್ಕಾಗಿ, ಇಲ್ಲವೇ ಮೂರ್ಖತನದಿಂದ ಈ ರೀತಿ ಹೇಳಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಡಿ. 29ಕ್ಕೆ ಇದರ ಆದೇಶವಾಗಿದೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಒಂದು ಹನಿ ನೀರು ನೀಡಲ್ಲ ಎಂದಿದ್ದರು. ಬಳಿಕ ಬಿಜೆಪಿ ನಿಯೋಗ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿ ಮಹಾದಾಯಿ ಯೋಜನೆಯನ್ನು ನ್ಯಾಯಾಧೀಕರಣಕ್ಕೆ ಕೊಡುವ ಮೊದಲು 7.5 ಟಿಎಂಸಿ ಅಡಿ ಇಲ್ಲವೇ 3.5 ಟಿಎಂಸಿ ಅಡಿ ನೀರಿಗೆ ಅನುಮತಿ ನೀಡಲು ಮನವಿ ಮಾಡಿದ್ದೇವು. ನಂತರ ನಮ್ಮ ಹೋರಾಟದ ಫಲವಾಗಿ ನ್ಯಾಯಾಧೀಕರಣ ಆದೇಶದ ಬಳಿಕ ಗೆಜೆಟ್ ಮಾಡಿಸಲಾಯಿತು. ಈಗ ಸಿದ್ದರಾಮಯ್ಯ ಇಷ್ಟು ವರ್ಷ ಬಿಟ್ಟು ಈಗೇಕೆ ಡಿಪಿಆರ್ ಅನುಮತಿ ತಂದರು ಎನ್ನುವ ಅವರು ಕಳೆದ 55 ವರ್ಷಗಳಿಂದ ಕೇಂದ್ರದಿಂದ ಹಿಡಿದು ಜಿಲ್ಲಾ ಪಂಚಾಯತಿ ವರೆಗೂ ಅಧಿಕಾರದಲ್ಲಿದ್ದರು ಏಕೆ ಈ ಕಾರ್ಯ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ನೈಋತ್ಯ ರೈಲ್ವೆ ವಲಯದಲ್ಲೂ ಇಬ್ಬಗೆಯ ನೀತಿ ಅನುಸರಿಸಿದ್ದರು. ಅದೇ ರೀತಿ ಈಗ ಕಳಸಾ-ಬಂಡೂರಿ ವಿಚಾರದಲ್ಲೂ ಮಾಡಿದರು ಎಂದರು.
ಡಿಪಿಆರ್ ಅನುಮತಿ ದೊರೆತ ಬಳಿಕ ಅರಣ್ಯ ಇಲಾಖೆಯ ಅನುಮೋದನೆ ಸಿಗಲಿದೆ. ಕಳಸಾ ಹಾಗೂ ಬಂಡೂರಿ ಬೇರೆ ಬೇರೆ ಯೋಜನೆಯಾಗಿದ್ದು, ತಜ್ಞರು ಹಾಗೂ ಅಧಿಕಾರಗಳೊಂದಿಗೆ ಚರ್ಚಿಸಿ ಯೋಜನೆ ಅನುಷ್ಠಾನಕ್ಕೆ ಸುಮಾರು 65 ಎಕರೆ ಭೂಮಿಬೇಕಾಗುತ್ತದೆ. ಹೀಗಾಗಿ ಕರ್ನಾಟಕದಲ್ಲಿ ಅರಣ್ಯ ಇಲಾಖೆಯ ಅನುಮೋದನೆ ದೊರೆಯಲಿದೆ. ಆದಷ್ಟು ಬೇಗ ಅನುಮತಿ ಪಡೆದು ಎರಡು ತಿಂಗಳಲ್ಲಿ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ಮಾಡುತ್ತೇವೆ. ಕುಡಿಯುವ ನೀರಿಗಾಗಿ ಪರಿಸರ ಇಲಾಖೆಯ ಅನುಮತಿ ಅಗತ್ಯವಿಲ್ಲ. ಕ್ಷುಲ್ಲಕ ತನಕ್ಕೂ ಹಾಗೂ ಬಾಲಿಶ್ ತನಕ್ಕೂ ಒಂದು ಮೀತಿ ಇರಬೇಕು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಮಹಾದಾಯಿ ಯೋಜನೆ ಕುರಿತು ಗೋವಾದ 40 ಶಾಸಕರು ರಾಜೀನಾಮೆ ನೀಡುವ ಕುರಿತು ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ನಮ್ಮ ನ್ಯಾಯಯುತವಾದ ಬೇಡಿಕೆಗೆ ಡಿಪಿಆರ್ ಅನುಮತಿ ದೊರೆತಿದೆ ಎಂದರು.
ಕುಟುಂಬ ಪ್ರೇರಿತ ಭ್ರಷ್ಟ ಪಕ್ಷ
ಬಿಜೆಪಿ ಸುಳ್ಳಿನ ಎಟಿಎಂ ಎನ್ನುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರದು ಯಾವ ಎಟಿಎಂ? ಅವರು ವಚನ ಭ್ರಷ್ಟರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅವರ ಕುಟುಂಬ ಸಮಾಜ, ದೇಶಕ್ಕಾಗಿ ತ್ಯಾಗ ಮಾಡುವವರಲ್ಲ. ಪರಸ್ಪರ ಒಬ್ಬರಿಗೊಬ್ಬರು ಅವರ ಇಡೀ ಕುಟುಂಬದ ಬೆಳವಣಿಗೆ ಬಗ್ಗೆ ಚಿಂತೆ ಮಾಡುವವರು. ಪಂಚ ರತ್ನ ಯಾತ್ರೆಯಲ್ಲಿಯೂ ಅವರದೇ ಕುಟುಂಬದವರಿದ್ದಾರೆ. ದೇವೇಗೌಡರ ಮರಿ ಮೊಮ್ಮಗನಿಗೆ ರಾಜಕೀಯ ಬುದ್ಧಿ ಬಂದರೆ ಅವನನ್ನು ರಾಜಕೀಯಕ್ಕೆ ಕರೆತರುತ್ತಾರೆ. ಅಂದೊಂದು ಕುಟುಂಬ ಪ್ರೇರಿತ ಭ್ರಷ್ಟ ಪಕ್ಷ. ಅಂಥವರಿಗೆ ಬಗ್ಗೆ ಏನು ಪ್ರತಿಕ್ರಿಯಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.